ಪುಟ:Mrutyunjaya.pdf/೬೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತುಂಜಯ

ಅಷ್ಟರಲ್ಲಿ "ನೆಫಿಸ್ , ಎದ್ದಿಯಾ?" ಎಂದು ನೆಜಮೂಟಳ ಪ್ರಶ್ನೆ ಕೇಳಿಸಿತು. ವೃದ್ಧೆ ಬಾಗಿಲು ತೆರೆದಳು. "ಬಂದರಾ ? ಬಂದರಾ?" ಎಂದು ಕೇಳುತ್ತ ನೆಫಿಸ್ ಕಣ್ಣು ಹೊಸಕಿ ಕೊಂಡು ಎದ್ದಳು. ಒಳಗೆ ಬಂದವಳು ನೆಜಮುಟ್. "ದೋಣಿ ಬಂತಂತೆ ನೆಫಿಸ್. ದೇವರು ದಯಾಮಯ." “ಬಂತಾ ? ಬಂತಾ ನನ್ನ ದೇವರೇ...” ಎನ್ನುತ್ತ ಪ್ರಯಾಸಪಟ್ಟು ನೆಫಿಸ್ ಎದ್ದಳು. ಮೂಲೆಯಲ್ಲಿರಿಸಿದ್ದ ಮೂರ್ತಿಗಳಲ್ಲಿಗೆ ನಡೆದಳು. ಐಸಿಸ್, ಬೆಸ್, ಥೊಎರಿಸ್. ಭಕ್ತಿಯಿಂದ ತಲೆಬಾಗಿ ನಮಿಸಿದಳು. ಬೀದಿಯಲ್ಲಿ ಜನ ದೋಣಿಕಟ್ಟೆಗೆ ಓಡುತ್ತಿದ್ದ ಸಪ್ಪಳ ಕೇಳಿಸಿತು. “ಎಲ್ಲರೂ ಕಟ್ಟೆಗೆ ಹೋಗ್ಲಿದ್ದಾರೆ. ಸ್ವಾಗತಕ್ಕೆ ಇರಬೇಕು, ಅಲ್ವಾ ನೆಜ್ ?" “ಹೂಂ.. ಪ್ರಯಾಣ ಸುಸೂತ್ರವಾಗಿ ಆದಂತಿಲ್ಲ, ಏನೋ ಸ್ವಲ್ಪ ತೊಂದರೆ.. ಗಂಡ ಹೋಗಿದ್ದಾನೆ,” ಎಂದಳು ನೆಜಮುಟ್, ತನ್ನೊಳಗಿನ ಕಸಿವಿಸಿಯನ್ನು ಆದಷ್ಟು ಮೃದುವಾಗಿ ಹೊರಗೆಡವುತ್ತ. "ಏನು ಹಾದೆಂದರೆ ? ಯಾಕೆ? ಏನಾಯ್ತು?" ನಾಲ್ಕೈದು ದಿನಗಳ ಹಿಂದೆ ನೆಫಿಸ್ಗೆ ಒಂದು ಕನಸು ಬಿದ್ದಿತ್ತು. ಗಂಡನ ಜತೆ ದೋಣಿವಿಹಾರ. ಮೆನೆಪ್ಟಾನೇ ಚುಕ್ಕಾಣಿ ಹಿಡಿದಿದ್ದ, ಅವರ ಪುಟ್ಟಿ ಪೆಪ್ಟೆರಸ್ ದೋಣಿ ನೀಲ ನದಿಯಲ್ಲಿ ದೊಡ್ಡ ವೃತ್ತ ರಚಿಸುತ್ತಿದ್ದಾಗೆ ಒಂದು ಮೊಸಳೆ ಬಂತು. ಮೆನೆಪ್ಟಾ "ಶ್!" ಎಂದ ಅದು ಹೊರಟೇ ಹೊಯಿತು. ಸ್ವಲ್ಪ ಹೊತ್ತಾದ ಮೇಲೆ ಅವಳಿಗೆ ನೋವು ಕಾಣಿಸಿಕೊಂಡಿತು. ಮೆನೆಪಟಾ ವೇಗವಾಗಿ ದೋಣಿಯನ್ನು ದಂಡೆಗೆ ನಡೆಸಿದ. ಅಷ್ಟರಲ್ಲಿ ಎಚ್ಚರ.....

    ಆ ಕನಸನ್ನು ನೆಫಿಸ್ ವೃದ್ಧೆಗೆ ಹೇಳಿದ್ದಳು. ನೆಜಮುಟ್ ಗೂ ತಿಳಿಸಿ ದ್ದಳು. ಯಾವ ಮಹತ್ವವನ್ನೂ ಆ ಸ್ವಪ್ನಕ್ಕೆ ಅವರ ನೀಡಿರಲಿಲ್ಲ.

“ಅದಕ್ಕೇನು ? ಪುಟ್ಟದು ಬಂದ ಮೆಲೆ ಗಂಡನ ಜತೆ ಒಮ್ಮೆ ವಿಹಾರಕ್ಕೆ ಹೋದರಾಯ್ತು," ಎಂದು ಹೇಳಿ ನೆಜಮುಟ್ ನಕ್ಕಿದ್ದಳು.