ಪುಟ:Mrutyunjaya.pdf/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨೪ ಮೃತ್ಯುಂಜಯ

ಅವಳೂ ಇದ್ದಳು. ಆಕೆಯ ಗಂಡನೂ ಇದ್ದ.

('ಮೆರವಣಿಗೆ.')

ಅಮಾತ್ಯ ಭವನ ಕಾಣಿಸಿದೊಡನೆ ಛಟಿಲ್ ಛಟಿಲ್ ಎಂದವು ಯೋಧರ ಚಾವಟಿಗಳು.

“ನಡೀರಿ ನಿಮ್ಮ ನಿಮ್ಮ ಕೆಲಸಕ್ಕೆ !”

('ಏಟು ಅವರಿಗೆ, ನೋವು ನನಗೆ.')

ಪರಿಚಿತ ಮೆಟ್ಟಲುಗಳು. ಬರಿಗಾಲು. ( 'ಇದೇ ಸುಖ.') ( 'ಓ !
ಕಟಾಂಜನ. ಇಲ್ಲಿ ನಾನು ಆರೋಪಿ.')

ಕಟಾಂಜನದ ಹಿಂದೆ ಶಾಂತಮೂರ್ತಿ ಮೆನೆ‍ಪ್‍ಟಾ ನಿಂತ ಎಡಬಲಗಳಲ್ಲಿ,
ತೋಳುಗಳಿಗೆ ಬಿಗಿದ ಹಗ್ಗಗಳನ್ನು ಹಿಡಿದ ಯೋಧರು. ಮೆನೆಪ್‍ಟಾನ
ದೃಷ್ಟಿ ಆಮೆರಬ್ ನನ್ನು ಅರಸಿ ಅವನ ಮೇಲೆ ಒರಗಿತು. ('ಇವರೆಲ್ಲ ಪ್ರತಿಮೆ
ಗಳು. ಉಸಿರಾಟವೂ ನಿಂತಿದೆಯೇನೋ.')

ಒಮ್ಮೆಲೆ ಸುಸ್ಪಷ್ಟ ಸ್ವರದಲ್ಲಿ ಆತನೆಂದ:

“ನ್ಯಾಯಸ್ಥಾನಕ್ಕೆ ನಮಿಸ್ತೇನೆ.”

ಇದ್ದಕ್ಕಿದ್ದಂತೆ ಬಂದ ಆ ಧ್ವನಿ ಕೇಳಿ ಎಲ್ಲರೂ ಚಕಿತರಾದರು.

ನ್ಯಾಯಮೂರ್ತಿಯ ಹಿಂಬದಿಯಲ್ಲಿ ಎತ್ತರದ ವೇದಿಕೆಯನ್ನು ಬಿಳಿಯ
ಪರದೆ ಮರೆ ಮಾಡಿತ್ತು. ಅಲ್ಲಿ ಯಾರೂ ಇರಲಿಲ್ಲ. ಆಮೆರಬ್ ನ ಎಡ
ಪಾರ್ಶ್ವದ ಪೀಠವೂ ಹಲವು ಪೀಠಗಳೂ ಬರಿದಾಗಿದ್ದುವು. ಬಲಗಡೆಯಲ್ಲಿ ಭಾರೀ
ಗುಂಪು. ನಿರ್ವಿಕಾರ ಭಾವದಿಂದ ಅವರಲ್ಲಿ ಕೆಲವರನ್ನು ಮೆನೆಪ್ ಟಾ ಗುರುತಿಸಿದ. ಹೆಖ್ವೆಟ್ ('ಹೇಳು ಮಗು, ನಿಮ್ಮ ಬಂಡಾಯ ಇತ್ಯಾದಿ ಹೇಗೆ ಮಾಡಿದಿರಿ ಹೇಳು.') ಗೇಬು ('ಯಾವನಯ್ಯ ನೀನು ? ಏನು ಮಾತಾಡ್ಡೆ ! ಏನು ಮಾತಾಡ್ಡೆ! ಅಬ್ಟುಗೆ ಹೋದವನು ಬುದ್ಧೀನ ಕಾಣಿಕೆ ಕೊಟ್ಟು ಬಂದೆಯಾ?) ಅವನ ಪಕ್ಕದಲ್ಲಿರುವಾತ ಯಾರೋ ತಿಳಿಯದು. ಅಮೆನೆಮೊಪೆಟ್. ಮೆನೆಪ್ ಟಾಗೆ ಅಪರಿಚಿತ. ದಂಡನಾಯಕನ ಠೀವಿ ಇದೆ') ಟೆಹುಟಿ. ('ಚುಟುಕು ! ಚುಟುಕು! ಬಾಯಿಯಿಂದ ಹೊರಬಿದ್ದ ಮಾತು ಪಂಜರ ಬಿಟ್ಟ ಕುರುಡು ಹಕ್ಕಿಯ ಹಾಗೆ; ಯಾವುದಕ್ಕಾದರೂ ಬಡಿದು ರೆಕ್ಕೆ ಮುರಿದೀತು. ಎಚ್ಚರ!') ಬಕಿಲ-ಆಹಾ! ಬಕಿಲ....ಅತ್ತ ನಿಂತಿರುವ ಜನರೆಲ್ಲ