ಪುಟ:Mrutyunjaya.pdf/೫೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೭೨

ಮೃತ್ಯುಂಜಯ

ಮೆನ್ನ ಮರಳಿನ ಮೇಲೆ ಕುಳಿತು. ನ್ಯಾಯಸ್ಥಾನದಲ್ಲಿ ನಡೆದುದನ್ನು ಚುಟುಕಾಗಿ ತಿಳಿಸಿದ.
ಅಂಬಿಗರ ದುಗುಡ ಕಪೋಲಗಳ ಮೇಲೆ ಹರಿಯುವ ಉಷ್ಣ ಪ್ರವಾಹ
ವಾಯಿತು. ಮೆಲ್ಲನೆ ಅಳುತಳುತ ಒಬ್ಬನೆಂದ :
"ಮೆನೆಪ್ಟಾ ಅಣ್ಣ ಏನು ಹೇಳಿದ್ರು ?”
“ ಮೆನೆಪ್ಟಾ ಅಣ್ಣ ಅಂದ್ರು: ಮಹಾಪ್ರಭುಗಳೇ, ಮಹಾ
ಅರ್ಚಕರೇ, ಅಮಾತ್ಯರೇ, ಪ್ರತಿಷ್ಠಿತರೇ ! ಕಿವಿಗೊಟ್ಟು ಕೇಳಿ ! ನಮಗೆ
ಜನರಿಗೆ ಸಿಟ್ಟು ಬಂದಾಗ, ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ
ಕೊಚ್ಚಿಹೋಗೀರಿ! ಮಹಾಪೂರ ಇಳಿದಾಗ ಕಂಡುಬರೊ ಜಗತ್ತು ಹೊಸದು,
ಆ ನೂತನ ಸೃಷ್ಟಿ ನಿರಾತಂಕವಾಗಿ ಆಗಲಿ ಅಂತ-ಇಗೋ-ರಾನನ್ನು !
ಪ್ಟಾನನ್ನು, ಅಮನ್ ನನ್ನು ಅನನ್ಯ ಭಾವದಿಂದ ನಾನು ಪ್ರಾರ್ಥಿಸೇನೆ....
ಅರ್ಥವಾಯ್ತಾ ? ”
“ ಇಲ್ಲ........"
“ ಹ್ಞ. ಬಹಳ ಅರ್ಥವಿರೋ ಮಾತು, ಮುಂದೆ ಸಹಸ್ರ ಸಹಸ್ರ
ವರ್ಷ ಅದು ಧ್ವನಿಸ್ತದೆ, ಪ್ರತಿಧ್ವನಿಸ್ತದೆ....ಕಡೆಗೆ ಒಂದು ದಿನ ಜನರಿಗೆ ಸಿಟ್ಟು
ಬರದೆ....”
ತನ್ನೊಳಗಿನ ಯಾತನೆಯನ್ನು ಮರೆಸಲು ಮೆನ್ನನಿಗೆ ನೆರವಾಯಿತು
ಮಾತಿನ ಆ ವೈಖರಿ.
ಅಹೂರಾಳೊಡನೆ ಬಟಾ ಬಂದು ತಲಪಿದ. ಧ್ವನಿ ತೆಗೆದು
ರೋದಿಸಲು
ಹೊರಟ ಅಂಬಿಗರನ್ನು “ಶ್ ! ” ಎಂದು ಬಟಾ ತಡೆದ.
" ಆಗಬಾರದ್ದು ಆಯ್ತು. ಇನ್ನು__ಮುಂದಿನ ಕೆಲಸ,” ಎಂದ.
ಮೆನ್ನ ಎದ್ದು ಹೇಳಿದ :
“ ಆ ಅಂಜೂರ ಮರದ ಕೆಳಗೆ ಕೂತಿದ್ದೇನೆ. ಎಲ್ಲ ಆದಾಗ ನನ್ನನು
ಕರೀರಿ.”

"ಹೂಂ, ಅಯ್ಯ.”
ಸೆಣಬಿನ ದೊಡ್ಡ ಚೀಲದಲ್ಲಿ ವಿನಿಮಯ ಸಾಮಗ್ರಿಗಳಿದ್ದವು.
ಅಹೂರಾಳ
ಗಂಡ ಅದನ್ನು ಹೊತ್ತುಕೊಂಡ.