ಪುಟ:Mrutyunjaya.pdf/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯೦ ಮೃತ್ಯುಂಜಯ " ಈ ಕೇಶಕವಚ, ಈ ಕಿರೀಟ ! ಅಪೂರ್ವ ಶೋಭೆಯಿಂದ ಬೆಳಗುತ್ತಿದ್ದೀರಿ .ನೋಡಲು ಎರಡು ಕಣ್ಣು ಸಾಲದು ಮಹಾರಾಣಿ.” "ಸರಿ, ಮಕ್ಕಳೆಲ್ಲಿ?” "ಗೇಬು ಮತ್ತು ನಾನು ರಾರ್ತೇನೇ ಬಂದ್ವಿ. ಚಿಕ್ಕವರು ಇವತ್ತು ಸೂರ್ಯೋದಯಕ್ಕೆ ಮುಂಚೆ ಬಂದು ತಲಪಬೇಕಾಗಿತ್ತು, ಮಹಾಮಂದಿರಕ್ಕೆ ಹೊರಡುವವರೆಗೂ ದಾರಿ ನೋಡಿದೆ.ಆಮೇಲೆ ಬಂದಿರ್ಬೇಕು. ಉತ್ಸವದ ಪ್ರಯುಕ್ತ ನೀಲನದಿಯಲ್ಲಿ ದೋಣಿಗಳ ನಿಬಿಡ ಸಂಚಾರ...” "ಮೆರವಣಿಗೆ ಮುಗಿದ್ಮೇಲೆ ಅರಮನೆ ಔತಣಕ್ಕೆ ಕರಕೊಂಡ್ಬಾ,” “ ನನ್ನ ಗದ್ದುಗೆ ಕದ್ದೋನು-ನೀರಾನೆ ಪ್ರಾಂತದ ಮೆನೆಪ್ ಟಾ_ ಬಂಧನದಲ್ಲಿದ್ದಾನೆ ಅಂತ ಕಿಂವದಂತಿ ಕೇಳ್ದೆ,” " ಬೇಜಾರಾಗಿದೆಯಾ ? ಅವತ್ತು ಸರುಸದಸ್ಯರಿಗೆ ಪೆರೋ ನೀಡಿದ ಔತಣದಲ್ಲಿ ಆಸೆಪಟ್ಕೊಂಡು ನೋಡ್ತಿದ್ದೆ.” "ನಾನೆ? ಆ ಯುವಕ ಯಾರೆ ಅಂತ ಮಹಾರಾಣಿಯವರು ಕೇಳಿದ ಹಾಗೆ ನೆನಪು...” “ಹುಂ, ಮಹಾ ಅರ್ಚಕರು ಬಲಿ ಬೇಕು ಅಂದ್ರು. ಸುಮ್ನೆ ಒಪ್ಪಿದರಾ ಒಪ್ಪಿದರಾ ಸಡ್ ಉತ್ಸವಕ್ಕೆ " "ಅದೊಂದೇ ಬಲಿಯೊ?" ನೆಫರ್ ಟೀಮ್ ಇರಿಯುವ ನೋಟದಿಂದ ನೆಹನವೇಯ್ಟ್ ಳನ್ನು ನೋಡಿ, ಒಂದು ಕ್ಷಣ ಗಂಭೀರವಾಗಿದ್ದು, ಬಳಿಕ ಮುಗುಳುನಗೆ ಬೀರಿದಳು. "ಗಹನ ರಾಜಕಾರಣ ನಿನಗೆ ಅರ್ಥವಾಗದು ನೆಹನ.” "ಇದ್ದೀತು. ನೀರಾನೆಯನ್ನೇನು ಮಾಡ್ತೀರಿ?” “ ಅದು ಮಹಾ ರಹಸ್ಯ . ವಿಚಾರಣೆಯಂತೂ ನಾಳೆ ನಡೀತದೆ. ನಿನ್ನದೇನಾದರೂ ಸಲಹೆ ಉಂಟೆ ?" “ ಇಲ್ಲವಪ್...ಪಲ್ಲಕಿಗಳ ಮೇಲ್ಛಾವಣಿ ಬಿಡಿಸ್ತಿದ್ದಾರೆ. ಪೆರೋ ಏರಿರ್ದು.ಪೆರೋ ಏರಿದ್ರು ಮಹಾರಾಣಿಯವರ ಪಲ್ಲಕಿಯನ್ನು ಬೋಯಿಗಳು ಇಲ್ಲಿಗೇ ತಲ್ತಿದ್ದಾರೆ.” "ಒಳ್ಳೆದು ನೆಹನ. ನೀನೂ ಮೆರವಣಿಗೇಲಿ ಬರ್ತಿ ತಾನೆ?” “ ಹೌದು. ಮಹಾರಾಣಿ. ಔತಣದಲ್ಲಿ ನಿಮ್ಮ ಸಾವಿರಾಪ್ಯಭಾಗ್ಯ ನನ್ನ