ಪುಟ:Mrutyunjaya.pdf/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೦ ಮೃತ್ಯುಂಜಯ

ಪೆರೋ ಆಸೀನನಾಗುತ್ತಿದ್ದಂತೆ ನೆಫರ್ ಟೀಮ್ ಮಂದಹಾಸ ಬೀರಿದಳು; ಪೆರೋನ ಸವಿಾಪದಲ್ಲಿ ತಾನೂ ಆಸೀನಳಾದಳು. ವಾದ್ಯ ಸಂಗೀತ ಧ್ವನಿ ತೀವ್ರಗೊಂಡಿತು.ಈ ದಿನವು ಮಾಹಪ್ರವಭು ಉಂಡುದು ಹಿತಮಿತವಾಗಿಯೇ.

  • * * * *

ಅರಮನೆಯ ದೇವಮಂದಿರದಲ್ಲಿ ಇತರ ಹಲವರ ಜತೆ ಕುಳಿತು ಉಂಡು ಎದ್ದ ಹಿರಿಯ ಲಿಪಿಕಾರ ಸೆನೆಬಾ" ಮಾರನೆದ ದಿನದ ಯೋಚನೆಯೊಂದ ಉತ್ತೇ ಜಿತನಾದ. ನಸುಕಿನಲ್ಲಿ ಅರಮನೆ ಯೋಧರ ದಳಪತಿ ನಡೆಸಿದ ಕಾರಾಚರಣೆಯ ರಹಸ್ಯ ಸ್ವರೂಪ ಮಾತ್ರ ಅವನನ್ನು ವಿಸ್ಮಿತಗೊಳಿಸಿತ್ತು.ಅವನು ದಳಪತಿ ಯನ್ನು ಕೇಳಿದ: “ ನೀನೂ ಕಾರಾಗೃಹದ ಅಧಿಕಾರಿಯನೂ ನನಗೆ ತಿಳಿಸದೆ ಕೆಲಸ ಮಾಡಿ ದಿರಲ್ಲಪ್ಪ.” “ ನಿಮಗೆ ಗೊತ್ತಿತ್ತದೆ ಅಂದ್ಕೊಂಡಿದ್ದೆ. ಬಹಳ ಕಟ್ಟುನಿಟ್ಟಿನ ಆಜ್ನೆ." ಸುಳ್ಳಾಡುವುದು ತಪ್ಪಲ್ಲ-ಎಂದುಕೊಂಡು, ಸೆನೆಬ ರಾಗವೆಳೆದ : “ಗೊತ್ತಿತ್ತು, ಆದರೆ, ನೀನು ಹೇಳಲಿಲ್ಲ ನೋಡು.” " ಲಿಪಿಕಾರಯ್ಯನವರು ತಪ್ಪು ತಿಳಕೋಬಾರದು.” ಇರಲಿ ಬಿಡು.ಕಟ್ಟುನಿಟ್ಟಿನ ಆಜ್ಞೆ ಇನ್ನೇನಾದರೂ ಆಗಿದೆಯೊ ?” “ ಇವತ್ತು ಮತ್ತು ನಾಳೆ ಕಳೆದರೆ ನನ್ನ ಜವಾಬಾರಿ ಮುಗೀತು. ఆ ಮೇಲಿಂದೆಲ್ಲಾ ಗಡಿಯಿಂದ ಬಂದಿರೋ ಸೈನಿಕರಿದ್ದಾರಲ್ಲ ಅವರು ನೋಡ್ಕೊಳ್ತಾರಂತೆ." " ನೋಡೋಳ್ಳೋದು ಏನನ್ನು?" “ ಅದನ್ನು ಮಾತ್ರ ಯಾರೂ ಹೇಳಿಲ್ಲ.” " ಅಯ್ಯೋ! ನೀನೊಬ್ಬ.” ಸೆನೆಬ್ ಮಂದಬುದ್ಧಿಯ ದಳಪತಿಯನ್ನು ಅವನ ಪಾಡಿಗೆ ಬಿಟ್ಟು, ಮಹಾ ಮಂದಿರಕ್ಕೆ ಮೆರವಣಿಗೆ ಹೊರಟಾಗ, ಟೆಹುಟಿಯ ಬಳಿ ಸಾರಿದ.ಇನೇನಿಯನ್ನು ಭೇಟಿ ಮಾಡಿದ.ಎಲ್ಲ ವಿಷಯಗಳನ್ನೂ