ಪುಟ:Mrutyunjaya.pdf/೬೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೯೭

(ನಾಮೋಚಾರ ಒಂದು ಕ್ಷಣ ಜಯಘೋಷವಾಯಿತು. ಮರುಕ್ಷಣವೇ
ಮತ್ತೆ ರೋದನವಾಗಿ ಮಾರ್ಪಟ್ಟಿತು. ರಾಮೆರಿಪ್ ಟಾ ಮೌನವಾಗಿ ಕಂಬನಿ
ವಿುಡಿದ.)
“ಖಿವವ ಬೇಕಲ್ಲ?”
ಬಟಾನ ಹೊರತು ಉಳಿದವರಿಗೆಲ್ಲ ವಿಸಯ. ('ಖಿವವ ಅನೂಬಿಸ್
ದೇವತೆಗೆ ಬೇಕೇನೋ ಕುಡಿಯಲು?) ಬುತ್ತಿಗಳನ್ನಿರಿಸಿದ್ದ ಕಡೆ ಖಿವವ ತುಂಬಿದ ಇಡಿಯ ಚೀಲವಿತ್ತು.
ಅಹೊರಾ ಅದನ್ನೆತ್ತಿ ಹಿಡಿದಳು. ವಿಸರ್ಜನ ತೈಲ ಬಳಸಿದ ಮೇಲೆ ಬರಿದಾಗಿದ್ದ
ಜಾಡಿಗೆ ಮೆನ್ನ ಖಿವವ ಬಗ್ಗಿಸಿಕೊಂಡ ಪಿಚಕಾರಿ ಉಪಯೋಗಿಸಿ ಆ ಖಿವವ
ವನ್ನು ತೆರವಾಗಿದ್ದ ಒಡಲು ಪ್ರದೇಶಕ್ಕೆ ಗುದದ್ವಾರದ ಮೂಲಕ ತಳ್ಳಿದ.
ಮತ್ತೊಮ್ಮೆ ಬೆಣೆ ಇರಿಸಿ ದಾರವನ್ನು ಹೊಲಿಗೆ ಹಾಕಿ ಮುಚ್ಚಿದ.
ಮುಂದೆ ಮೆನ್ನನ ಸೂಚನೆಯಂತೆ ಬಟಾ, ಬೆಕ್ ಮತ್ತು ಔಟ ಶವದ
ಮೈಗೆ ರಾಳ ಬಳೆದರು. ಕಾಲುಗಳಿಗೂ ಕೈಗಳಿಗೂ ಮುಂಡ ರುಂಡಗಳಿಗೂ
ಒಂದೊಂದಾಗಿ ಸೆಣಬಿನ ಪಟ್ಟಿಯನ್ನು ಮೆನ್ನ ಬಿಗಿಯಾಗಿ ಸುತ್ತಿದ. ಮುಖದ
ಆಕಾರ ರೂಪ ಒಂದಷ್ಟೂ ಬದಲಾಗದಂತೆ ಪಟ್ಟಿ ಅಂಟಿಸಿದ.
ಇಷ್ಟಾದ ಮೇಲೆ ಮೆನ್ನ ಮುಖವಾಡವನ್ನು ಬಿಚ್ಚಿ ಕೆಳಗಿರಿಸಿದ.
“ನಾನೀಗ ಅನೂಬಿಸ್ ಅಲ್ಲ, ಕಿರಿಯ ದೇವಸೇವಕ ಮೆನ್ನ ಮುಖ
ವಾಡದ ರಕ್ಷಣೆ ಇಲ್ಲದವನು. ಇನ್ನು ಅನೂಬಿಸ್ ಪಾತ್ರ ನೀರಾನೆ ಪ್ರಾಂತ
ತಲಪಿದ ಮೇಲೆ_ನಾಯಕರನ್ನು ಗೋರಿಗೆ ಕಳಿಸುವಾಗ.”
ಆ ಪಯಣಿಗರಲ್ಲೆಬ್ಬೂಬ್ಬ ಮೆನ್ನ, ಆದರೂ ಅವರಿಗಿಂತ ಭಿನ್ನ ಸಾವು
ಮರುಹುಟ್ಟುಗಳಿಗೆ ದೇವ ದೇವತೆಗಳಿಗೆ ಹತಿರವನಾದ ಆ ಆಯನ ಬಗೆಗೆ
ಆ ಜನರಿಗೆಲ್ಲ ಗೌರವ
ಮೆನ್ನ ಬಳಲಿದ್ದ. ಬಿಸಿಲು ಮಾಯವಾಗಿ, ಮುಚ್ಚಂಜೆಯ ಗಾಳಿ
ತಣುಪನ್ನು ತ೦ದಿತು. ದೋಣೆಯ ಹೊರಗೆ ಆ೦ಗೆಗಳನು ಇಳಿಬಿಟ್ಟ ನದಿ
ಯಿಂದ ನೀರನ್ನೆತ್ತಿಕೊಂಡು ತನ್ನ ಮುಖಕ್ಕೆ ರಾಚಿದ. ರಾಮೆರಿಪಟಾನ ಬಳಿ
ಕುಳಿತು ರಕ್ಷಿತ ಶವವನ್ನು ದಿಟ್ಟಿಸಿದ.