ಪುಟ:Mrutyunjaya.pdf/೬೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೫೫

ಬೆಕ್ ಔಟರ ಶವಗಳನ್ನು ಮುರಿದಿಕ್ಕಿದ ಶಿಲಾಪೀಠದ ಬುಡದಲ್ಲಿಟ್ಟರು.
ಬಲೆಯೊಳಗೆ ಚಡಪಡಿಸುತ್ತಿದ್ದ ಖೈಮ್ ಹೊಟೆಪ್‌ನನ್ನೂ ಅಲ್ಲಿಗೆ ಎಳೆದು
ತಂದರು.
ತಮ್ಮವನೇ ಒಬ್ಬ ಯೋಧನ ಕೈಯಿಂದ ಈಟಿ ತೆಗೆದುಕೊಂಡು ಖ್ನೆಮ್
ಹೊಟೆಪನ ಬಳಿಗೆ ಬಕಿಲ ಧಾವಿಸಿದ ; ಮನುಷ್ಯನ ಮೇಲೆ ಎರಗುವ ಕಾಡು
ಪ್ರಾಣಿಯಂತೆ ಅರಚಿದ...
ಅಂಗಾತ ಬಿದ್ದಿದ್ದ ಬಲೆಯ ಎಡೆಯಿಂದ ಖೈಮ್‌ಹೊಟೆಪ್ ನೋಡು
ತಿದ್ದಂತೆ ಬಕಿಲ ಈಟಿಯಿಂದ ಪೈ ಮ್ನ ಕಣ್ಣುಗಳನ್ನು ಒಂದೊಂದಾ
ಇರಿದ.
“ನಿನ್ನನ್ನು ಕೊಲ್ಲೋದಿಲ್ಲ. ನೀನು ಕುರುಡ ಭಿಕ್ಷುಕನಾಗಿ ಅಲೆದರೇ
ನನಗೆ ಸಂತೋಷ” ಎಂದು ಹೇಳಿ, ಈಟಿಯನ್ನು ಯೋಧನಿಗೆ ಮರಳಿ ನೀಡಿ
ಬಕಿಲ ಮಹಾ ಅರ್ಚಕನೆಡೆಗೆ ಸಾಗಿದ.
ಗುಂಪಿನಲ್ಲಿದ್ದ ಕೆಲವರು ಬಾಯಿ ಬಿಟ್ಟಿದ್ದರು ನುಟ್ಮೋಸ್ ನೊಡನೆ.
“ಮೆನೆಪ ಟಾನನ್ನು ಮಣ್ಣು ಮಾಡಿದ್ದಾಯಿತು. ಅದಕ್ಕಾಗಿ ರಾಜಧಾನಿ
ಯಿಂದಲೇ ಅಯ್ತ ಬಂದಿದ್ರು.”
ಹೇಪಾಟ್‌ಗೆ ತಕ್ಷಣ ಹೊಳೆಯಿತು : ಹುಚ್ಚ ಮನ್ನನೇ ಇರಬೇಕು.
ಮನಸ್ಸಿನಲ್ಲಿ ಅಂದುಕೊಂಡ :" ಇರಲಿ, ಇವತ್ತು ಅವನಿಗೆ ಅಂತ್ಯ.”
ಬಕಿಲ, ನುಟ್ ಮೋಸರ ನಾಯಕತ್ವದಲ್ಲಿ ಸಶಸ್ತ್ರ ಯೋಧರು ; ಅವಸಿ
ಹಿಂದೆ ನಿರಾಯುಧ ಸೆರೆಯಾಳುಗಳು; ಬಳಿಕ ದೇವತಾಮೂರ್ತಿ; ಹಿಂಬಾಲಿರ
ಮಹಾ ಅರ್ಚಕನಿದ್ದ ಪಲ್ಲಕಿ, ಮತ್ತೆ ಸಶಸ್ತ್ರ ಭಟರು.
ಘೋಷಗಳು :
“ಮಹಾದೇವ ಪ್ಟಾ ! ಮಹಾದೇವ ಪ್ಟಾ !”
“ಮಹಾ ಅರ್ಚಕ ಹೇಪಾಟ್ ! ಮಹಾ ಅರ್ಚಕ ಹೇಪಾಟ್ !”

****

ನೀರಾನೆ ಪಟ್ಟಣದ ಜನಸಂಖ್ಯೆಯ ಮುಕ್ಕಾಲು ಪಾಲು ಜನ__
ಸುಮಾರು ಹತ್ತು ಸಹಸ್ರದಷ್ಟು__ರಾಜಗೃಹದ ಬಯಲಿನಲ್ಲೂ ಅದರ ಪರಿಸರ