ಪುಟ:Mrutyunjaya.pdf/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೫೦೪ ಮೃತ್ಯುಂಜಯ

    "ನಾಳೆ ನನ್ನ ವಿಚಾರಣೆ!” ಎಂದು ಉದ್ಗರಿಸಿದ ಮೆನೆಪ್ ಟಾ.
    “ಒಂದು ರೀತೀಲಿ ಇದು ಒಳ್ಳೇದು ನಾಯಕರೇ. ನಿಮ್ಮ ನಿರಪ ರಾಧಿತ್ವ ರುಜುವಾಗದೆ. ನಿಮ್ಮನ್ನು గౌರವದಿಂದ ನೀರಾನೆ ಪ್ರಾಂತಕ್ಕೆ ಕಳಿಸಿಸ್ಕೊಡರೆ."
    “ಸೆನೆಬ್ ನೀವು ನಿಜವಾಗಿಯೂ ಹರ್ಷದಾಯಕ ಸುದ್ದಿ ತಂದಿದ್ದೀರಿ. ನಿಮಗೆ ಏನು ಊಡುಗೊರೆ ಕೊಟ್ಟರೂ ಸಾಲದು. ನನ್ನ ಕವಡೆದಾರ, ಪೆರೋ ಕೊಟ್ಟ ಮಣಿಕಟ್ಟು ಎಲ್ಲ ಅತಿಥಿಗೃಹದಲ್ಲೇ ಇವೆ.”
    ಮನಸ್ಸಿನಲ್ಲೇ 'ಎಲಾ!'ಎಂದು ಉದರಿಸಿ ಸೆನೆಬ್ ನುಡಿದ :
    “ಅವು ಸುರಕ್ಷಿತವಾಗಿತ್ತವೆ. ನಾನು ಅತಿಥಿಗೃಹದ ಅಧಿಕಾರಿಗೆ ತಿಳಿಸ್ತೆನೆ. ನಿಮ್ಮ ಅನುಚರರು ಬರಬೇಕಾಗಿತ್ತು , ಅಲ್ಲವಾ ?”
   “ಹೌದು...ಪಾಪ ಏನಾಯಿತೊ ?”
   “ನನ್ನದೊಂದು ಪ್ರಾರ್ಥನೆ. ನಡೆಸಿಕೊಡಬೇಕು.”
   "ಏನು ಸೆನೆಬ್?"
   “ನಿಮ್ಮ ಪ್ರಾಂತದಿಂದ ಯಾರಾದರೂ ಬಂದ ತಕ್ಷಣ, ನಾನು ಸಲ್ಲಿಸಿರೋ ಸೇವೆಯ ವಿಯ విష్య ಅವರಿಗೆ ಒಂದು ಮಾತು ಹೇಳ್ಳೆಕು.”
   "ಆಗಲಿ.ಇದು ಅಂತಿಮ ಸೇವೆ ಅಂತೀರಾ?”
   “ಛೆ! ಛೆ! ಇಂಥ ಸೇವೆ ಮುಂದೆಯೂ ಸಲ್ಲಿಸೋ ಅವಕಾಶ ನನಗೆ ದೊರೀಲಿ."
   “ಇನ್ನು ಹೋಗಬಹುದಲ್ಲ ಸೆನೆಬ್?”
   “ನಿಮಗೆ ಶ್ರಮವಾಯಿತು. ಕ್ಷಮಿಸಿ. ನಾಳೆ ನಿಮ್ಮನ್ನು ಪುನಃ ನೋಡ್ರೇನೆ.”
   ಮೆನೆಪ್ ಟಾ ಮಾನವಾಗಿದು, ಸೆನೆಬ್ ಬಾಗಿಲೆಳೆದುಕೊಂಡು ಮೆಟ್ಟಲು ಗಳನ್ನೇರಿ ಹೋದ ಸದ್ದಿಗೆ ಕಿವಿಗೊಟ್ಟ.
    ಮತ್ತೊಂದು ಬಾಗಿಲು;ಮೇಲೆ ಮತ್ತೂ ಒಂದು.
    ಮೆನೆಪ್ ಟಾಗೆ ನಗು ಬಂತು. ಮನಸ್ಸಿಗೆ ಸಮಾಧಾನವೆನಿಸಿತು. ಈ ಕತ್ತಲು ಮನೆಯ ಹಿಂಸೆ ನಾಳೆಯವರೆಗೆ ಮಾತ್ರ.ನಾಳೆ ವಿಚಾರಣೆ-ವಿಚಾರಣೆ.