ಪುಟ:Mrutyunjaya.pdf/೬೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೯೮

ಮೃತ್ಯುಂಜಯ

ಬಟಾ ಮೆನ್ನನೊಡನೆ ಅಂದ :
“ ಅಯ್ಯ, ದೋಣಿ ನಿಲ್ಲಿಸೋಣ ಅಂದಿರಿ, ಬುತ್ತಿಯೂಟಕ್ಕೆ.”
“ ಹ್ಜ, ಈಗ ನಿಲ್ಲಿಸಬಹುದು.”
ಅಂಬಿಗರು ದೋಣಿಯನ್ನು ದಡ ಮುಟ್ಟಿಸಿದರು.
ಮೆನ್ನ ನೀರಿನಲ್ಲಿಳಿದು ಸ್ನಾನ ಮಾಡಿದ. ಕೈಕಾಲು ಆಡಿಸಿ ಅತ್ತಿತ್ತ
ಓಡಾಡಿ, ದೋಣಿಯ ಬಳಿಗೆ ಮರಳಿದವರಿಗೆ ಅವನೆಂದ :
“ ನಾನು ಎಷ್ಟೋ ಶವ ಕಂಡಿದ್ದೇನೆ. ಆದರೆ ಇಷ್ಟೊಂದು ಪ್ರಶಾಂತವಾದ
ಮುಖಮುದ್ರೆ ನೋಡಿರೋದು ಇದೇ ಮೊದಲು. ಯಾವ ಪೆರೋ ಸಾಟ ಈ
ಜನ ನಾಯಕರಿಗೆ ? ಈ ನಾಯಕ ಸಮಾಜ ಕಟ್ಟಲು ಹೊರಟವರು. ಪೆರೋ
ಲ್ ಮಹಾ ಅರ್ಚಕ-ಅಮಾತ್ಯರ ಬಗೆಗೆ, ಐಗುಪ್ತ ಸಮಾಜವನ್ನು ಕುರಿತು, ತೀರ್ಪು
ಕೊಟ್ಟವರು. ಇವರನ್ನು ನೋಡಿದ್ದೇನೆ, ಇವರ ಜತೆ ಮಾತಾಡಿದ್ದೇನೆ ಅಂತ
ನನಗೆ ಹೆಮ್ಮೆ ನೀವೋ ಅವರೊಂದಿಗೆ ದುಡಿದವರು. ಮಹಾ ಅದೃಷ್ಟ
ವಂತರು.....
" ಬುತ್ತಿ ಹಂಚುವ ಹೊಣೆ ಅಹೋರಾಳದು. ಪಯಣದ ದಿನಗಳಿಗೆ ಸಾಲು
ವಷ್ಟು ಕಾಯ್ದಿರಿಸಿ, ಅವಳು ಬುತ್ತಿಯ ವಿತರಣೆಗೆ ಸಿದ್ಧಳಾದಳು.
ಪಂಡಿದೆ.?
“ ಗೋರಿ ತಲಪೋವರೆಗೂ ನಾಯಕರು ಉಣೋದಿಲ್ಲ. ಅವರ
ಮಗ್ಗುಲಲ್ಲಿ ಅವರಿಗೆ ಪ್ರಿಯವಾದುದನ್ನು ಇಟ್ಟರೆ ಸಾಕು. ಸಹಚರರು ಎಂದೂ
ಉಪವಾಸವಿರಬಾರದು. ನಾವು ಉಣ್ಣದೆ ದೇಹ ದಂಡಿಸಿದರೆ ಅವರಿಗೆ ಅಸಮಾ
ಧಾನವಾಗ್ತದೆ. ರಾಮರಿ, ನೀನೂ ಉಣ್ಣೆಕು ; ದೇವಸೇವಕನಾದ ನಾನೂ
ಉಣ್ಬೇಕು.”
ಬಟಾ ಗಟ್ಟಿಯಾಗಿ ಅಂದ :
“ ಅಣ್ಣನಿಗೆ ಇಷ್ಟವಾದದ್ದು ರೊಟ್ಟಿ ಮತ್ತು ಒಣಗಿದ ಮೀನಿನ
ಉಪ್ಪೇರಿ.”
ಅದನ್ನು ಅಹೂರಾನೂ ಬಲ್ಲಳು. ಆ ಆಹಾರವನ್ನು ಆಗಲೇ ಅವಳು
ಎಲೆಯಲ್ಲಿ ಇರಿಸಿದ್ದಳು.
“ ನೀನೇ ಕೊಡು ತಂಗಿ,” ಎಂದ ಬಟಾ.
ತಗ್ಗಿದ ಧ್ವನಿಯಲ್ಲಿ ಅಹೂರಾ ನುಡಿದಳು :