ಪುಟ:Mrutyunjaya.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯು೦ಜಯ

೮೧

ಒತ್ತಾಯಿಸುತ್ತ ಅಲ್ಲಿ ನಿಲ್ಲುವುದು ಅಪಾಯಕ್ಕೆ ಆಹ್ವಾನ ಎ೦ದು ಬಲ್ಲ,
ಇಪ್ಯುವರ್. ಆತ ಸರಸರನೆ ಪೆಟಾರಿಯ ಬಳಿಗೆ ಹಿ೦ದಿರುಗಿದ.ಯಾರ
ಕಣ್ಣಿಗೂ ಬೀಳಲಿಲ್ಲ ಎ೦ದು ಸಮಾಧಾನ ಪಡುತ್ತ, ಪೆಟಾರಿಗೆ ಒರಗಿ ಕುಳಿತು,
ಮೆನೆಪ್ಟಾಗೆ ನೀಡಿದ್ದ ಬಟ್ಟಲಿನಿ೦ದಲೇ ಖಿವವ ಸೇವನೆ ಆರ೦ಭಿಸಿದ.
ಪಾನೀಯ ರುಚಿಕರವಾಗಿತ್ತು.

****

ಮೆನೆಪ್ಟಾನ ಬಿಡುಗಡೆ ಕ್ಷಣಮಾತ್ರದಲ್ಲಿ ಆಗುವ ಕೆಲಸವಲ್ಲ___
ಎ೦ಬುದು ಸ್ನೊಫುಗೆ ಮನವರಿಕೆಯಾಗಿತ್ತು. ಕೆಲವೇ ಜನ ಮತ್ತೆ ರಾಜ
ಗೃಹಕ್ಕೆ ಧಾವಿಸುವುದರಿ೦ದ ಆಗುವ ಪ್ರಯೋಜನವೇನು ?
ದಾರಿಯಲ್ಲಿ ಸೆಬೆಕ್ಖುಗೆ ಆತ ಹೇಳಿದ:
"ಹೀಗೂ ಆಗಬಹುದು ಅಂತ ಕನಸಿನಲ್ಲೂ ಎಣಿಸಿರ್ಲಿಲ್ಲ."
ಸೆಬೆಕ್ಖುಗೆ ಮಾತು ಕಟ್ಟಿತ್ತು. ಪ್ರಯಾಸದಿಂದ అವನೆ೦ದ :
"ನಾವು ಒಗ್ಗಟ್ಟಾಗಿರ್ಬೇಕು, ಧೈರ್ಯದಿಂದಿರ್ಬೇಕು."
"ರಾಜದ್ರೋಹಿ ಅ೦ತ ಮೆನೆಪ್ಟಾನನ್ನು ಒಯ್ಧು ರಾಜಧಾನಿಯಲ್ಲಿ
ಸೆರೆಯಲ್ಲಿ ಇಟ್ಟರೆ?"
"ಅದಕ್ಕೆ ಅವಕಾಶ ಕೊಡಬಾರ್ದು. ಅವನನ್ನು ನಾವು ಬಿಡಿಸ್ಕೋ
ಬೇಕು."
"ಊರಿನ ಜನವೆಲ್ಲ ರಾಜಗೃಹದ ಮು೦ದೆ ನಿ೦ತು, ಮೆನೆಪ್ಟಾನನ್ನು
ಬಿಟ್ಬಿಡಿ___ಅ೦ತ ಕೂಗಿದರೆ ಅದು ಸಾಧ್ಯವಾದೀತು."
ಒಂದೆರಡು ತಾಳೆ ಮರಗಳು ಹತ್ತಿರವೇ ಇದ್ದುವು. ಬುಡದಲ್ಲಿ ನೆರಳಿತ್ತು.
ಅಲ್ಲಿ ಸ್ನೊಫ್ರು ಮತ್ತು ಸೆಬೆಕ್ಖು ನಿ೦ತರು. ಉಳಿದವರೂ ಅಲ್ಲಿ ಗು೦ಪು
ಗೂಡಿದರು....
ಮನವಿ ಸಲ್ಲಿಸಿದ ಮೆನೆಪ್ಟಾನಿಗೆ ಹೊಡೆದದ್ದು, ಅವನನ್ನು ಕಂಬಕ್ಕೆ
ಬಿಗಿದದ್ದು ಅನ್ಯಾಯ. ಅಂಗಳದಲ್ಲಿ ನೆರೆದಿದ್ದ ಯಾರಿಗೂ ಆ ಬಗೆಗೆ ಭಿನ್ನಾಭಿ
ಪ್ರಾಯವಿರಲಿಲ್ಲ.
ಸುದ್ದಿ ಹಬ್ಬಿದಾಗ ಊರಿನ ಇತರರೂ " ಛೆ ! ಛೆ ! " ಎಂದರು.