ಪುಟ:Mrutyunjaya.pdf/೬೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ನೋಡುತ್ತ ಅಂಗಾತ ಮಲಗಿದ ನಾಯಕ. ಲೇಪನದ ಪ್ರಭೆ ಅಳಲಿನ ಕೊಡ ಗಳನ್ನು ಕುಕ್ಕಿತು. ಮತ್ತೆ ರೋದನ ಆಕಾಶ ಮುಟ್ಟಿತು. ಅದರ ಅಲೆ ದುರ್ಬಲ ವಾದೊಡನೆ, ಬಟಾ ನಾಮೋಚ್ಚಾರ ಆರಂಭಿಸಿ ಮಾರ್ದನಿ ಪಡೆದ. ಖೈಮ್ ಹೊಟೆಪ್ ಓಡುತ್ತ ಬಂದ. ಅವನ ಹಿಂದೆ ಊರಿನ ಹಿರಿಯರು; ಅವರ ಹಿಂದೆ ನೂರಾರು ಜನ; ಅವರ ಹಿಂದೆ ಬೇರೆ ನೂರಾರು ಜನ; ಅವರ ಹಿಂದೆಯೂ ನೂರಾರು ಜನ. ಹೀಗೆಯೇ. ಅಲೆಯ ಬೆನ್ನಲ್ಲಿ ಅಲೆ. ದೋಣಿಕಟ್ಟಿ ಯಿಂದ ಹೊರಟ ಶೋಕಧ್ವನಿ ನೀರಾನೆ ಪ್ರಾಂತದ ಮುಖ್ಯಪಟ್ಟಣದ ಸಹಸ್ರಾರು ಮನೆಗಳ ಕದಗಳನ್ನು ತಟ್ಟಿತ್ತು, ಕಿವಿಗಳನ್ನು ಮುಟ್ಟಿತ್ತು. ತನ್ನನ್ನು ದಳಪತಿಯಾಗಿ ಮಾಡಿದ್ದ ನಾಯಕನ ಲೇಪಿತ ಶವದೆದುರು ನಿಂತು, “ಹೋ!” ಎಂದು ಎರಡೂ ತೋಳುಗಳನ್ನು ಮುಂದಕ್ಕೆ ಚಾಚುತ್ತ, ಕರ್ಣಭೇದಕವಾಗಿ ಖ್ನೆಮ್ ಆರ್ತನಾದ ಮಾಡಿದ. ಕುಸಿಕುಳಿತು, ಶವದ ಎದೆರು ಮೇಲೆ ಕೈಗಳನ್ನು ಚ್ಚಾಚಿ, ತಲೆಯನ್ನಿರಿಸಿದ, "ಓ--ಓ--ಓ" ಎಂದು ರೋದನ ಮುಂದುವರಿಸಿದ. ರಾಮೆರಿಪ್ ಟಾಗೆ ತಾಯಿಯದೇ ಯೋಚನೆ. “ಅಮ್ಮನ ಹತ್ತಿರ ಇರು.” ಎಂದಿದ್ದ ತಂದೆ __ ಅವನು ನಾಯಕನಾದ ಆ ದೆನ . ಅಮ್ಮನ ಜತೆಯಲ್ಲೇ ಇದ್ದ ವನು ತಂದೆಯನ್ನು ಕರೆತರಲೆಂದು ಮೆಂಘಸಿಗೆ ಹೋದ - ರಾಜರಾಣೆಯರ ಆವಾಸಸ್ಥಾನಕ್ಕೆ-ಪಾಪನಗರಿಗೆ. ಮರಳಿ ಬಂದುದಾಯಿತು. ಇಲ್ಲಿ ಎಲ್ಲರೂ ಇದ್ದಾರೆ. ತಂದೆಯ ಹತ್ತಿರ ಎಲ್ಲರು ಇದ್ದಾರೆ. ಅಲ್ಲಿ ತಾಯಿ ಒಬ್ಬಳೇ. ಇಲ್ಲಿಗೆ ಬರುವುದು ಅವಳಿಗೆ ಕಷ್ಟವಾಗಬಹುದು. ತಾನು ಹೋಗಬೇಕು. ಅವಳ ಬಳಿ ಇರಬೇಕು. ಹುಡುಗ ಹೆಜ್ಜೆ ಮುಂದಿಟ್ಟು ದನ್ನು ಅಹೋರಾ ಕಂಡಳು. ಮಗುವನ್ನೆತ್ತಿ ಕೊಂಡು ಅವನ ಹಿಂದೆ ತಾನೂ ನಡೆದಳು. ಮೈಮರೆತಿದ್ದ ಆ ಸ್ಥಿತಿಯಲ್ಲೂ ಗುಂಪು, ಇಬ್ಭಾಗವಾಗಿ ರಾಮೆರಿಪ್ ಟಾನಿಗೂ ಅವನನ್ನು ಹಿಂಬಾಲಿಸಿ ಹೊರಟ ವಳಿಗೂ ದಾರಿ ಮಾಡಿಕೊಟ್ಟಿತು. (ಸ್ನೋಪ್ರು ಆಗಲೇ ನೆಜಮುಟಳಿಗೆ ಹೇಳಿದ್ದ ; " ಕೆಟ್ಟಿದ್ದೇನೋ ಸಂಭವಿಸಿದ ಹಾಗಿದೆ. ದೋಣಿಕಟ್ಟಿಗೆ ಹೋಗಿ ಬರ್ತೆನೆ. ನೀನು ನೆಘಸ್ ಳನ್ನು ನೋಡ್ಕೊ.”