ಪುಟ:Mrutyunjaya.pdf/೬೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೯೬

ಮೃತ್ಯುಂಜಯ

ವನ್ನು ನಾನು ಧರಿಸುವುದು ಸಾಧ್ಯವಿದ್ದರೆ ? ಅದರೊಳಗೆ ನಾನು ನಾನಾಗಿಯೇ
ಇರಬಹುದು. ಇಷ್ಟವಾದಾಗಲೆಲ್ಲ ನಗಬಹುದು, ಅಲ್ಲದೆ ಅಳಬಹುದು...']
ತೋಳಮುಖ ಪಶ್ಚಿಮದತ್ತ ವಾಲಿದ್ದ ರಾನನ್ನು ನೋಡಿತು.
ಮೆನ್ನನೆಂದುಕೊಂಡ : ಹೊತ್ತಾಯಿತು. ಇನ್ನು ವಿಸರ್ಜನ ಕ್ರಿಯೆ....
“ವಿಸರ್ಜನೆ ಹಿಡಿಯಲು ಒಂದು ದೊಡ್ಡ ಮಡಕೆ ಬೇಕು.”
ದೋಣಿಯ ಸಾಮಾನುಗಳ ಮೂಲೆಯಲ್ಲಿ ಸಾಕಷ್ಟು ದೊಡ್ಡ ಮಣ್ಣಿನ
ಮಡಕೆ ಇತ್ತು. ಬಟಾ ಅದನ್ನು ಎತ್ತಿ ತಂದು ಮೆನ್ನನ ಕೈಗಿತ್ತ. ಬೆಕ್
ಔಟರಿಗೆ ಮೆನ್ನ ಸನ್ನೆ ಮಾಡಿದ. ಅವರು ಶವವನ್ನು ಎತ್ತಿ ಹಿಡಿದರು. ಗುದ
ದ್ವಾರದ ಕೆಳಗೆ ಮಡಕೆಯನ್ನಿರಿಸಿ, ದ್ವಾರದ ಹೊಲಿಗೆಯನ್ನು ಮೆನ್ನ ಬಿಚ್ಚಿ
ಬೆಣೆಯನ್ನು ತೆಗೆದ. ಸಂಜ್ಞೆಯನ್ನು ಗಮನಿಸಿ ಜನ ಒಸೈರಿಸನ ಮೆನೆಪ್
ಟಾನ ನಾಮೋಚ್ಛಾರ ಆರಂಭಿಸಿದರು. ಗುದದ್ವಾರದ ಮೂಲಕ
ಒಂದಿಷ್ಟು ಬಣ್ಣದ ನೀರು ಹೊರಬಂತು. (ರಾಮರಿಪ್ಟಾ ಧೂಪ ಪಾತ್ರೆಗೆ
ಸುಗಂಧ ದ್ರವ್ಯ ಎರಚಿದ.) ಶವದ ಒಡಲಲ್ಲಿ ಗುಡುಗುಡು ಸದ್ದಾಯಿತು.
ತಮ್ಮ ನಾಯಕ ಮತ್ತೆ ಜೀವಂತನಾಗುತ್ತಿದ್ದಾನೇನೊ ಎನಿಸಿತು ಬೆಕ್ ಔಟ
ರಿಗೆ, ಏನೋ ಸಪ್ಪಳ ಕೇಳಿಸಿತೆಂದು ನಾಮೋಚ್ಛಾರ ಬಲಗೊಂಡಿತು. ಒಳಗಿ
ನಿಂದ ಗುದದ್ವಾರಕ್ಕೆ ಅಡ್ಡ ಬಂದುದೇನೋ ಬದಿಗೆ ಸರಿದೊಡನೆ, ಜಠರ ಕರುಳು
ಗಳು ಬೆಂದು ರೂಪುಗೊಂಡಿದ್ದ ಘನದ್ರವ ಮಿಶ್ರಣ ತೂಬುಗಟ್ಟಿ ಹೊರಕ್ಕೆ
ಹರಿಯಿತು.
ಮೆನ್ನನನ್ನು ಸವಿಾಪಿಸಿ ಬಟಾ ಕೇಳಿದ :
“ಇನ್ನೊಂದು ಪಾತ್ರೆ ಬೇಕಾದೀತಾ? ಇಲ್ಲವಲ್ಲ. ಏನು ಮಾಡೋಣ ?”
“ಬೇಡ. ಇದು ಸಾಕಾಗ್ತದೆ.”
ಶರೀರದಿಂದ ದ್ರಾವಕ ಹೊರಬರುವುದು ನಿಂತಿತು. ತುಂಬಿದ್ದ ಪಾತ್ರೆ
ಯನ್ನು ಮನ್ನ ನದಿಯಲ್ಲಿ ತೇಲಿ ಬಿಟ್ಟ. ಅವನೆಂದ :
“ನಮ್ಮನ್ನು ಹಿಂಬಾಲಿಸಿ ಬರೋ ದೋಣಿಗಳು ಈ ಪಾತ್ರೆನ ನೋಡ
ದಿರೋದು ಮೇಲು. ಈಟ ನೋಡಿದೆನಲ್ಲ, ಕೊಡಿ.”
ಬಟಾ ಈಟಿಯನ್ನೆತ್ತಿಕೊಟ್ಟ. ಮೆನ್ನ ಅದರ ಮೊನೆಯಿಂದ ಮಡಕೆ
ಯನ್ನು ಚುಚ್ಚಿ, ಚಚ್ಚಿ ಒಡೆದ. ಅದರೊಳಗಿದ್ದುದು ನೀರಿನ ಪಾಲಾಯಿತು.