ಪುಟ:Mrutyunjaya.pdf/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯು೦ಜಯ

     "ಸುಂದರವಾಗಿದೆ, ಮಹಾರಾಣಿ.”
     ತನ್ನ ಹೆರಳಿನ ಮೇಲೊಮ್ಮೆ ಪ್ರೀತಿಯಿಂದ ಕೈ ಆಡಿಸಿ ಅವಳೆ೦ದಳು:
    "ಧಾರ್ಮಿಕ ವಿಧಿ. ಆಗಲೇಬೇಕಲ್ಲ. ನಿನ್ನ ಕೆಲಸ ಶುರುಮಾಡು."
     ಬೇರೊಂದು ದಾಸಿ. ಮತ್ತೊಂದು ಬಂಗಾರದ ತಟ್ಟಿ.ಸುರುಳಿ ಯಾಗಿ ಕೂದಲ ಹಿಡಿಗಳು ಬಿದ್ದುವು. ಮಹಾರಾಣಿ ಒಂದೆರಡು ಬಾರಿ ಸದ್ದು ಮಾಡುತ್ತಲೇ ನಿಟ್ಟುಸಿರು ಬಿಟ್ಟಳು.ಒಮ್ಮೆ ಸ್ವರೂಪದರ್ಶಕದಲ್ಲಿ ತನ್ನ ಪ್ರತಿ ಬಿಂಬ ನೋಡುವುದು; ಕೇಶಕವಚದತ್ತ ದೃಷ್ಟಿ ಹರಿಸುವುದು ; ದಾಸಿ ತನ್ನ ಪಕ್ಕಕ್ಕೆ ಬಂದಾಗ ತಟ್ಟೆಯ ಕಡೆಗೊಮ್ಮೆ ನೋಟ ಬೀರುವುದು...
     ತನ್ನ ಕೆಲಸ ಮುಗಿಸಿ ನಾಪಿತ ತಲೆಬಾಗಿ ನಮಿಸಿದ
     ಸ್ನಾನವಾದ ಮೇಲೆ ಮಹಾಪ್ರಭು ಮಹಾರಾಣಿ ಇಬ್ಬರ ತಲೆಗಳಿಗೂ ತೆಳ್ಳಗಿನ ಶ್ವೇತವಸ್ತ್ರ ಸುತ್ತಿ ಅಲಂಕರಿಸಿದರು, ಶುಭ್ರ ದುಕೂಲಗಳನ್ನು ಉಡಿ ಸಿದರು. ಆಭರಣಗಳನ್ನು ತೊಡಿಸಿದರು.
    ಬೆಂಟ್ ರಷ್ಟ್ ಬಂದು ಮಹಾರಾಣಿಗೆ ಅರಿಕೆ ಮಾಡಿದಳು :
    "ರಾಜಕುಮಾರನೂ ರಾಜಕುಮಾರಿಯೂ ಹೊರಟು ನಿಂತಿದ್ದಾರೆ."
    “ಒಳ್ಳೇದು. ಮಹಾಪ್ರಭು ಸಿದ್ಧವಾಗಿದ್ದಾರೋ ಏನೆಂದು ವಿಚಾರಿಸಿ, ಮೆರವಣಿಗೆ ಆಧಿಕಾರಿಗೆ ತಿಳಿಸು."
     ...ಪಲ್ಲಕಿಗಳತ್ತ ಸಾಗುತ್ತಿದಾಗ ಮಹಾರಾಣಿಯತ್ತ ಪೆರೋ ನೋಡಿದ. ಆಕೆಯೂ ಆತನತ್ತ ಮುಚ್ಚುಮರೆಯ ನೋಟ ಬೀರಿದಳು. ಪರಸ್ಪರ ನುಣುಪು ತಲೆಯ ಮೇಲಣ ಶಿರೋವಸ್ತ್ರದ ಅಲಂಕಾರ ಹೇಗೆ ಕಾಣಿಸುತ್ತದೆಂದು ತಿಳಿ ಯುವ ಅಪೇಕ್ಷೆ ಅವರಿಗೆ. ('ಮಹಾ ಅರ್ಚಕ ಕಠೋರನಾಗದೆ ಇದ್ದಿದ್ದರೆ ಕೇಶಕವಚಧಾರಣೆಯನ್ನಾದರೂ ಅರಮನೆಯ ದೇವಮಂದಿರದಲ್ಲಿ ಮಾಡ ಬಹುದಿತ್ತು.')
     ಪ೦ಜುಗಳು,ಭೇರಿಯವರು_ಹಾಡುವವರು_ಕುಣಿತದವರು,ಮೆರವಣಿಗೆಯುದ್ದಕ್ಕೂ. ಎಡಬಲಗಳಲ್ಲಿ ನೂರು ಜನ ಕಾವಲು ಭಟರು, ಮೊದಲ ಪಲ್ಲಕಿಯಲ್ಲಿ ಅಮಾತ್ಯ, ಅವನ ಹಿ೦ದೆಯೇ ಪೆರೋ,ಹಿ೦ಬಾಲಿಸಿದ್ದು ಒ೦ದು ಪೆಟಾರಿ ಇದ್ದ ಪಲ್ಲಕಿ (ಪೆಟಾರಿಯಲ್ಲಿ ಅರಸನ ಕೇಶಕವಚ, ಕಿರೀಟ, ಕೊಂಡಿ ಅಡಕತ್ತರಿ,ಹಿ೦ದಿನ ಪಲ್ಲಕಿಯಲ್ಲಿ ಮಹಾರಾಣಿ, ಆಕೆಯನ್ನು