ಪುಟ:Mrutyunjaya.pdf/೬೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೧೬

ಮೃತ್ಯುಂಜಯ

ಅವಳೆಂದಿದ್ದಳು:
“ಹೂಂ. ನೀನು ಹೋಗು. ಬೇಗ ಹೋಗು.”)
ಎದುರು ದಂಡೆಯೊಳಗಿನ ದಿಗಂತದಿಂದ ರಾ ಆಗಲೇ ಇಣಿಕಿ ನೋಡಿದ್ದ.
ನೆಗೆನೆಗೆದು ಒಂದು ಮೊಳ ಎತ್ತರಕ್ಕೆ ಏರಿದ್ದ. ಆದರೆ ಉರಿಯುವ ಕೆಂಪು
ಗೋಲದ ಭವ್ಯತೆಯತ್ತ ದುಃಖಾರ್ತರ ಲಕ್ಷ್ಯ ಹರಿದಿರಲಿಲ್ಲ.
ಪಟ್ಟಣದಿಂದ ನದೀತಟದತ್ತ ಜನರ ಅಲೆಗಳು ಮತ್ತೂ ಬಂದುವು.
ಸ್ನೊಫ್ರು ದೋಣಿಕಟ್ಟೆಯನ್ನು ತಲಪಿ, ಮೌನವಾಗಿ ಕಂಬನಿಗರೆ
ಯುತ್ತ, ಮೆನೆಪ್‌ಟಾನ ಕಳೇಬರವನ್ನು ದಿಟ್ಟಿಸುತ್ತ ಸ್ವಲ್ಪ ಹೊತ್ತು ನಿಂತ.
ಬಳಿಕ ನಿಟ್ಟುಸಿರು ಬಿಟ್ಟು, ಖ್ನೆಮ್ ಹೊಟೆಪ್ನ ಮೈ ಮುಟ್ಟಿ, "ಖ್ನೆಮು,
ಏಳು,” ಎಂದ.
ಖ್ನೆಮ್ ಹೊಟೆಪ್ ಎದ್ದು, ತಲೆಗೂದಲನ್ನು ಹಿಂದಕ್ಕೆ ತಳ್ಳಿ, ಸರಕ್ಕನೆ,
ತಿರುಗಿ, ನೆರೆದಿದ್ದ ಜನಸ್ತೋಮವನ್ನು ಅತ್ತು ಕೆಂಪಗಾಗಿದ್ದ ಕಣ್ಣುಗಳಿಂದ
ನೋಡಿ ದಿಗ್ಮೂಡನಾಗಿ ನಿಂತ. ತಮ್ಮ ಸಂಕಟದ ಮಧ್ಯೆಯೂ ಕೆಲವರೆಂದು
ಕೊಂಡರು: ದಳಪತಿ ಈಗ ಶಿಸ್ತು ! ಶಿಸ್ತು !? ಎಂದು ಗದರಿಸಬಹುದು.
ಹಾಗೆ ಆತ ಹೇಳದೆಯೇ ಜನ ಅರ್ಧವೃತ್ಯ ರಚಿಸಿದರು. ಸಾಲುಗಟ್ಟಿ
ದರು. ಒಬ್ಬರನ್ನೊಬ್ಬರು ಮೊಣಕೈಗಳಿಂದ ತಿವಿಯಲಿಲ್ಲ, ನೂಕಲಿಲ್ಲ-
ನುಗ್ಗಲಿಲ್ಲ. ಹೊಸದಾಗಿ ಬಂದವರು ಮೃತನ ಬಳಿ ಸಾರಲು ಇತರರು ಅವ
ಕಾಶವಿತ್ತರು,
ಇಪ್ಪುವರ್, ಅವನ ತಾಯಿ, ಹೆಂಡತಿ, ತಂಗಿ, ಮಗಳು.-ರಾಜ
ಗೃಹದ ನಿವಾಸಿಗಳು__ಮೆನೆಪ್ಟಾನೆದುರು ಕುಳಿತು ಕಣ್ಣೀರಿನ ಬೊಗಸೆ
ಕಾಣಿಕೆ ನೀಡಿದರು.
ನೆಫರುರಾ ಕಾಣಿಸಿಕೊಂಡು “ಅಣ್ಣಾ ! ಅಣ್ಣಾ !” ಎಂದು ಚೀರುತ್ತ
ಅತ್ತು, ಅಲ್ಲಿಂದ ನಿರ್ಗಮಿಸಿ ನೆಫಿಸಳ ಮನೆಯತ್ತ ಧಾವಿಸಿದಳು.
ರೈತರು, ಮೋಚಿಗಳು, ನೇಕಾರರು, ಬಡಗಿಗಳು ಮತ್ತಿತರ ಕುಶಲ
ಕೆಲಸಗಾರರು, ಕಲ್ಲುಕುಟಗರು,ವಿಮುಕ್ತದಾಸದಾಸಿಯರು ಬಂದರು.
ಸಮುದಾಯದ ಯಾತನೆಯಾಗಿತ್ತು ವೈಯಕ್ತಿಕ ದುಃಖ,