ಪುಟ:Mrutyunjaya.pdf/೬೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೩೪

ಮೃತ್ಯುಂಜಯ

ನೆಫಿಸಳ ಜತೆ ನೆಜಮುಟ್, ತಬಬುವಾ, ಅನ್ಪುವಿನ ವಿಧವೆ, ಅಹೂರಾ
ಇದ್ದರಲ್ಲ ? ಬುತ್ತಿ ಕಟ್ಟಿ, ಗೋರಿಗೆ ಮುಟ್ಟಿಸಿ, ಬೇಗನೆ ಮರಳಿದರಾಯಿತೆಂದು
ನೆಫರುರಾ 'ಹೂಂ' ಅಂದಳು. ನೆಫಿಸಳ ಮನೆಯಿಂದ ಹೊರಬಿದ್ದಳು.
ಸ್ನೊಪ್ರುವಿನ ಅಚ್ಚುಮೆಚ್ಚಿನ ಶಿಷ್ಯ ಮೆನೆಪ್‌ಟಾನ ಕಾ ರೂಪವನ್ನು ಮರದಲ್ಲಿ
ಕೆತ್ತತೊಡಗಿದ. ಕೌತುಕದ ವಿಶಿಷ್ಟ ಸಾಮಗ್ರಿಗಳನ್ನು ರಚಿಸುತ್ತಿದ್ದ ಕುಶಲ
ಕರ್ಮಿಯೊಬ್ಬ ಬಣ್ಣದ ಪುಕ್ಕಗಳಿಂದ ಮಾಡಿದ್ದ ಬೀಸಣಿಗೆಯನ್ನು ತಂದೊ
ಪ್ಪಿಸಿ, ಗದ್ಗದ ಕಂಠದಲ್ಲಿ “ ಇದು ನನ್ನ ಕಾಣಿಕೆ ” ಎಂದ. ಖಿವವ ತಯಾರಿ
ಸುವವರ ತಂಡ ಶ್ರೇಷ್ಠತಮ ಖಿವವ ತುಂಬಿದ ಚೀಲವನ್ನು ನೀಡಿತು.
ಅಂತ್ಯಕ್ರಿಯೆ ಆದಮೇಲೆ ರಾಜಗೃಹದ ಬಯಲಿನಲ್ಲಿ ಸಾವಿನ ಊಟ.
ಬಟಾನೊಡನೆ ಇಪ್ಯುವರ್ ಮೆಲ್ಲನೆ, “ ಅರ್ಚಕರಲ್ಲಿಗೆ ಹೋಗಿ 'ಬೆಳಕಿಗೆ ಆಗಮನ' ಪುಸ್ತಕ ತರಬೇಕಲ್ಲ ” ಎಂದ.
ಅಂತ್ಯಕ್ರಿಯೆಗೆ ಅಪೆಟ್ನನ್ನು ಕರೆಯಬಾರದು ಎಂಬುದು ಹಿರಿಯರ
ಸಮಿತಿಯ ಸದಸ್ಯರ ಅಭಿಪ್ರಾಯವಾಗಿತ್ತು.
"ಅಪೆಟ್ ಅಲ್ಲಿಯೇ ಇರಲಿ, ಸತ್ಯ ನಾಯಕರ ನೆನಪಿಗಾಗಿ ಸಾಯಂಕಾಲ
ಮಂದಿರದಲ್ಲಿ ವಿಶೇಷ ಪೂಜೆ ಮಾಡಲಿ, ” ಎಂದ ಸೆಮ.
ಗೋರಿ ಕೆಲಸದ ಉಸ್ತುವಾರಿಗಾಗಿ ಸ ಹೊರಟುಹೋದ.
ಸಶಸ್ತ್ರರಾದ ಐವತ್ತು ಜನ ಯೋಧರನ್ನು ಬೆಕ್ನ ವಶಕ್ಕೆ ಒಪ್ಪಿಸಿ,
ಅವರನ್ನು ನದಿಯ ದಂಡೆಯ ಕಾವಲಿಗೆ ಖ್ನೆಮ್ ಹೊಟೆಪ್ ಕಳುಹಿದ.
ತಾನು ಹೋಗಿ.'ಬೆಳಕಿಗೆ ಆಗಮನ' ಪುಸ್ತಕ ತರೋಣ __ಎನಿಸಿತು
ಬಟಾನಿಗೆ, ನಿಜವೊ, ಸುಳ್ಳೋ__ಅಪೆಟ್ ನಾಯಕರ ವಿರುದ್ಧ ಬರೆದ ಒಂದು
ಪತ್ರವನ್ನು ನ್ಯಾಯಸ್ಥಾನದಲ್ಲಿ ಇನೇನಿ ಓದಿದನೆಂದು ಮೆನ್ನಯ್ಯ ಹೇಳಿರಲಿಲ್ಲವೆ?
ತಾನು ಮಂದಿರಕ್ಕೆ ಹೋದರೆ ಆ ಮಾತು ಬಂದೇ ತೀರಬೇಕು. ಈಗ ಯಾಕೆ
ವಾಗ್ವಾದ ? ಹೀಗಾಗಿ ಅವನೆಂದ :
"ಖ್ನೆಮು. ನೀನೇ ಹೋಗಿ ಆ ಪುಸ್ತಕ ತಂದ್ಬಿಡಪ್ಪ.”
" ಅವನು ಹೊರಗೆ ತಲೆ ಹಾಕದ ಹಾಗೆ ಇಬ್ಬರು ಯೋಧರನ್ನು ಬಿಟ್ಟು
ಬರಲಾ? ”