ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ೬೬೯
ಬಲೆಗಳಡಿಯಲ್ಲಿ ಇಟ್ಟಿರಬಹುದು. ....ಬೆಳಿಗ್ಗೆ ಮೆನೆಪಟಾ ಅಣ್ಣನ ಲೇಪಿತ ಶವವನ್ನ್ ಕಂಡು ತಾను ರೋದಿಸಿದ ಕ್ಷಣದಿಂದ ఈ ಮುಚ್ಚಂಜೆಯ ವರೆಗೆ ಎಷ್ಟೊಂದು ಘಟನೆಗಳಾದುವು ! ಎಷ್ಟೊಂದು-ಒಂದೇ ಹಗಲಿನಲ್ಲಿ...!
బಕಿలనిగే ఇವತ್ತು ఇరుళిನ ಭಯವಿಲ್ಲ. ಆದರೂ-ರಾಜಗೃಹದ ತುಂಬ ದೊಡ್ಡ ಸಣ್ಣ ದೀಪಗಳನ್ನು ಉರಿಸಲು ಆತ ಆಜ್ಞೆ ಇತ್ತ. ತನ್ನ విಶಿಷ್ಘ బందిಗಳಿದ್ದ ಕೊಠಡಿಯ ಬಾగిలಲ್ಲಿ నింತು బಕಿಲ ಕೇಳಿದ: “ಸಂಪತ್ತು ఎల్లిಟ್ಟದ್ದೀರಿ ?" ಇಪ್ಯುವರ್ ಹೆಮಟಯ ಕೆನ್ನಯನ್ನು ತನ್ನ ಅಂಗೈಯಿಂದ ಮುಚ್ಚಿ ಉತ್ತರವಿತ್ತ: "ಸ್ವಲ್ಪ್ ಕೆಳಗಿದೆ, ಸ್ವಲ್ಪ ಮೇಲ್ಯಾಳಿಗೆಯಲ್ಲಿದೆ. ಸಂಪತ್ತು ಆಂದರೆ ಧಾನ್ಯ ಕಣಜಗಳು, ಎಣ್ಣೆಗಳು, ಕೆಫ್ವು ವರ್ತಕ ಕೊಟ್ಟ ಕಾಣಿಕೆ, ಪೆಪೈರಸ್ ಹಾಳೆಗಳು, ವಿಕ್ರಯಕೇಂತ ಶೇಖರಿಸಿರುವ ಸಾಮಗ್ರಿಗಳು, ಕೊಂಡುಕೊಂಡ ವಸ್ತುಗಳು.... ಲೆಕ್ಕದ ಹಾಳೆಗಳು ಮೇಲೆ ಪೆಟಾರಿయಲ್ಲಿವೆ." “ಹುಚ್ಚು! ಅದಲ್ಲ ಸಂಪತ್ತು. ಬಂಗಾರ ಬೆಳ್ಳಿ ಆಭರಣ. ...” ಸ್ನೂಫ್ರು అంದ: “ದಂಡನಾಯಕರೇ ! ಇದು ಕೊಳ್ಳೆ ಹೊಡೆಯುವವರ, ಗೋರಿಕಳ್ಳರ ರಾಜ್ಯವಲ್ಲ!” "ಏಯ್ ಮುಚ್ಚುಬಾಯಿ !” ಹೆಮಟಾಯ ಗಂಟಲಿನಿಂದ ವಿಚಿತ್ರ ಸದ್ದುಗಳು ಬರತೊಡಗಿದುವು. ಇಫ್ಯುವರ ಗಾಬರಿಗೊಂಡ. "ಸ್ನೊಫ್ರು ಅಣ್ಣ....ಕೇಳಿಸಿತಾ? ಹೆಮಟ ಮಾವ ನಮ್ಮನ್ನು ಬಿಟ್ಟು ಹೋಗ್ತಿದ್ದಾರೆ.” ಉಳಿದವರೆಲ್ಲ ಇಪ್ಯುವರನ ಬಳಿ ಸಾರಿದರು. బಕಿల ಗರ್ಜಿಸಿದ : “ಏನದು ?”