ಪುಟ:Mrutyunjaya.pdf/೫೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೭೪

ಮೃತ್ಯುಂಜಯ

ಓ ಮೆನ್ನ...'
—‘ಅಬ್ಬು ಯಾತ್ರೆಯಿಂದ ಮರಳುತ್ತ ದೋಣಿಯಲ್ಲಿ ಕಂಡ ಕನಸು:
ಬಿಳಿ ಮೋಡಗಳ ಮೇಲೆ ತಾನು ಮಲಗಿದ್ದೆ, ಜೋಗುಳ ನುಡಿಯ ಆಲಾಪನೆ
ಸ್ತ್ರೀಕಂಠದಿಂದ ಕೇಳಿಬರುತ್ತಿತ್ತು. ಓ ಒಸೈರಿಸ್. ಓ ಒಸೈರಿಸ್'
"ಮಂಡಿಯೂರಿ ಕೂತ್ಕೋಳ್ಳಿ. ದಿಮ್ಮಿಯ ಮೇಲೆ ತಲೆ ಇಡಿ,” ಎಂದ
ಹಂತಕ, ಮೆಲ್ಲನೆ.
ಮೆನೆಪ್ಟಾ ಜನರತ್ತ ನೋಡಿದ. ಇನ್ನೊಮ್ಮೆ ತನ್ನವರನ್ನು ದಿಟ್ಟಿಸುವ
ತವಕ, ಇಲ್ಲವಲ್ಲ ? ಏನೂ ಕಾಣಿಸುತ್ತಿಲ್ಲವಲ್ಲ?
ಕಾಣಿಸದೆ ಏನು? ಈ ಸಮುದಾಯದ ಬಹು ಜನ ತನ್ನವರೇ ಅಲ್ಲವೆ ?
ಮೆನೆಪ್ ಟಾ ಅವರಿಗೆ ಬಾಗಿ ವಂದಿಸಿದ.
ಉಪ್ಪರಿಗೆಯತ್ತ ಹೊರಳಿ, ಕಟ್ಟೆಯ ಮೇಲೆ ಮಂಡಿಯೂರಿ ಕತ್ತನ್ನು
ದಿಮ್ಮಿಯ ಮೇಲಿರಿಸಿದ.
ಸೆತ್ ಒಸೈರಿಸನನ್ನು ಕೊಂದು ಅದೆಷ್ಟು ಹೋಳು ಮಾಡಿದ? ಹದಿ
ನಾಲ್ಕು?
“ಒಂದು, ಎರಡು,ಮೂರು, ನಾಲ್ಕು.'
(ಬೆಕ್ ಗೆ ಕಸಿವಿಸಿ, ಬಾಕು ಕೈಯಲ್ಲಿದೆ. ಎಲ್ಲಿಗೆ ಎಸೆಯಲಿ ? ಇನ್ನೂ
ಮುಂದೆ ಹೋಗಬೇಕು.___ ಮುಂದೆ....)
ಉಪ್ಪರಿಗೆಯಿಂದ ಕೈ ತಟ್ಟಿದ ಸದ್ದು. “ ಬಕಿಲ!” ಟೆಹುಟಿಯ ಧ್ವನಿ,
ಎತ್ತರದ ಬಂಡೆಯಿಂದ ನೀಲನದಿಯ ಆಳಕ್ಕೆ ಧುಮುಕಿದಾಗ ಉಂಟಾಗುವ
ಸಪ್ಪಳದಂತೆ ಕೆಳಕ್ಕೆ ಅಪ್ಪಳಿಸಿದ ಕರೆ.
(ಬಕಿಲ ಈಟಿಯನ್ನು ಮೇಲಕ್ಕೆತ್ತಿದ. ನಿರ್ದೇಶಕ.ಬಾಕು ಧಾವಿಸಿ
ಹಂತಕನ ಪಾದವನ್ನು ಮುಟ್ಟಿತು.)
"ಆಯ್!"
ಇನ್ನೊಮ್ಮೆ ಎಣಿಸಬೇಕು....ಒಂದು, ಎರಡು, ಮೂರು, ನಾಲ್ಕು,
ಐದು...'ಆಯಿತೆ?” ಹಂತಕ ಎತ್ತಿದ್ದ ಕತ್ತಿ ಸರಕ್ಕನೆ ಕೆಳಕ್ಕೆ ಬಂತು.
'ಆಯಿತು'......