ಪುಟ:Mrutyunjaya.pdf/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ಆರಸನೆ೦ದ

    "ಸಂತೋಷ. ಈ ಸೆಡ್ ಉತ್ಸವದ ವಿಶೇಷ ಕ್ರಿಯೆಗೆ ಅಮಾತ್ಯರು ಸಾಕ್ಷಿಯಾಗಲಿ.”

"ನಿ೦ತಿರೇನೆ.”

    ಪೆರೋ ಸಂಜ್ಞೆ ಮಾಡಿದೊಡನೆ ಕ್ಷೌರಿಕನ ಕತ್ತರಿ ಕೆಲಸ ಮಾಡಲು ಆರಂಭಿಸಿತು. ಬಂಗಾರದ ತಟ್ಟೆಯೊಡನೆ ಸಿದ್ಧಳಾಗಿದ್ದ ದಾಸಿ ಹಿಡಿಹಿಡಿಯಾಗಿ ಕೆಳಗೆ ಬೀಳತೊಡಗಿದ ಅರಸನ ನೀಳಕೂದಲನ್ನು ತನ್ನ ತಟ್ಟೆಯಲ್ಲಿ ಹಿಡಿದಳು. ಪರಿಣತ ನಾಪಿತನ ಕರಕೌಶಲದಿ೦ದ ಸ್ವಲ್ಪ ಹೊತ್ತಿನಲ್ಲೇ ಪೆರೋನ ತಲೆ ನುಣ್ಣ ಗಾಯಿತು. ಕತ್ತರಿಯನ್ನು ಕೆಳಗಿರಿಸಿ ನಾಪಿತ ಕ್ಷೌರಕತ್ತಿಯನ್ನು ಕೈಗೆತ್ತಿ ಕೊಂಡ. ಸ್ವರೂಪದರ್ಶಕದಲ್ಲಿ ತನ್ನ ಮುಖ ನೋಡಿದ ಪೆರೋಗೆ 'ನನ್ನ ತಲೆ ಎಷ್ಟು ಚಿಕ್ಕದು; ಎನಿಸಿ ಕಸಿವಿಸಿಯಾಯಿತು.ಸ್ವರೂಪದರ್ಶಕವನ್ನು ಪಕ್ಕಕ್ಕೆ ಸರಿಸುವ೦ತೆ ಆತ ಅ೦ಗೈ ಆಡಿಸಿದ.... 
    ಅರಸನನ್ನು ದಾಸಿಯರು ಸ್ನಾನದ ಮನೆಗೆ ಕರೆದೊಯ್ದೊಡನೆ, ಆಲಂಕೃತ ಪಲ್ಲಕಿಗಳನ್ನು ನೋಡಲು ಅಮಾತ್ಯ ಹೊರಹೋದ.
   ರಾಜಕುಮಾರನನ್ನೂ ರಾಜಕುವರಿಯರನ್ನೂ ಎಚ್ಚರಿಸಿದರು.
   ಮಹಾರಾಣಿಯ ಸಮ್ಮುಖದಲ್ಲಿ ನಾಪಿತ ಒಂದು ಕ್ಷಣ ವಿವಂಚನೆಗೆ ಗುರಿ ಯಾದ. ಸಾಕಷ್ಟು ಸೊಂಪಾಗಿದ್ದ ತಲೆಗೂದಲನ್ನು ಕತ್ತರಿಸಬೇಕಲ್ಲ....ಆದರೆ ಉದುರುವ ಕೂದಲು, ನೆರೆಗೂದಲು ಹಾವಳಿ ನಡೆಸಿದ್ದುವು. ಕೇಶಮುಂಡ ನಕ್ಕೆ ಇದೂ ಒ೦ದು ಕಾರಣವಿರಬಹುದು ಎನಿಸಿತು ಆತನಿಗೆ.
   ನೆಫರ್ ಟೀಮ್ ಒಬ್ಬಳು ದಾಸಿಗೆ ಅ೦ದಳು:
"ಆಸ್ಸೀರಿಯದಿ೦ದ ತರಿಸಿದ ಕೇಶಕವಚ ತಗೊ೦ಡು ಬಾ."
   ನಾಪಿತನಿಗೆ ತೋರಿಸಲು.ನೋಡಿ ಆತ ಅಪ್ರತಿಭನಾದ.ಅಷ್ಟು ಕೂದಲು ಒ೦ದೇ ಹೆಣ್ಣಿನದಲ್ಲ. ಇಬ್ಬರು ಮೂವರ ತಲೆಗಳನಾದರೂ ಬೋಳಿಸಿ ಅದನ್ನು ಮಾಡಿರಬೇಕು_ಅನಿಸಿತು ಅವನಿಗೆ.ಅದರೆ ತನ್ನ ಶ೦ಕೆಯನ್ನು ಆತ ವ್ಯಕ್ತಪಡಿಸಲಿಲ್ಲ.
 "ಹ್ಯಾಗಿದೆ ?" ಎ೦ದು ಕೇಳಿದಳು ಅರಸಿ.