ಪುಟ:Mrutyunjaya.pdf/೭೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೯೨

ಮೃತ್ಯುಂಜಯ

“ಒಂದು ಹಗಲಿನ ದಾರಿ.”
"ಒಂದು ಉಪಕಾರವಾಗಬೇಕಲ್ಲ? ಎರಡು ಕತ್ತೆ ಬೇಕು, ವಿನಿಮಯಕ್ಕೆ
ಈ ದೋಣಿ ಕೊಡ್ತವೆ.”
ಆತ ಯೋಚಿಸಿದ. ಇನ್ನೂ ಕೆಲವರನ್ನು ಕರೆದು ಸಲಹೆ ಕೇಳಿದ.
ಕೊಟ್ಟಿಗೆಯಲ್ಲಿದ್ದ ಎರಡು ಕತ್ತೆಗಳನ್ನು ಬಿಚ್ಚಿಕೊಟ್ಟ.
ಬಾಣ೦ತಿಗೂ ಮಗುವಿಗೂ ಕತ್ತೆ, ಖೈಮ್ ಹೊಟೆಸ್ ನಡೆಯುತ್ತೇನೆ
ಎಂದ__ಈಟಿಯನ್ನು ಊರುಗೋಲು ಮಾಡಿಕೊಂಡು, ಬಟಾನ ಇಬ್ಬರು
ಮಕ್ಕಳು, ಅಹರಾಳ ಮಗಳು, ರಾರಿಪ್ಟಾರಿಗೆ ಕತ್ತೆ ಸವಾರಿ ಎಂದು
ಹಂಚಿಕೆ. ರಾಮರಿಪ್ಟಾ ಒಪ್ಪಲಿಲ್ಲ. ನಡೆಯುವ ಹಟ.
“ಬಹಳ ಆಯಾಸವಾದಾಗ ನನ್ನ ಹೆಗಲ ಮೇಲೆ ಕೂತೊ, ಕತ್ತೆ
ಗಿರೋವಷ್ಟೇ ಬುದ್ದಿಯೇ ನನಗೆ ಕೂಡಾ,” ಎಂದ ಬಟಾ.
ನೆಲೆಗೊಳ್ಳುವುದಕ್ಕೆ ಮುನ್ನ ಒಂದು ಆ ಹಗಲಿನ ಪಯಣ.

೧೮

ಎರಡು ತಿಂಗಳ ಬಳಿಕ, ಹರಿದ ನಡುವದ, ಭುಜದ ಮೇಲಿಂದ
ಚಿಂದಿಚಾದರ ಇಳಿಬಿಟ್ಟಿದ್ದ, ಊರಿ ಊರಿ ಬುಡ ಜಜ್ಜಿ ಹೋಗಿದ್ದ ಪಪೈರಸ್
ದಂಟು ಹಿಡಿದಿದ್ದ, ಸೊರಗಿದ ಮೈಯ, ತಲೆಯ ನರೆಗೂದಲು ನೀಳವಾಗಿ
ಬೆಳೆದಿದ್ದ, ಅಷ್ಟೇ ನರೆತ ಗಡ್ಡ ಜೋಲಾಡುತ್ತಿದ್ದ ಮನುಷ್ಯನೊಬ್ಬ ಬಟಾ
ಮತ್ತಿತರರು ನೆಲೆಸಿದ್ದ ತಾಣಕ್ಕೆ ಬಂದ
ಆತ ಬಂದಾಗ ಬಟಾನೂ ಅವನ ಪತ್ನಿಯ ಅಹೂರಾ-ತಬಬುವಾರೂ
ಪುಟ್ಟದೊಂದು ಹೊಲದಲ್ಲಿ ರೆಂಟೆ ಹೊಡೆಯುತ್ತಿದ್ದರು,
ಬಿಸಿಲ ಮರೆಗೆಂದು ಕಟ್ಟಿದ್ದ ಚಪ್ಪರದ ಕಳಗೆ ಹುಡುಗರಿಗೆ ಮೆನ್ನ ಪಾಠ
ಹೇಳಿಕೊಡುತ್ತಿದ್ದ,
ಹೊಂಡಗಳನ್ನು ತೋಡಿ ಕಂಬಗಳನ್ನು ನೆಟ್ಟು ಒಂದು ಮನೆ ಕಟ್ಟಲು
ತನ್ನ ಹೆಂಡತಿಗೂ ನೆಜಮುಟ್‌ಗೂ ಖೈಮ್ ಹೊಟೆಪ್‌ ನೆರವಾಗುತ್ತಿದ್ದ.