ಪುಟ:Mrutyunjaya.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೪೧

 ಅಧಿಕಾರಿಯ ದೋಣಿಯಲ್ಲಿ ಆಟವಾಡುತ್ತಿದ್ದವರನ್ನುದ್ದೇಶಿಸಿ,
"ಯಾವಾಗ ಬಂದ್ರಿ ಅಣ್ಣ?"ಎಂದು ಕೇಳಿದ.
"ಮಧ್ಯಾಹ್ನ," ಎಂದನೊಬ್ಬ ಆ ದೋಣಿಯಿಂದ.
"ದಾರೀಲಿ ಪೆರೋ ಮಹಾಪ್ರಭುಗಳ ನಾವೆ ಸಿಗ್ತಾ ?"
"ಓ ! ನಾವು ಕಟ್ಟಿ ಸಮೀಪಿಸ್ತಿದ್ದ ಹಾಗೇ ಕೆಳಗಡೆಗೆ ಹೊರ
ಟ್ಹೋಯ್ತು."
ಅವನ ಮಗ್ಗುಲಿಂದ ಒಂದು ಧ್ವನಿ ಕೇಳಿಸಿತು :
"ಯಾತ್ರೆ ಮುಗಿಸಿ బంದಿರಾ ?"
"ಹ್ಞೂ ಅಣ್ಣ."
"ಸರಿ. ಮನೆಗ್ಹೋಗಿ ಗೋಧಿ, ಯವೆ ಅಳೆದು ತಯಾರ್ಮಾಡಿ. ನಾಳೆ
ವಸೂಲಿ!"
ಬಟಾನ ದೋಣಿಯಲ್ಲಿದ್ದವರು ಮೌನವಾಗಿ ದಂಡೆಗೆ ಇಳಿದರು.
ಮೆನೆಪ್ಟಾನ ಮುಖ ಗಂಭೀರವಾಯಿತು.
ಯಾತ್ರೆ ಸುಖಾಂತವಾಯಿತೆಂದು ಖ್ನೆಮು ದೇವನನ್ನು ಬಟಾನೂ
ಅವನ ಕೆಲಸಗಾರರೂ ಮನಸ್ಸಿನಲ್ಲೆ ವಂದಿಸಿದರು. ದೋಣಿಯನ್ನು ದಂಡೆಗೆ
ಎಳೆಯಲು ಹೇಳಿ ಬಟಾ ತಾನೂ ಹೊರಟ. ಬರಿಗೈಯಲ್ಲಿ ಮನೆಗೆ ಬಂದರೂ
ಸಂಭ್ರಮದ ಸ್ವಾಗತ ಅವನಿಗೆ అಲ್ಲಿ ದೊರೆಯುತ್ತಿತ್ತು__ಮಡದಿ,
ಮಕ್ಕಳಿಂದ.
ದೋಣಿಕಟ್ಟೆಯಿಂದ ಕೂಗಳತೆಯ ದೂರದಲ್ಲಿ, ತುಸು ಎತ್ತರದಲ್ಲಿ,
ನದಿಗೆ ಸಮಾನಾಂತರವಾಗಿ ಊರಿನ ಮುಖ್ಯ ಬೀದಿ. ಬೀದಿಯ ಎರಡೂ
ಬದಿಗಳಲ್ಲಿ ಕುಶಲ ಕರ್ಮಿಗಳ, ಕೆಲ ರೈತರ ಮಣ್ಣಿನ___ಮರದ___ವಸತಿಗಳು.
ಆ ಸಾಲುಗಳ ಹಿಂಬದಿಯಲ್ಲಿ ಬಡ ರೈತರ ಮಣ್ಣು ಮನೆಗಳು. ಇವು ವಿರಳ
ವಾದಂತೆ ಅಲ್ಲೊಂದು ಇಲ್ಲೊಂದು ಗುಡಿಸಲು, ಪಶ್ಚಿಮದಲ್ಲಿ. ಮತ್ತೂ
ಮುಂದಕ್ಕೆ ಎತ್ತರದಲ್ಲಿ ದೇವಮಂದಿರ. ಅದನ್ನು ದಾಟಿ ಹೋದರೆ ಗೋರಿ
ಪ್ರದೇಶ. ಮುಖ್ಯ ಬೀದಿ ಮುಗಿಯಿತು ಎನ್ನುವ ಕಡೆ ವಿಶಾಲ ಬಯಲಿನಲ್ಲಿ
ಶ್ರೀಮಂತರ ಮಹಡಿ ಮನೆಗಳು. ಅವುಗಳ ನಡುವೆ ರಾಜಗೃಹ. ಅದು
ಪೆರೋನ ಪ್ರತಿನಿಧಿಯ___ಪ್ರಾಂತಪಾಲನ___ಅಧಿಕಾರ ಪೀಠ. ವಸತಿ ಕೂಡಾ.