ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೦೨ ಮೃತ್ಯುಂಜಯ
ಹೇಗೆ? ಈ ಕತ್ತಲು ಬೆಳಗಾಗುವುದರೊಳಗೆ ಬೆಳಗಾದದ್ದು ಕತ್ತಲಾಗುವು ದರೊಳಗೆ ಮತ್ತೆ ಏನೇನು ಆಗುವುದೊ ?' ಏನೇ ಇರಲಿ, ಈ ಅತಿಥಿಗೃಹದಲ್ಲಿ ಇದ್ದವನಿಂದ ತನಗೆ ನಾಯ್ಯವಾಗಿ ಸಲ್ಲಬೇಕಾದ್ದನ್ನು ಪಡೆಯಲು ಮತ್ತೊಮ್ಮೆ ತಾನು ಯತ್ನಿಸಬೇಕು.
....ಬಿಸಿಲು ಬಾಡಿದೊಡನೆ ಸೆನೆಬ್ ಕಾರಾಗೃಹದತ್ತ ಹೋದ.ಅರ ಮನೆಯ ಆವರಣದಲ್ಲಿ ಎಲ್ಲ ಕಡೆಗಳಲ್ಲೂ ದಿನವೂ ಕಾಣಿಸಿಕೊಳ್ಳುವ ಮುಖ ಅವನದು. ಸಾಮಾನ್ಯ ಸೇವಕರೂ ಸಣ್ಣಪುಟ್ಟ ಅಧಿಕಾರಿಗಳೂ ಈತನಿಗೆ ನಮಿಸಬೇಕು.
ನೆಲಮಾಳಿಗೆಯ ದ್ವಾರದ ಬಳಿ ಸೆನೆಬ್ ನಿಂತಾಗ ಕಾವಲುಗಾರರಿಬ್ಬರೂ ವಂದಿಸಿದರು. "ಅಮಾತ್ಯರು ಕಳಿಸಿದ್ದಾರೆ,” ಎಂದು ಹೇಳಿ ಬಾಗಿಲು ತೆರೆಯು ವಂತೆ ಸೆನೆಬ್ ಸನ್ನೆ ಮಾಡಿದ. ಕಾರಾಗೃಹದ ಮುಖ್ಯಸ್ಥನಿಗಿಂತ ಅರಮನೆಯ ದಳಪತಿಗಿಂತ ದೊಡ್ಡ ಅಧಿಕಾರಿ,ಈ ಹಿರಿಯ ಲಿಪಿಕಾರಯ್ಯ.ಆದೇಶವನ್ನು ಪಾಲಿಸಲೇಬೇಕಲ್ಲ? ಬಾಗಿಲು ಸದ್ದು ಮಾಡಿತು. ఒಬ್ಬ ಕಾವಲುಗಾರನ ಜತೆ ಕೆಳಕ್ಕೆ ನಡಿಗೆ.ಮತ್ತೊಂದು ಬಾಗಿಲು.ಬೆಳಕು ನಸುಬೆಳಕಾಯಿತು,ನಸು ಗತ್ತಲೆಯಾಯಿತು. “ ನೀನು ಇಲ್ಲೇ ನಿಂತಿರು,” ಎಂದು ಆ ಕಾವಲುಗಾರನಿಗೆ ಹೇಳಿ ಸೆನೆಬ್ ಒಬ್ಬನೇ ರನೆಯ ಬಾಗಿಲಿನತ್ತ ಸಾಗಿ, ಅದನ್ನು ತೆರದ. ಮುಚ್ಚಂಜೆಯೋ ಮುಂಜಾವವೋ ಎಂದು ತಿಳಿಯದಂತಹ ಸ್ಥಿರ ಮಂದ ಪ್ರಕಾಶ. ಧ್ವನಿಯಲ್ಲಿ (ಧೂರ್ತ)ವಿನಯ ತೋರುತ್ತ,"ಮೆನೆಪ್‍ಟಾ ಅಣ್ಣ,” ಎಂದ ಸೆನೆಬ್. ಬೆಳಕು ಹರಿದ ಮೇಲೆ ಅದೆಷ್ಟೋ ಹೊತ್ತು ಗೋಡೆಗೊರಗಿ ಕುಳಿತ
ಬಳಿಕ ಮೆನೆಪ್‍ಟಾ ನೆಲದ ಮೇಲೆ ಮೈ ಚಾಚಿದ್ದ. ನಿದ್ದೆ ಹತ್ತಿತ್ತು. ಕೊರ ಡಾಗಿ ಮಲಗಿದ್ದ.
ಸೆನೆಬ್ ಮತ್ತೊಮ್ಮೆ ಕರೆದ : "ಮೆನೆಪ್‍ಟಾ ಅಣ್ಣ.” ನಾಯಕ ಗಡಬಡಿಸಿ ಎದ್ದ, ಬಟಾ ಬಂದನೆ ?