ಪುಟ:Mrutyunjaya.pdf/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

  "ಕಾವಲುಗಾರರೆಲ್ಲಿ ?”
  "ರಾತ್ರಿ ಕೈದಿಗಳನ್ನೆಲ್ಲ ಬಿಟ್ರಲ್ಲ? ಯಾರಿಗೂ ಈ ಕಡೆ ಆಸಕ್ತಿ ಇಲ್ಲ.

ಒಬ್ಬ ರೊಟ್ಟಿ ತಿನ್ನೋಕೆ ಹೋಗಿದ್ದಾನೆ. ಇನ್ನೊಬ್ಬ ಓ ಅಲ್ಲಿ ನಿಂತಿದ್ದಾನೆ. ಇಬ್ಬರೂ ನನ್ನ ಗಂಡನ ಸ್ನೇಹಿತರು. ಅರ್ಧ ದಂಡು ಸೆಡ್ ಉತ್ಸವಕ್ಕೇಂತ ಬಂದಿದೆ. ನನ್ನ ಗಂಡನೂ ಬಂದಿದ್ದಾನೆ. ಈಗ ಅವರೆಲ್ಲ ಮಹಾಮಂದಿರದಲ್ಲಿ ದ್ದಾರೆ.”

  “ನಮ್ಮ ನಾಯಕರನ್ನು ಎಲ್ಲಿಟ್ಟಿದ್ದಾರೆ, ಗೊತ್ತಾ?”
  “ಯಾರೂ ಹೇಳಿಲ್ಲವಾ ? ನೆಲಮಾಳಿಗೇಲಿ. ಜಜ್ ಮಂಖ್ ಇದ್ನಲ್ಲ? 

ಅಲ್ಲಿ ಬೇರೆ ಕಾವಲುಗಾರರು.”

  ಕಿಟಕಿಗೆ ಏನೋ ಅಡ್ಡವಾದಂತೆ ಅನಿಸಿತು ಬೆಕ್ಗೆ. ಶೀಬಾ ಏನನ್ನೋ

ಒಳಕ್ಕೆ ತುರುಕುತ್ತಿದ್ದಳು. ಎರಡು ರೊಟ್ಟಿ.

  "ತಗೊಳ್ಳಿ."
  “ ನಮಗೆ ಬೇಡ, ನಾಯಕರಿಗೆ-”
  "ಅದಕ್ಕೇನಾದರೂ ಮಾಡೋಣ. ಈಗ ಇದನ್ನು ತಗೊಂಡ್ಬಿಡಿ

ಬೇಗ."

   ಬೆಕ್ ರೊಟ್ಟಿಗಲಳನ್ನುಒಳಕ್ಕೆಳೆದುಕೊಂಡ.
   ಔಟನೆಂದ !
  "ಮೆನ್ನ ನಿನಗೆ ಗೊತ್ತಾ? ಅರಮನೆ ಮಂದಿರದ ಕಿರಿಯ ಅರ್ಚಕ.

ಮೆನ್ನ ಹುಚ್ಚಯ್ಯ.”

  "ಗೊತ್ತು ಅಣ್ಣ.”
  "ನಮ್ಮೂರಿನಿಂದ ಬಟಾನೂ ಗೆಳೇರೂ ಬರ್ತಾರೆ”
  "ಬಟಾ ನನಗೆ ಗುರುತಿಲ್ಲವಾ ? ಕೊಳಲು ಬಾರಿಸ್ತಾರೆ.”
  "ಅವರೇ. ನಾಯಕರೂ ನಾವೂ ಇಲ್ಲಿರೋದು ಬಟಾಗೆ ಆದಷ್ಟು ಬೇಗ

ಗೊತ್ತಾಗ್ಬೇಕು."

  ಮೆನ್ನ ದೋಣಿಕಟ್ಟೇಲೋ ಮೇಲ್ಗಡೇನೋ ಬಟಾನ ದಾರಿ ನೋಡ್ತಾ 

ನಿಂತಿದ್ದಾರೆ. ಸ್ವಲ್ಪ ಹುಡುಕಿ ಅವರಿಗೆ ಸಂಗತಿ ತಿಳಿಸ್ತೀಯಾ ?”

  “ ಹೂಂ ಅಣ್ಣ. ಈಗ್ಲೇ ಹೋಗ್ತೇನೆ. ಮೆನ್ನಯ್ಯನನ್ನು ಕಂಡು,