ಪುಟ:Mrutyunjaya.pdf/೬೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಡಬೇಕು ಎನಿಸಿತು ಶೀಬಾಳ ಗಂಡನಿಗೆ. ಯೋಚಿಸಿ, 'ಅದು ದುಡುಕು ನರ್ತನೆಯಾಗ್ತದೆ, ಪ್ರಯೋಜನವಿಲ್ಲ' ಎಂಬ ತೀರ್ಮಾನಕ್ಕೆ ಬಂದ. ಮಹಾ ಅರ್ಚಕ ತನ್ನ ಪೀಠದ ಮೇಲೆ ಕುಳಿತು ಉಪಾಹಾರ ಸ್ವೀಕರಿಸ ತೊಡಗಿದಂತೆ ಎದುರು ದಿಕ್ಕಿನಿಂದ ಹೇರು ದೋಣಿಯೊಂದು ಬರುತ್ತಿದ್ದುದು ಕಾಣಿಸಿತು. ಹೇಸಾಟ್‌ನ ಸೂಚನೆಯಂತೆ ಬಕಿಲ "ನಿಲ್ಲು, ಹತ್ತಿರಬಾ” ಎಂದು ಆ ದೋಣಿಕಾರನಿಗೆ ಕೂಗಿ ಹೇಳಿದ, ಸನ್ನೆ ಮಾಡಿದ. ದೋಣಿ ಹತ್ತಿರ ಬಂತು. ದೋಣಿಕಾರನೂ ಅವನನ್ನು ಅನುಸರಿಸಿ ಅಂಬಿಗರೂ ಇದ್ದಲ್ಲೇ ಮಂಡಿಯೂರಿದರು. ದೇವತಾಮೂರ್ತಿಗೆ, ಧರ್ಮಗುರುವಿಗೆ ಭಕ್ತಿಪೂರ್ವಕವಂದನೆ. ಕೆ ಬಾಯಿಗಳ ಕೆಲಸ ಮುಂದುವರಿಸುತ್ತ ಹೇಪಾಟ್ ಅಂದ "ಕೇಳು" ಬಕಿಲ ಕೇಳಿದ "ಏಯ್! ಶವ ತಗೊಂಡು ಹೋಗ್ತಿದ್ದ ಒಂದು ದೋಣಿ ದಾರೀಲಿ ಸಿಕ್ತಾ?" ದಂಡನ್ನೂ ಬಕಿಲನನ್ನೂ ನೋಡುತ್ತ ದೋಣಿಕಾರನೆಂದ

“ ಇಲ್ಲ ದಂಡನಾಯಕರೇ, ಈ ಮಂಜಿನಲ್ಲಿ ಶವವನ್ನೂ ಕಾಣೆ ಜೀವಂತ ಮನುಷ್ಯರನ್ನೂ ಕಾಣು."

“ ಏಯ್ಟ್ ! ಹುಷಾರ್ ! ನಿನ್ನೆ ಹಗಲು ಯಾರೂ ಸಿಗಲಿಲ್ಲ ?” "ఇల్ల ದಂಡನಾಯಕರೇ," ಎಂದ ದೋಣಿಕಾರ, ತಾನು ಕಂಡಿದ್ದ ಬಟಾ ಬಳಗದ...ಹಾಗೂ ನಾಯಕನ ರಕ್ಷಿತ ಶವದ ನೆನಪನ್ನು ಬದಿಗೆ ಸರಿಸುತ್ತ. ಹೇಪಾಟ್ ತೊಲಗು" ಎನ್ನುವಂತೆ ಕೈಸನ್ನೆ ಮಾಡಿದ. ಬಕಿಲ 'ಹೊರಡು!" ಎಂದ. ದೋಣಿಕಾರನೂ ಅಂಬಿಗರೂ ಎದ್ದು ನಿಂತು ಮತ್ತೊಮ್ಮೆ ತಲೆಬಾಗಿ ನಮಿಸಿದರು ದೋಣಿಕಾರ ಚುಕ್ಕಾಣಿ ಕಿಗೆತ್ತಿಕೊಂಡ. ಅಂಬಿಗರು ಹುಟ್ಟು ಹಾಕಿದರು. 0 0 0 0 ಬಟಾ ಅಬು ಯಾತ್ರಿಕರೊಡನೆ ಮೆಂಫಿಸಿಗೆ ಹೋದಾಗಿನ ವೇಗವೇ.