ಪುಟ:Mrutyunjaya.pdf/೬೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಡಲಿ?” ಹಾಡಿದು ಕೇಳಿದ ಮೇಲೆ ಕೊಳಲಲ್ಲಿ ಆ ಹಾಡು ಬಾರಿಸಬೇಕೂಂತ ನನಗೆ ಅನಿಸಿತು? " “ ಸಾವು ನನ್ನ ಮುಂದಿದೆ ಇಂದು ಅ ಶ್ಟೊಂದು ಶೋಖಾ ಪೂರ್ಣ್ అల్ల... ” ಬಟಾ ದೋಣಿಯ ಅಮನ್ ದೇವರ ಮೂಲೆಯಲ್ಲಿರಿಸಿದ್ದ ತನ್ನ ಕೊಳಲ ನ್ನೆತ್ತಿಕೊಂಡ. " ನೀವು ಒಂದೊಂದೆ ಸಾಲು ಅಂತಾ ಹೋಗಿ. ಬಾರಿಸ್ತೇನೆ" ಉತ್ಸಾಹದ ಧ್ವನಿಯಲ್ಲ, ಪ್ರಲಾಪವೇ. ಆದರೂ ಆ ದುಃಖವನ್ನು ತುಸು ಶಮನಗೊಳಿಸಲು ಸಹಕಾರಿ. "ಸಾವು ನನ್ನ ಮುಂದಿದೆ ಇಂದು..." ಬಟಾ ಕೊಳಲಿನ ತೂತುಗಳ ಮೇಲೆ ಬೆರಳುಗಳನ್ನು ಓಡಿಸಿದ. "ಸಾಂಬ್ರಾಣಿ ಸೂಸುವ ಸುವಾಸುನೆಯಂತೆ." ಕೊಳಲಿನಿಂದಲೂ ಅದೇ ಪದಗಳು. "ಬಿರುಗಾಳಿಯ ದಿನ ಊಹೂಂ ಮಂಜು ಮುಸುಕಿದ ದಿನ ಹಡಗಿನ ಹಾಯಿಯ ಕೆಳಗೆ ಕುಳಿತವನಂತೆ." ಒಂದೊಂದು ಪದ್ಯದ ಸಾಲಗಳು ಮುಗಿದ ಮೇಲೆ ಬಟಾ ಆ ಪದಗಳನ್ನು ಪೂರ್ತಿಯಾಗಿ ತಾನೇ ಕೊಳಲಿನ ಮೇಲೆ ನುಡಿಸಿದ. ಹಾಡಿನ ಕೊನೆಯ ಪದ್ಯವನ್ನೂ ಬಟಾ ಬಾರಿಸಿ ಆದ ಬಳಿಕ ಮನನೆಂದೆ "ದಿನ ಕಳೆದಂತೆ ಶೋಕಭಾರ ಕಮ್ಮಿಯಾಗಬೇಕು; ಗಾಯ ಮಾಯ ಬೇಕು." ಮಂಜು ಕವಿದ ಬೆಳಿಗ್ಗೆ ದಂಡು ಹೊತ್ತ ದೋಣಿಗಳ ವೇಗ ಕಡಿಮೆ ಯಾಯಿತು. ಮಹಾ ಅರ್ಚಕನ ಸ್ನಾನಕ್ಕಾಗಿ, ಅಡುಗೆಗಾಗಿ, ದಡ ಸೇರಿದಾಗ ಬಕಿಲ ಹೇರು ದೋಣಿಯವರನ್ನು ಹೀಗೆಳೆದ. ಆ ದೋಣಿಯಲ್ಲಿದ್ದ ದಾಸದಾಸಿಯರಿಗೆ ಯೋಧರಿಗೆ ಕೂಡಾ ತನ್ನ ಚಾಚಟಯ ರುಚಿ ತೋರಿಸಿದ ಇದೆ