ಪುಟ:Mrutyunjaya.pdf/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೫೭೧

ನುಸುಳಿ ಕುಳಿತು ರಾಮೆರಿಪ್ ಟಾನನ್ನು ತಬ್ಬಿಕೊಂಡ. ಹುಡುಗ ಅಳುತ್ತಿರಲಿಲ್ಲ.
ಕೆಂಡವಾಗಿದ್ದುವು ಅವನ ಕಣ್ಣುಗಳು.
“ ರಾಮೆರಿ, ರಾಮೆರಿ....” .
__ಬಟಾನ ಗಂಟಲಿನಿಂದ ತಪ್ಪಿಸಿಕೊಂಡು ಹೊರಬಿದ್ದ ಪಿಸುದನಿಯ
ಎರಡು ಪದಗಳು.
ಅವರು ಆತನ ದಾರಿ ನೋಡುತ್ತ ಕುಳಿತಿದ್ದರು. ಅವರೆಲ್ಲರ ಸ್ವರ
ಪಡೆಯದ ಒಂದು ಪ್ರಶ್ನೆ ನೀರವತೆಯೊಡನೆ ಸೆಣಸುತ್ತಿತ್ತು.
ಅರಮನೆಯ ಮಹಾದ್ವಾರವನ್ನು ಮುಚ್ಚಿದ್ದರು. ಆ ತೂಗಾಡುತ್ತಿದ್ದ
ಶನಕ್ಕೆ ಕಾವಲಾಗಿದ್ದರು ಇಬ್ಬರು ಭಟರು,
“ ಈಗ ಎರಡು ಕೆಲಸ ಆಗಬೇಕು ಅಹೂರಾ.”
“ ಹೇಳು ಅಣ್ಣ. ”
ಆಗಬೇಕಾದ್ದನ್ನು ವಿವರಿಸಿದ ಬಳಿಕ ಬಟಾ ಅಂದ :
" ಶವಲೇಪನ ಸಾಮಗ್ರಿ ದೋಣಿಗೆ ತಲಪಿಸಿದ ಮೇಲೆ ನೀನು ಇಲ್ಲಿಗೆ
ವಾಪಸಾಗೋಕು, ಒಂದಿಷ್ಟು ಬುತ್ತಿ ತಗೊಂಡು, ಕಾವಲಿನ ಆ ಇಬ್ಬರನ್ನೂ
ಊಟಕ್ಕೆ ಕರೀಬೇಕು. ಕೊಲೋದು ಬೇಡ, ಔಟ ಬೆಕ್ ನೋಡ್ಕೊಳ್ತಾರೆ.
ಅವರಿಗೆ ನಮ್ಮವರು ನಾಲ್ಕು ಜನ ಸಹಾಯ ಮಾಡ್ಡಿ, ಬಾಯಿಗೆ ಚಿಂದಿ
ತುರುಕಿ, ಕಣ್ಣು ಗಳಿಗೆ ಬಟ್ಟೆ ಕಟ್ಟಿ, ಕೈ ಕಾಲು ಬಿಗಿದು ಕತ್ತಲೇಲಿ ಎಸೆದು
ಬಿಡೋದು ....ಏಳು, ಗಂಡನನ್ನು ಕರಕೊ.”
ನಿದ್ದೆ ಹೋಗಿದ್ದ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಅಹೂರಾ
ಎದ್ದಳು. ಗಂಡನಿಗೆ ಸನ್ನೆ ಮಾಡಿ ಬಟಾನನ್ನು ಹಿಂಬಾಲಿಸಿದಳು. ಜನಸಂಚಾರ"
ಕಡಿಮೆಯಾಗತೊಡಗಿದ್ದ ನದಿ ದಂಡೆಯ ದಾರಿ. ಒಂದೇ ದಿನ ಅವಧಿಯಲ್ಲಿ
ಆ ದಾರಿ ಅಹೂರಾಗೆ ಪರಿಚಿತವಾಗಿತ್ತು.
ದೋಣಿ ಯನ್ನು ಕಾಯುತ್ತ ಅಂಬಿಗರು ಕುಳಿತಿದ್ದರು. ಮೆನ್ನನನ್ನು
ಕಂಡೊಡನೆ, “ನಿಜವಾ ? ನಿಜವಾ ?” ಎಂದರು ಅವರು. ಸ್ವಲ್ಪ ಹೊತ್ತಿಗೆ
ಮುಂಚೆ ಅಲ್ಲಿಂದ ಹೊರಟು ಹೋದ ದೋಣಿಯ ಜನ ಆ ಸುದ್ದಿ ಹೇಳಿದ್ದರು-
ಆ ಅಂಬಿಗರು ಯಾರು ಎಂಬುದನ್ನು ಅರಿಯದೆ.