ಪುಟ:Mrutyunjaya.pdf/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೮ ಮೃತ್ಯುಂಜಯ

      "ನೋಡಿ ನಮ್ಮ ಮೆನ್ನಣ್ಣ! ಅಲ್ಲವಾ?"

ಹೌದೆಂದರು ಅಂಬಿಗರು.. ಆತನ ವಿಷಯ ಆಗಲೇ ಕೇಳಿ ತಿಳಿದಿದ್ದ ಅಬ್ಟು ಯಾತ್ರಿಕರೂ ಆತನ ಕಡೆಗೆ ದೃಷ್ಟ್ಟಿಹರಿಸಿದರು.

      ದೋಣಿಯಲ್ಲಿದ್ದ ಕೆಲವರು ಖ್ನೆಮು ದೇವನ ಸ್ತೋತ್ರ ಪಠಿಸಿದರು. ದೋಣಿ ದಂಡೆ ಮುಟ್ಟಿತು. ಮೆನ್ನ ಒದ್ದೆ ಮರಳಿನ ಮೇಲೆ ಮಂಡಿಯೂರಿ ದೋಣಿಯನ್ನು ಮುಟ್ಟಿ 'ಇಷ್ಟು ಹೊತ್ತು ತಡೆ ಹಿಡಿದದ್ದೇ ಹೆಚ್ಚು'ಎನ್ನುವಂತೆ ಗೊಳೋ ಎಂದು ಅತ್ತ ಬಟಾ ಕೆಳಕ್ಕೆ ಧುಮುಕಿ ಮೆನ್ನನ  ಮಗ್ಗಲು ಸೇರಿದ.ಒಬ್ಬರನೊಬ್ಬರು  ತಬ್ಬಿಕೊಂಡರು. ಆಧಾರತಪ್ಪಿ, ಕೆಳಕ್ಕುರುಳಿ, ಮರಳಲ್ಲಿ  ಹೊರಳಾಡಿದರು. ಮೆನ್ನ ನಗುತ್ತ ಎದ್ದು ನಿಂತ. ಸುತ್ತಲಿದ್ದವರನ್ನೆಲ್ಲ ದಿಟ್ಟಿಸಿದಾಗ ಅವನ ಮುಖ ಗಂಭೀರವಾಯಿತು.ಬಟಾ ಎದ್ದು ತನ್ನನ್ನು ಸಮಿಪಿಸಿದೊಡನೆ ಅವನ ಕೈ ಹಿಡಿದು ಎಳೆದುಕೊಂಡು ಹೋದ. ದೋಣಿಯಲ್ಲಿದ್ದವರು ಕೆಳಕ್ಕಿಳಿದು ನಿಂತರು
      "ಹೇಳಿ ಮೆನ್ನ   ಹೇಳಿ ಮೆನ್ನ......"
      “ನನ್ನ ಅಗೋಚರ ಕಾ ನಮ್ಮ ನಾಯಕರನ್ನು ಕಾಯ್ತದೆ ಅಂತ ಅಂದಿದ್ದೆ ಆಗಲಿಲ್ಲ, ಬಟಾ ಅಣ್ಣ, ನನ್ನಿಂದಾಗಲಿಲ್ಲ.ಕಾ ಅನ್ನೋದು ಬರಿಯ ನಂಬಿಕೆ,ಬಟಾ ಅಣ್ಣ, ಬರಿಯ ನಂಬಿಕೆ"
    "ಯಾವಾಗ ಹಿಡಿದರು?"

“ನಸುಕಿನಲ್ಲಿ, ನಾನು ಇಲ್ಲೇ ಇದ್ದೆ. ಇವತ್ತು ಹೊತ್ತೇರಿದ ಮೇಲೆ ಶೀಬಾ-ಕಸಾಯಿಯವಳು-ಬೆಕ ಔಟರಿಗೆ ಗೊತ್ತಂತಲ್ಲ-"

    "ಹ್ಞ. ಹ್ಞ."
     “-ಅವಳು ಬಂದು ಹೇಳಿದ್ಲು, ನಾಯಕರನ್ನು ಗೋರಿದರೋಡೆಗಾರ ಜಜ್‍ಮಂಖ್ ಇದ್ದ ನೆಲಮಾಳಿಗೇಲಿ ಇಟ್ಟಿದ್ದಾರೆ.”
       "ಬಿಡಿಸಿ ಕರಕೊಂಡು ಹೋಗೋದಕ್ಕೆ ದಾರಿ?"
      "ಶೀಬಾಳ ಸೈನಿಕ ಗಂಡ ಗಡಿಠಾಣ್ಯದಿಂದ ಬಂದಿದ್ದಾನೆ.ಸ್ವಲ್ಪ ಸಹಾಯ ಮಾಡಬಹುದು.ನೆಲಮಾಳಿಗೆ ಕಾವಲುಗಾರರು ಇಬ್ಬರು.ದೀಪೋತ್ಸವದ ಗಲಾಟೇಲಿ ನಿಮ್ಮ ಕೆಲಸ ಸುಲಭವಾಗ್ತದೆ."

“ನಮ್ಮವರಲ್ಲೇ ఎంటు ಹತ್ತು. ಜನರನ್ನು ಆರಿಸ್ತೇನೆ. ನಾವು ಕಾರ್‍ಯ