ಪುಟ:Mrutyunjaya.pdf/೫೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬೨

ಮೃತ್ಯುಂಜಯ

ಇರುಳು....ಬಯಲಿಗೆ ಬಂದಿರ್ತ್ತಾರೆ...ತನಗೆ ಕಾಣಿಸುತ್ತಿಲ್ಲ.
ಬಟಾನಿಗೆ ಅನಿಸಿತು__'ಅಣ್ಣ ಹುಡುಕುತ್ತಿದಾನೆ. ತುಸು ಮುಂದಕ್ಕೆ
ಸರಿಯಬೇಕು ನಾವು.'
ಒಬ್ಬರಿಗೊಬ್ಬರು ತಿಳಿಸದೆಯೇ ಅಬ್ಬು ಯಾತ್ರಿಕರು ಜನರೊಡೆನೆ ಬೆರೆ
ಯುತ್ತ ಯೋಧರ ಇತ್ತಣ ಸಾಲಿನತ್ತ ಒತ್ತರಿಸಿದರು.
ರಾಮೆರಿಪ್ ಟಾಗೆ ಆತಂಕ : ತಾನು ಚ್ಚಿಕ್ಕವನು. ಅಪ್ಪನಿಗೆ ಕಾಣಿಸದೇ
ಹೋದರೆ? ಆ ಕ್ಷಣವೇ ಬಟಾನಿಗೂ ಆ ವಿಷಯ ಹೊಳೆಯಿತು. ಆತ ಬಗ್ಗಿ
ಕುಳಿತು, ರಾಮೇರಿಯನ್ನು ಭುಜದ ಮೇಲೆ ಕೂಡಿಸಿಕೊಂಡು ಎದು ನಿಂತ.
__'ರಾಮೆರಿ !'
ಮೆನೆಪಟಾಗೆ ಗುಂಡಿಗೆಯ ತೀವ್ರ ಬಡಿತ. ಕರೆಯಲಾರ. ಕೂಗಿ
ಕರೆಯಲಾರ
__'ಬಟಾ, ನನ್ನ ಬಟಾ...'
__'ಓ ಔಟ! ಬೆಕ್ ! ಇಬ್ಬರೂ ಪಾರಾಗಿದ್ದಾರೆ.”
__'ಮಹಾತಾಯಿ ಶೀಬಾ?'
__'ಸೋದರಿ ಅಹಾರಾ-ಮಗು?..'
__'ದಿವ್ಯ ಜೀವ ಮೆನ್ನ.'
__'ಅವರು__ಅವರೆಲ್ಲ....ನನ್ನ ಬಂಧುಗಳು!'
ಜಿನುಗಿ ಕಪೋಲಗಳನ್ನು ಒದ್ದೆಗೊಳಿಸಿದ ಹರ್ಷಾಶು ಬಿಂದುಗಳು.....
ಉಪ್ಪರಿಗೆಗೆ ಜನ ಬಂದರು.ಪ್ರತಿಷ್ಠಿತರು.
ಅವರ ಗಂಟಲಿನಿಂದ:
" ಪೆರೋನ ಆಯುರಾರೋಗ್ಯ ವರ್ಧಿಸಲಿ!”
ಆಗಮನ: ಮಹಾಪ್ರಭು, ಮಹಾರಾಣಿ (ಕೇಶಕವಚಗಳು, ಕಿರೀಟ
ಗಳು,) ಮಹಾ ಅರ್ಚಕ, ಅಮಾತ್ಯ.
ಬಟಾ ಗೊಣಗಿದ:
" ಏನು ಮಾಡೋಣ ? ಏನ್ಮಾಡೋಣ ಈಗ ?"
ಬೆಕ್ ಬಟಾನನ್ನು ಕೇಳಿದ:
"ಕಠಾರಿ ಇದೆಯಾ ? "