ಪುಟ:Mrutyunjaya.pdf/೬೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೪೯

“ಮೂರು ಹಾಯಿಗಳು ಕಾಣಿಸ್ತಿವೆ. ಈ ಕಡೆಯವಲ್ಲ. ದೊಡ್ಡ
ನಾವೆಗಳು!”
ಬೆಕ್ ಯೋಚಿಸಿದ :
“ಎಲ್ಲ ನಾವೆಗಳೂ ಒಟ್ಟಿಗೇ ದಂಡೆ ಮುಟ್ಟುವಂತಿದ್ದರೆ ಸಹಾಯ ಬೇಕು.
ಉಳಿದ ಐವತ್ತು ಜನ ಯೋಧರ ಜತೆ ಔಟ ಬರೇಕು, ಬೈನು ಅಣ್ಣನನ್ನೂ
ಕರೀಬೇಕು....ಆ ದೋಣಿಗಳು ಕಟ್ಟಿ ಮುಟ್ಟಿದೆ ಕೆಳಗಡೆಯೇ ದಡ ತಲಪಿ
ದರೋ ? ನಾವೂ ಅಲ್ಲಿಗೆ ಧಾವಿಸಬೇಕು. ನೋಡೋಣ, ನೋಡೋಣ....”
ಪ್ರತೀಕ್ಷೆ....ಹಾಯಿಗಳು ಸ್ಪಷ್ಟವಾಗಿ ಕಾಣಿಸಿದುವು. ಹಾಯಿಕಂಬಗಳ
ನೀಳ ಗೆರೆಗಳು. ದೋಣಿ ಆಕೃತಿಗಳು. ಹುಟ್ಟು ಗಳು ಕೂಡಾ, ಜನರು...
ಯಾಕಿದು ? ಎರಡು ದೋಣಿಗಳು ಹಿಂದುಳಿದುವಲ್ಲ? ಮುಂದಿನ
ದೊ೦ದರದೇ ವೇಗ ಚಲನೆ.
ಇದು ಕಟ್ಟಿಗೇ.ಬರುತ್ತಿದೆ. ಬಟಾನ ದೋಣಿ ಕಟ್ಟಿಗೆ ತಗಲಿಕೊಂಡು
ನಿಂತಿದ್ದರೂ, ಸ್ಥಳವಿದೆ. ಇವರ ನಾವೆ ದಂಡೆಗೆ ಬರಬಲ್ಲುದು. ಅದರ
ಮೂತಿಯ ಬಳಿ ಇದೇನಿದು ? ಐದು ಮೊಳ ಎತ್ತರದ ಪೆಟಾ ದೇವತಾ
ಮೂರ್ತಿ. ಮೂರ್ತಿಯ ಪಕ್ಕದಲ್ಲಿ ಇನೇನಿ,ವ ಅದರ ಬೆನ್ನ ಹಿಂದೆ
ನಿಂತಿರುವವನು ಮಹಾ ಅರ್ಚಕ, ಬಕಿಲ, ಆತನ ಹಿಂದೆ ನುಟ್ ಮೋಸ್,
ಕಿರಿಯ ದೇವಸೇವಕರು, ಬಿಲ್ಲಾಳುಗಳು.... ಆ ದೋಣಿಗಳು ಕೆಳಗಡೆಯೇ
ದಡಮುಟ್ಟಬಹುದು. ಯೋಧರು ಅಲ್ಲಲ್ಲಿಯೇ ಇರಲಿ. ಇಲ್ಲ....ಯೋಧರೆಲ್ಲ
ಕಟ್ಟೆಯ ಕಡೆಗೆ ಧಾವಿಸುತ್ತಿದ್ದಾರೆ !
ಬೆಕ್ ಬಿಲ್ಲನ್ನೆತ್ತಿ ಬಾಣ ಹೂಡಿದ. ಹತ್ತಿರಕ್ಕೆ ಬಂದ ಹಲವು
ಯೋಧರೂ ಸಜ್ಜಾದರು. ಆದರೆ ದೋಣಿಯಿಂದ ದೇವತಾಮೂರ್ತಿಯ ಎದು
ರಿನಲ್ಲಿ ನೀಲಿ ಬೆಳಕು ಚಿಮ್ಮಿತು. ಉಚ್ಚ ಕಂಠದಲ್ಲಿ ಟಾ ಸ್ತೋತ್ರ
ಕೇಳಿಸಿತು. ('ಇವನು ಇನೇನಿ')....ಹಲವು ಕಂಠಗಳಿಂದ ಘೋಷ :-
“ಸೃಷ್ಟಿಕರ್ತ ಪ್ಟಾ ! ಮಹಾದೇವ ಪ್ಟಾ !”
ಘಾತವಾಯಿತು, ಘಾತವಾಯಿತು.
ದೇವರ ಭವ್ಯಾಕಾರ ದಂಡೆಯನ್ನು ನೇರವಾಗಿ ಮುಟ್ಟಿದಂತೆ, ಯೋಧ
ರೆಲ್ಲ ಮಂಡಿಯೂರಿದರು.