ಪುಟ:Mrutyunjaya.pdf/೬೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬೨

ಮೃತ್ಯುಂಜಯ

ಯಿಂದಲೂ ರಾಜಗೃಹದಿಂದಲೂ ಕೇಳಿ ಬಂದಿದ್ದ ಸದ್ದುಗಳು, ಬಾಗಿಲ
ಸಂದಿಯಿಂದ ಕಾಣಿಸಿದ ಇಣಿಕು ನೋಟ ಅಸೆಟ್ ಗೆ ಹರ್ಷ ಉಂಟುಮಾಡಿ
ದ್ದು ವು. ಅಂಥ ದಿನ ಉಪವಾಸವೆ ? ವಸತಿಯಲ್ಲಿ ಸಿದ್ಧವಾದ ಅಡುಗೆ
ಪಾರ್ಶ್ವದಾರಿಯಾಗಿ ಗರ್ಭಗುಡಿಗೆ ಬಂತು. ಅದನ್ನು ದೇವರ ಪಾದಗಳ
ಬಳಿ ಇಟ್ಟು ಅಸೆಟ್ ಊಟಮಾಡಿದ.
ಅಂತೂ ರಾಜಧಾನಿಯಿಂದ ವಿಮೋಚನೆಯ ದಂಡು ಬಂದೇಬಿಟ್ಟಿತು.
ಖ್ನೆಮ್ ಹೊಟೆಸ್ ಬಿಟ್ಟು ಹೋಗಿದ್ದ ಯೋಧರೆಂದರು :
“ಒಂದು ಹೆಜ್ಜೆ ಮುಂದಿಟ್ಟರೆ ಬಾಣಪ್ರಯೋಗಿಸ್ತೇನೆ.”
“ಹತ್ತು ಬಿಲ್ಲುಗಳಿಗೆ ವಿರುದ್ಧ ವಾಗಿ ಎರಡು ಬಿಲ್ಲು ? ಹುಚ್ಚಪ್ಪಗಳಿರಾ
ದೇವರ ಮುಂದೆ ಕಾದಬೇಡಿ,” ಎಂದ ಅಪೆಟ್.
ಹತ್ತು ಜನ ರಾಜಭಟರಲ್ಲಿ ಒಬ್ಬ ಅಸೆಟ್‌ಗೆಂದ :
"ಮಹಾ ಅರ್ಚಕರು ಕರೀತಿದ್ದಾರೆ. ನೀವು ತಕ್ಷಣ ರಾಜಗೃಹಕ್ಕೆ
ಹೋಗೋಕಂತೆ.”
ಆ ಇಬ್ಬರು ದಿನವಿಡೀ ಅಲ್ಲಿ ನಿಂತಿದ್ದರು. ಬಿಸಿಲಲ್ಲಿ, ಮಂದಿರದ
ನೆರಳಲ್ಲಿ. ಕೆಳಗೆ ಊರಲ್ಲಿ ಏನಾಯಿತೆಂಬುದನ್ನು ಪೂರ್ತಿಯಾಗಿ ಊಹಿಸಿ
ಕೊಳ್ಳುವುದು ಅವರಿಂದ ಆಗಿರಲಿಲ್ಲ. ಆದರೂ ಹೊತ್ತು ಕಳೆದಂತೆ ಅಧೈರ್ಯ
ಕಾಡತೊಡಗಿತು.
ಅಸೆಟ್ ನ ಹೆಂಡತಿ “ರೊಟ್ಟಿ ಕೊಡ್ತೇನೆ. ಉಣ್ತೀರಾ ?” ಎಂದಳು.
ಯೋಧರು ನಿರಾಕರಿಸಿದ್ದರು.
ರಾಜಭಟನೊಬ್ಬ ಅಂದ :
“ನಿಮ್ಮ ದಂಡು ನುಚ್ಚುನೂರಾಯ್ತು, ಐವತ್ತರ ಶ್ರೇಷ್ಠರು ಸತ್ತರು.
ದಳಪತಿ ಸೆರೆಸಿಕ್ಕಿದ್ರು. ನೀವೀಗ ನಮಗೆ ಶರಣಾಗಿ !”
ಆ ಇಬ್ಬರು ಯೋಧರು ಶರಣಾಗತರಾಗಲಿಲ್ಲ. ಬಾಣಗಳನ್ನು ಪ್ರಯೊ
ಗಿಸಿ ಆ ಹತ್ತು ಜನರಲ್ಲಿ ಇಬ್ಬರನ್ನು ನಾಶಗೊಳಿಸಿದರು. ಪ್ರತಿಯಾಗಿ ಬಂದ ಹತ್ತು ಬಾಣಗಳಿಗೆ ಬಲಿಯಾದರು.
ಅಪೆಮ್ ಅಂದ :