ಪುಟ:Mrutyunjaya.pdf/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೬ ಮೃತ್ಯುಂಜಯ ಯಲ್ಲಿ ದೊರೆಯುತ್ತಿದ್ದ ಕಪ್ಪು,ಬಿಳಿ,ಕಂದು ಮರಗಳ ವಿಕೃತ ಮೂರ್ತಿಗಳು.('ಇವತ್ತು ಎಡೆಬಿಡದ ವ್ಯಾಪಾರ ಮಗನಿಗೆ.')ಅರ್ಚಕ ಇನೇನಿ ಅಂದಿದ್ದ:'ನೀರಾನೆ ಪ್ರಾಂತದಲ್ಲಿ ಒಳ್ಳೇ ದೇವತಾ ಮೂರ್ತಿಗಳನ್ನು ಮಾಡ್ತಾರೆ.'ದಿವ್ಯಮೂರ್ತಿಗಳು.ಭವ್ಯಮೂರ್ತಿಗಳು.'ಓ ಮೆನೆಪ್ಟಾ ,ಓ ಮೆನೆಪ್ಟಾ.'ನಿನ್ನೆಯ ದೊಡ್ಡ ಮನುಷ್ಯ ಇವತ್ತಿನ ದೇವರು.ಇವತ್ತಿನ ಧೀರೋದಾತ್ತ ವ್ಯಕ್ತಿ ನಾಳೆಯ ದೇವರು.ಈತ ಕತ್ತಲಿನಿಂದ ಬೆಳಕಿಗೆ ಆಗಮಿಸಬೇಕು.ಕತ್ತಲು ಮನೆಯಿಂದ ನೀಲ ನದಿಯ ಸ್ವಚ್ಛಂದ ಯಾನಕ್ಕೆ,ನೀರಾನೆ ಪ್ರಾಂತದ ವಿಮುಕ್ತ ಬದುಕಿಗೆ ಈತ ಸಾಗಬೇಕು.'ಹಸಿವು ಬಿಸಿಲು ಎರಡು ಸೇರಿ ಜೀವ ದಹಿಸಲು ಎಷ್ಟು ಕಾಲ ಬೇಕು? ಮೆನ್ನ, ಓ ಮೆನ್ನ.....

      ನಿದ್ದೆ ಆವರಿಸಿದ ಅನುಭವ .ನದಿಯಲ್ಲಿ ಸದ್ದು. ನಾವೆಗಳ ಢಿಕ್ಕಿ? ಮೆನ್ನ ಹೌಹಾರಿ ಎದ್ದ.ಕಣ್ಣು ಹೊಸಕಿಕೊಂಡು ನದಿಯತ್ತ ನೋಡಿದ.ಯಾವ ನಾವೆಗಳೂ ಢಿಕ್ಕಿ ಹೊಡೆದಿರಲಿಲ್ಲ.ಅವನಿದ್ದ ಸ್ಥಳದಿಂದ ಕೆಳಕ್ಕೆ ನಾಲ್ಕು ಬೆರಳೂ ಸ್ಥಳವಿಲ್ಲದಂತೆ ದೋಣಿಗಳು ನೀರ ಮೈಯನ್ನು ಆವರಿಸಿದ್ದುವು.ಆಗ ತಾನೆ ಬಂದಿದ್ದೊಂದು ದೋಣಿ,ದಾರಿ ಇಲ್ಲವಲ್ಲ ಮುಂದೇನು ಎಂದು ಚಿಂತಿಸುತ್ತ, ವೃತ್ತಗಳನ್ನು ರಚಿಸತೊಡಗಿತ್ತು.ಚುಕ್ಕಾಣಿಯ ಬಳಿ ನಿಂತಿದ್ದ ದೋಣಿಕಾರ ನದಿಯ ಪಶ್ಚಿಮ ದಂಡೆಯತ್ತ ಬೊಟ್ಟು ಮಾಡಿದ ಮೇಲೆ, ಅಂಬಿಗರು ಆ ದಿಕ್ಕಿಗೆ ಹುಟ್ಟು ಹಾಕತೊಡಗಿದರು.
                   ನಿಂತಿದ್ದ ದೋಣಿಕಾರನ ಭಂಗಿ.
               "ಬಟಾ!" ಎಂದು ಮೆನ್ನ ಅರಚಿದ.ಮರುಕ್ಷಣ ತಾನು ಕರೆದುದು ದಂಡೆಯ ಮೇಲಿನ ಯಾರಿಗಾದರೂ ಕೇಳಿಸಿತೇನೋ ಎಂದು ಕಾತರನಾಗಿ ಅತ್ತಿತ್ತ ನೋಡಿದ.ಎಲ್ಲೋ ಅಲ್ಲೊಂದು ಇಲ್ಲೊಂದು ಕರಿಯ ಚುಕ್ಕೆಗಳಿದ್ದುವು,ಅಷ್ಟೆ.ಮೆನ್ನ ತನ್ನ ತಲೆಯ ಬಟ್ಟೆಯನ್ನೆಳೆದು ಮೇಲಕ್ಕೆಸೆದ.ಅದು ತುಸು ಹರಡಿ ಹಾಯಿಯಾಯಿತು.ಮೆಲ್ಲನೆ ಕೆಳಗೆ ಬಂತು.ಅದನ್ನು ಹಿಡಿದುಕೊಂಡು ನಿಶಾನೆಯಂತೆ ಬೀಸಿದ."ಆ!ಆ!ಆ!" ಎನ್ನುತ್ತ ಕುಣಿದ