ಜಿಂಕೆ ಪ್ರಾಂತದಲ್ಲಿ ಕುಯಿಲು ಮುಗಿದಿತ್ತು. ದಾಟಿ ಮುಂದಕ್ಕೆ ಹೋದರು. ಅಲ್ಲಿಯೂ ಹೊಲಗಳಲ್ಲಿ ದುಡಿಮೆ ಮುಕ್ತಾಯವಾಗಿತ್ತು. ಬಟಾ ಮೆನ್ನನೊಡನೆ ಅಂದ : “ನಮ್ಮದೇ ಆಗಿದ್ದ ಹಿಡಿಧಾನ್ಯವೂ ನಮಗೆ ದಕ್ಕಲಿಲ್ಲ....” “ ಹುಂ ? ಹೌದು,” ಎಂದ ಮೆನ್ನ, ಸಂಜೆಯ ವೇಳೆಗೆ ತಲಪಲಿದ್ದ ಅಬ್ಬುವನ್ನು ಕುರಿತು ಆತ ಯೋಚಿಸುತ್ತಿದ್ದ. ಕಳೆದ ಬಾರಿ ಐಸಿಸ್ ಪಾತ್ರಧಾರಿಣಿ ದೇವಸೇವಕಿಯ ಹೆರಳನ್ನು ಮುಟ್ಟಿ ಮಹಾ ಅರ್ಚಕ ಆಶೀರ್ವದಿಸುತ್ತಿದ್ದಾಗ ತಾನು ಗರ್ಭಗುಡಿಯ ಬಳಿಗೆ ಬಂದೆ ಎಂದಲ್ಲವೆ ಆತ ಕೂಗಾಡಿದ್ದ__ರೇಗಾಡಿದ್ದು? ಮೆನ್ನನಿಗೆ ನಗು ಬಂತು. ತನ್ನಷ್ಟಕ್ಕೆ ಸಣ್ಣನೆ ನಕ್ಕು ತನಗೂ ಆ ಬದುಕಿಗೂ ಸಂಬಂಧವಿಲ್ಲ, ಇನ್ನು, ಪಿಶಾಚಬಣದ ಪಾಪದ ಕೂಳನ್ನು ತಾನು ಮುಟ್ಟ ಬೇಕಾಗಿಲ್ಲ. ಸರಿಕಂಡಂತೆ ವರ್ತಿಸುವ, ನಂಬಿದ್ದನ್ನು ಸಾರುವ ಸ್ವಾತಂತ್ರ್ಯವಿದೆ ತನಗೆ. ....ಸಂಜೆಗೆ ಅಬ್ಬು ಬಂತು, ಖ್ನೆಮ್ನನ ಹೊರತಾಗಿ ದೋಣಿಯಲ್ಲಿದ್ದವರೆಲ್ಲ__ನೆಫಿಸ್ ಕೂಡಾ__ ದೂರದ ಗುಡ್ಡವನ್ನು, ಆದರೆ ಮೇಲಿನ ದೇವಮಂದಿರವನ್ನು ದಿಟ್ಟಿಸಿದರು. ಖ್ನೆಮ್ನನ್ನೂ ಒಳಗೊಂಡ ಅವರೆಲ್ಲ “ ಓ ಒಸೈರಿಸ" ಓ ಒಸೈರಿಸ್ ” ಎಂದರು. ರಾಮೆರಿಪ್ಟಾ ದೃಷ್ಟಿಹೀನ ವೃದ್ಧ ಹಾಡಿದ್ದುದನ್ನು ಜ್ಞಾಪಿಸಿಕೊಂಡ. ತಾವೆಲ್ಲರೂ ಉಣ್ಣುತ್ತಿದ್ದಾಗ ಅವನು ತಂತಿ ಮಾಡಿದ್ದ “ ಯೋ ಯೋ ಯೋ . ಹೇಳುವೆ ಕೇಳಿ ಸೃಷ್ಟಿಯ ಕಥೆಯ ಈ ಲೋಕದ ಆದಿ ಅನಾದಿಯ ಕಥೆಯ ಯೋ ಯೋ ಯೋ ” ರಾಮೆರಿಗೆ ಚಿಂತೆ : ಖ್ನೆಮ್ಮಾವ ಕೂಡಾ ಮುಂದೆ ಹೀಗೆ ಹಾಡು ಹೇಳುತ್ತ ತಿರುಗಬೇಕಾಗುವುದೆ ? ಆಗ ಅವನನ್ನು ಕೈಹಿಡಿದು ನಡೆಸುವವರು ಯಾರು ? ತಾನು ?
ಪುಟ:Mrutyunjaya.pdf/೬೯೭
ಗೋಚರ