ಪುಟ:Mrutyunjaya.pdf/೬೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೩೮

ಮೃತ್ಯುಂಜಯ

ಅರ್ಥ ಅವರಿಗೆ ಆಗಲಿಲ್ಲ. ಹಿಂದಿನ ದಿನಗಳು ಮತ್ತೆ ಬಂದರೆ ಪುನಃ ತಾವು
ತೊತ್ತುಗಳಾಗಬೇಕಾದೀತು__ಎಂಬ ವಿಷಯ ಅವರಿಗೆ ಹೊಳೆಯಲಿಲ್ಲ.
ಅವರನ್ನೂ ದರಿದ್ರ ರೈತರನ್ನೂ ದುಡಿಯುವ ಎಲ್ಲ ಜನರನ್ನೂ ಇಂಥದೇ ಎನ್ನ
ಲಾಗದ ಭಯ ಆವರಿಸಿತು ; ಕತ್ತು ಹಿಸುಕಿದ ಅನುಭವವಾಯಿತು.
ಗೋರಿ ಯಾತ್ರೆಗೆ ಸಿದ್ಧತೆ ನಡೆಯಿತು. ಸೇತನಾ ಮುಚ್ಚಳವಿಲ್ಲದ
ಶವಪೆಟ್ಟಿಗೆಯನ್ನು ತಂದ. ಮೆನೆಸ್ಟಾನ ಕಳೇಬರವನ್ನು ಅದರಲ್ಲಿರಿಸಿದರು.
ಅಂತಿಮ ವಿದಾಯ ಹತ್ತಿರವಾಯಿತೆಂದು ಆರ್ತನಾದದಂತಾಯಿತು
ನಾಮೋಚ್ಛಾರ.
ಮೆನ್ನ ರಾಜಗೃಹದ ಪುಟ್ಟ ಕೊಳದಲ್ಲಿ ಮೈ ತೋಯಿಸಿಕೊಂಡ.
ಹೆಚ್ಚು ಕಡಿಮೆ ಊರಿನ ಜನವೆಲ್ಲ ಭಾಗವಹಿಸಿದ ಭಾರೀ ಸ್ಮಶಾನ
ಯಾತ್ರೆ. ಮುಂಭಾಗದಲ್ಲಿ ಸಹಸ್ರಾರು ಶೋಕ ಸ್ತ್ರೀಯರು. ಅವರ ಹಿಂದೆ
ಉರಿಯುತ್ತಿದ್ದ. ಕೆಂಡಗಳಿದ್ದ ಪಾತ್ರೆಯನ್ನೆತ್ತಿಕೊಂಡು ಇನ್ನೊಂದು ಕೈಯಲ್ಲಿ
ಇಕ್ಕುಳ ಮೊನೆಯ ಕೋಲು ಹಿಡಿದು, ಪಾದಗಳನ್ನು ಲಯಬದ್ಧವಾಗಿ ಇರಿಸಿ
ಕುಣಿಯುತ್ತ ಕುಪ್ಪಳಿಸುತ್ತ ನಡೆಯುತ್ತಿದ್ದ ಮೆನ್ನ, ಅವನನ್ನು ಹಿಂಬಾಲಿಸಿ
ದವನು 'ಬೆಳಕಿಗೆ ಆಗಮನ'ದ ಪ್ರತಿಯನ್ನೊಳಗೊಂಡಿದ್ದ ಪೆಟಾರಿಯನ್ನು
ಹೊತ್ತ ಖೈಮ್ ಹೊಟೆಪ್. (“ಹಳೆಯ ಪ್ರತಿಯೇ ಇರಲಿ.” ಎಂದಿದ್ದಮೆನ್ನಯ್ಯ.)
ಶವಪೆಟ್ಟಿಗೆಯನ್ನು ಹೊತ್ತವರು ಹಿರಿಯ ಸಮಿತಿ ಸದಸ್ಯರು : ಸೆನು, ಹೆಮೊನ್,
ಥಾನಿಸ್ ಮತ್ತು ಹೆಮ್ಟ. ಶವಪೆಟ್ಟಿಗೆಯನ್ನು ಸುತ್ತುವರಿದು ನಡೆದವರು
ಅಬ್ಬು ಯಾತ್ರಿಕರು, ಅಹೂರಾ ಇರಲಿಲ್ಲ. ಆಕೆಯ ಗಂಡನಿದ್ದ, ಭುಜದ
ಮೇಲೆ ಮಗುವನ್ನು ಹಾಕಿಕೊಂಡು, ಹಿಂದಿನಿಂದ, ಗೋರಿ ನಿರ್ಮಾಣದ
ಉಸ್ತುವಾರಿ ಮುಗಿಸಿ ಮರಳಿದ್ದ ಸೊಪ್ಪು, ಸೆಬೆಕ್ಕು, ಬಟಾ ಅವರ ಹಿಂದೆ.
ಬಳಿಕ, ನೀರಿನ ಪಾತ್ರೆ ಹಿಡಿದಿದ್ದ ಇಪ್ಪುನರ್‌, ಔಟ, ಅಂಬಿಗರು-ಜನಜಂಗುಳಿ,
[“ ನನ್ನ ದೇವರಿಗೆ ಬುತ್ತಿ” ಎಂದು ನೆಫಿಸ್ ಗೋಳಾಡಿದಳು, ಹಿಂದಿನ
ದಿನವೇ ಮಾಡಿದ್ದ ರೊಟ್ಟಿಗಳಿದ್ದವು. ನಿಜಮುಟ್' ಅವನ್ನೇ ಬಿಸಿ ಮಾಡಿದಳು.
ಒಣಗಿದ ಮಾವಿನ ಉಪ್ಪೇರಿಯನ್ನೂ ಈರುಳ್ಳಿಯನ್ನೂ ಇಟ್ಟು, ಅನ್ನು ವಿನ ವಿಧವೆ
ಕೊಟ್ಟಿದ್ದ ಬಟ್ಟೆಯನ್ನು ಹರಿದು ಅದರ ಒಂದು ತುಣುಕಿನಲ್ಲಿ ಅಷ್ಟನ್ನೂ
ಕಟ್ಟಿದಳು.]