ಪುಟ:Mrutyunjaya.pdf/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೫೫೭

ಆತಂಕ.ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿದರು. ಬಟಾನ, ಮೆನ್ನನ
ವಿವರ್ಣ ಮುಖಗಳನ್ನು ಕಂಡು ಆ ಜನರಿಗೆ ಗಾಬರಿ.
ಆಹೂರಾ ಕೇಳಿದಳು :
" ತೀರ್ಪು ಆಯ್ತಾ ? ಅಣ್ಣನನ್ನು ಬಿಟ್ಟರಾ ?”
(ಮೆನ್ನನೆಂದ : " ನೀವು ಅಧೀರರಾಗಬಾರದು.ಅಧೀರರಾಗಬಾರದು.
ಬಯಲಿಗೆ ಹೋಗೋಣ.ಏನಾದರೂ ಮಾಡೋಣ.') ಬಟಾ ರಾಮೆರಿಪ್ಟಾನತ್ತ ಹೋಗಿ, ತನ್ನ ತೋಳಿನಿಂದ ಅವನನ್ನು
ಬಳಸಿ, ಹೊರಹರಿಯಲೆತ್ನಿಸಿದ ದುಗುಡವನ್ನು ಬಲವಾಗಿ ತಡೆಹಿಡಿದು, ಮೆಲ್ಲ
ಮೆಲ್ಲನೆ ಅಂದ :
" ಮೆನೆಪ್ಟಾ ಅಣ್ಣನನ್ನು ಅರಮನೆಯ ಆಟದ ಬಯಲಿಗೆ ಕರಕೊಂಡು
ಹೋಗ್ತಾರೆ.ಅಲ್ಲಿ ಜನರ ಎದುರಲ್ಲಿ ಬಹಿರಂಗವಾಗಿ__"
(ರಾಮೆರಿಪ್ಟಾ ಕಣ್ಣರಳಿಸಿದ.ತನ್ನ ತಂದೆಯನ್ನು ಕಂಬಕ್ಕೆ ಬಿಗಿದು
ಚಾಟಯಿಂದ ?....ಇತರ ಹಲವರಿಗೂ ನೀರಾನೆ ಪ್ರಾಂತದ ರಾಜಗೃಹದ
ಘಟನೆಯ ನೆನಪು...)
ಬಟಾ ಅಂದ :
" ಮೆನ್ನಯ್ಯ ಹೇಳ್ತಾರೆ, ನಾವು ಅಧೀರರಾಗಬಾರದು. ಬಯಲಿಗೆ
ಹೋಗೋಣ.ಏನಾದರೂ ಮಾಡೋಣ_ಅಂತ."
ಹಲವು ಸ್ವರಗಳು:
“ನಡೀರಿ ಮತ್ತೆ. ಯಾಕೆ ತಡ ?”
ಮೆನ್ನ ತಿಳಿಯಹೇಳಿದ :
" ಜನರ ಜತೆ ಸೇರ್ಕೊಂಡು ಅರಮನೆಯ ಮಹಾದ್ವಾರದ ಮೂಲಕವೇ
ಒಳಗೆ ಹೋಗ್ಬೇಕು.ನೂಕು ನುಗ್ಗುಲಿನಲ್ಲಿ ಅದು ಸುರಕ್ಷಿತ.ಅಲ್ಲದೆ,ಇವತ್ತು
ದೀಪಾಲಂಕಾರವಿಲ್ಲ. ಬಯಲಲ್ಲಿ ಕತ್ತಲು.ನಾವೆಲ್ಲ ಹಿಂದೆ ನಿಂತ್ಕೊಂಡು,
ಯೋಚಿಸಿ ಏನಾದರೂ ತೀರ್ಮಾನಕ್ಕೆ ಬರೋಣ.ಏನಾದರೂ ಮಾಡೋಣ.
ಬನ್ನಿ,ಬನ್ನಿ..."
** **