ತಕ್ಷಣವೇ ಹೊರಟು ಬಂದ್ವಿ. ಇದ್ದದ್ದನ್ನೆಲ್ಲ ತೆಗೆದುಕೊಂಡು ಬಂದಿದ್ದೇವೆ. ನೂರಾರು ಉಟೆನ್ ಮೌಲ್ಯವೇ ದೊರೀಬೌ.” ಸೆಣಬಿನ ಬಟ್ಟೆಯ ಸೊಂಟದ ಪಟ್ಟಿಗಳು, ಜೊಂಡಿನ ಪಾದರಕ್ಷೆಗಳು, ಮರದ ಹಾವುಗೆಳು, ಕೈಗೋಲು, ಹೊಡೆಗೋಲು, ಜೇನು ತುಂಬಿದ್ದ ಜಾಡಿ ಗಳು, ಸೆಪ್ಟೆರಸ್ ಹಾಳೆಗಳು, ಹಾಲುಗಲ್ಲಿನ ಮರಿಗೆ-ಪಾತ್ರೆ, ಜೊಂಡಿನಿಂದ ಹೆಣೆದ ಪುಟ್ಟ ಚಾಪೆಗಳು_ತಟ್ಟೆಗಳು, ತನ್ನ ಸಂತಸವನ್ನು ನುಂಗುತ್ತ ಅಪೋಫಿಸ್ ಅಂದ : "ಶವಲೇಪನ ದಿವ್ಯ ಜೀವನಕ್ಕೆ ಸಾಕ್ಷಿ. ನಾಳೆಯ ಬದುಕಿಗೆ ತಯಾರಿ. ನೂರಾರು ಉಟೆನ್ ಮೌಲ್ಯ ತೆತ್ತರೂ ತಪ್ಪಲ್ಲ. ಇಲ್ಲೇ ಇರಿ, ಬಂದೆ;” ಹಣತೆಯನ್ನು ಹೊಸ್ತಿಲ ಮೇಲಿರಿಸಿ ಅಪೋಫಿಸ್ ಒಳಹೋದ. ಸ್ವಲ್ಪ ಹೊತ್ತಿನಲ್ಲೇ ಸಾಮಗ್ರಿಗಳೊಡನೆ ಹೊರ ಬಂದ. ಸರ್ಜನೆ ಎಣ್ಣೆ ತುಂಬಿದ ಜಾಡಿ ; ಸೆಪ್ಟೆರಸ್ ದಂಟಿನಿಂದ ಮಾಡಿದ ಪಿಚಕಾರಿ : ತಾಮ್ರದ ದಬ್ಬಣ, ಸೆಣಬಿನ ದಾರ ; ತೂತು ಮುಚ್ಚುವ ಬೆಣೆ ; ಸೆಣಬಿನ ಪಟ್ಟಿಯ ಸುರುಳಿ ; ರಾಳ ; ಅನೂಬಿಸ್ ಮುಖವಾಡ. ಅವನೆಂದ : “ ನೋಡಿದಿಯಾ ತಾಯಿ ? ಬಡವರು ಶ್ರೀಮಂತರು ಅಂತ ನಾನು ವ್ಯತ್ಯಾಸ ಮಾಡೋದಿಲ್ಲ. ಎಲ್ಲ ಉತ್ತಮ ಸಾಮಗ್ರಿ, ಇದಕ್ಕೆ ವಿನಿಮಯವಾಗಿ ನೀವು ತಂದಿರೋದು ಸಾಲದು.” ಅಹೂರಾ ನಿಟ್ಟುಸಿರು ಬಿಟ್ಟಳು. “ ನಮ್ಮ ಸೆಣಬಿನ ಚೀಲ ಮಾತ್ರ ನಮಗೇ ಬೇಕು, ಅಯ್ಯ "ಅಷ್ಟು ದೊಡ್ಡದು ಯಾತಕ್ಕೆ ನಿಮಗೆ ? ಲೇಪನ ಸಾಮಗಿ ಒಯ್ಯೋಯದಕ್ಕೆ ಸಣ್ಣ ಕೈಚೀಲ ಕೊಡ್ತೇನೆ__ಉಚಿತವಾಗಿ.” “ ಸಣ್ಣ ಕೈಚೀಲವಂತೂ ಕೊಡಲೇಬೇಕು ಆಯ್ಕ, ಆ ದೊಡ್ಡ ಚೀಲ .ನೆರೆಮನೆಯಿಂದ ಎರವಲು ತಂದದ್ದು. ವಾಪಸು ಕೊಡ್ಬೇಕು.” “ ಹಾಗಾದರೆ ಕತ್ತಿನಲ್ಲಿರೋ ಸರಗಳನ್ನು ಕೊಡು.” "ಮೂರು ಕವಡೇ ಸರ. ಎರಡು ತಾಮ್ರದ್ದು, ಒಂದು ಬೆಳ್ಳೀದು. ಎಲ್ಲಾ ಕೊಡಲಾ ?”
ಪುಟ:Mrutyunjaya.pdf/೫೮೮
ಗೋಚರ