ಮತ್ತೆ ಬೆಳಗಾದಾಗ ಅವರು ನಿಂತ ಕಡೆ ಪೆಪೈರಸ್ ಮೆದೆಗಳಿದ್ದವು. ಕಾಡು ಬಾತು ಕೋಳಿಗಳ ಹಿಂಡೇ ಇತ್ತು. ಬಟಾನ ಅಂಬಿಗರು ದಂಟುಗಳನ್ನು ಮುರಿದು ಹೊಡೆಕೋಲುಗಳನ್ನು ಸಿದ್ಧಗೊಳಿಸಿ ಬೇಟೆಯಾಡಿದರು. ಎರಡು ಬಾತುಕೋಳಿಗಳನ್ನು ಹಿಡಿದರು, ಎಳೆಯರಿಗೆ ಆನಂದ. ಉಳಿದವರಿಗೂ, ಕುಳಿತಲ್ಲಿಂದಲೆ ಖ್ನೆಮು ಅಂದ : ಬಟಾ ಆಣ್ಣ. ಈ ಎರಡು ಈಟಗಳೂ ನಮ್ಮಲ್ಲೇ ಇರಲಿ, ಬಾತು ಕೋಳಿಗಳನ್ನು ಕೊಟ್ಟು ರೊಟ್ಟಿ ಪಡೆಯೋಣ.” "ಹ್ಞ .ಹ್ಞ." ರಾಮರಿಗೆ ನೆನಪಿತ್ತು. ಅಬ್ಬು ಯಾತ್ರೆಯಲ್ಲಿ ಅಸಿಸುರುಳಿಗಾಗಿ ಒಂದು ಬಾತು ಕೋಳಿ ಕೊಟ್ಟಿತ್ತು. ಈಟಿಗಳು ಬೇಕು ಅನ್ತಾನೆ ಋಮು ಮಾವ. ನಮಗೆಲ್ಲ ಈಟ ತಿವಿಯೋದನ್ನು , ಎಸೆಯೋದನ್ನು ಹೇಳಿಕೊಡ್ತಾನೇನೊ? ಕಣ್ಣು ಗಳನ್ನು ಮುಚ್ಚಿಕೊಂಡೂ ಶಸ್ತ್ರಾಸ್ತ್ರ ಪ್ರಯೋಗಿಸುವ ಸಮರ್ಥರಿಲ್ಲವೆ ?” ತಬಬುವಾ, ನೆಜಮುಟ್, ಅಹ್ರಾ , ಅಪ್ಪುವಿನ ವಿಧವೆ, ನೆಫರುರಾ__ ಎಲ್ಲರೂ ನೆಫಿಸ್‌ಳನ್ನು ಆಗಾಗ್ಗೆ ಕೇಳುವವರೇ : « ಏನಾದರೂ ನೋವು ತೋರಿದೆಯಾ ? ನೋವು ಕಂಡೊಡ್ಡೆ ಹೇಳು....ದಡಕ್ಕೆ ಹೋಗೋಣ.” ಒಮ್ಮೆ ನೆಫಿಸ್ ಕೇಳಿದಳು : "ಇನ್ನೇನೂ ಭಯ ಇಲ್ಲವಾ ? ವೈರಿಗಳು ಯಾರೂ ಅಟ್ಟಿಸಿಕೊಂಡು ಬರೋದಿಲ್ಲವಾ ?” | ನೆಜಮುಟ್ ಉತ್ತರವಿತ್ತಳು : “ ಇಲ್ಲ. ನಿನಗ್ಯಾಕೆ ಅದರ ಯೋಚನೆ ? ನಾವಿಲ್ಲವಾ ಇಡ್ಕೂಂದು ಜನ ?
ದೆಂದೆರೆಯಲ್ಲಿ ಹಾಥೋರ್ ದೇವಸ್ಥಾನ, ನದಿಯ ಎಡದಂಡೆಯಲ್ಲಿ. ಕೋಡುಗಳಿರುವ ಹಸು ರೂಪದ ಪ್ರೇಮದೇವತೆ__ಹಾಥೋರ್, ಸುಖ, ಸಂಗೀತ, ನೃತ್ಯಗಳ ದೇವತೆ ಕೂಡಾ. ಮಗು ಹುಟ್ಟಿದೊಡನೆ ಏಳು