ಪುಟ:Naavu manushyare - Niranjana.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೌಕಟ್ಟು. ಹಿನ್ನೆಲೆಯಲ್ಲಿ ಬಿಳಿಬಟ್ಟೆ, ಬೇರೆ ಪರದೆಗಳಿಲ್ಲ. ಪೆಟ್ರೊಮ್ಯಾಕ್ಸ್ ದೀಪಗಳು,ಎದುರು ಹೊಸ ಅನುಭವಕ್ಕಾಗಿ ಕಾದಿದ್ದ ಐದು ಸಹಸ್ರಕ್ಕೂ

ಹೆಚ್ಚು ಜನ.

ನಾಟಕ ಅಭಿನಯಿಸಲು ಪೋಲೀಸರ ಅನುಮತ್ತಿ ಕೇಳಿರಲಿಲ್ಲ.ಅವರೂ ನನ್ನನ್ನು ಸಮೀಪಿಸಿರಲಿಲ್ಲ;ಅಕ್ಟೋಬರ್ ಕ್ರಾ೦ತಿಯ ದಿನವಲ್ಲವೆ ಆವತ್ತು? ನಡೆಯುತ್ತಿದ್ದ ವುಹಾಯುದ್ಧದಲ್ಲಿ ಫಾಸಿಸಮಿನ ಶವದ್ದಾನಿಗೆ ಮೊಳೆ ಹೊಡೆಯುತ್ತಿದ್ದ ಬಲಿಫ್ಟದೇಶವಲ್ಲವೆ ರಷ್ಯ?

ಕಮೂನಿಸ್ಟ್ ಪಕ್ಷದಿಂದ ನಾನು `ದೂರಸರಿದು ಮೂವತ್ತೈದು ವರ್ಷ ಸಂದಿವೆ. ಆದರೂ ನನ್ನ 'ಕೆಂಪು ದಿನಗಳ ನೆನಪು ಮಾಸಿಲ್ಲ.ಇಷ್ಟ ವಾದದ್ದು ಅಪ್ರಿಯವಾದದು ಎರಡೂ ಇವೆ ಆ ಮೂಟೆಯಲ್ಲಿ.ನನಗೆ ತೃಪ್ತಿ ನೀಡಿದ ಒಂದು ಘಟನೆ: 'ನಾವೂ ಮನುಷ್ಯರು!'2' ಬಯಲು ನಾಟಕದ ಪ್ರದರ್ಶನ.

ಹಲವು ಕಾರ್ಮಿಕ ಸಂಘಟನೆಗಳೂ ಕಮ್ಯೂನಿಸ್ಟ್ ಪಕ್ಷವೂ ಒಂದಾಗಿ

ಏರ್ಪಡಿಸಿದ್ದ ಕಾರ್ಯ್ದುಕ್ರಮ್ಮ. ಭಾಷಣಗಳ ಸುರಿಮಳೆ ಆದಮೇಲೆ ಜನತಾ ರಂಗಭೂಮಿ ಹೊಣೆ ಹೊತ್ತಿದ್ದ ನಾಟಕ, ವಿವಿಧ ವಿನೋದ. ಕ್ಲಾರ್ಮಿಕ


1. ಆಕ್ಟೋಬರ್ ಕ್ರಾ೦ತಿ,-ನವೆಂಬರ್'ನಲ್ಲಿ ಆಚರಣೆಇದೇನು ಎನ್ನುವಿರಾ? ತ್ಸಾರ್ ಆಳ್ವಿಕೆಯಲ್ಲಿ ರಷ್ಯದಲ್ಲಿ ಬಳಕೆಯಲ್ಲಿದ್ದ ಕ್ಯಾಲೆ೦ಡರಿನ ಪ್ರಕಾರ ಸಮಾಜ ವಾದ ಕ್ರಾ೦ತಿ ಆರ೦ಭವಾದದ್ದು ಅಕ್ಟೋಬರ್ ೨೫ರ೦ದು.ಈಗಿನ ಕ್ಯಾಲೆ೦ಡರ್ ಪ್ರಕಾರ ಆಧು ನವೆಂಬರ್ ೭ ಆಗುತ್ತದೆ, ಹೀಗಾಗಿ ಅಕ್ಟೋಬರ್ ಕ್ರಾ೦ತಿ ಯೆಂಬ ಹೆಸರು ಹೊತ್ತಿದ್ದರೂ ಅದರ ಆಚರಣೆ ನವೆಂಬರ್ನಲ್ಲಿ.

2. 'ನಾವೂ ಮನುಷ್ಯರು!' ನಾಟಕದ ಮೊದಲ ಪ್ರದರ್ಶನದಲ್ಲಿ ಪಾತ್ರ ವಹಿಸಿದ ವರು- ೧. ಸಿರಿಪ್ಸನ್ ಸೋನ್ಸ್ (ದಕ್ಷಿಣ ಕನ್ನಡದಲ್ಲಿ ನೇಕಾರರನ್ನು ಸ೦ಘಟಿಸಿದ ಆದ್ಯರು) ೨ . ಎ. ಬಾಬು ೩ , ರಾಮ ಬಲಾಯ ೪ . ಘಾಟಿ ಬಾಬು ೫ . ಬಿ.ರಾಮಪ್ಪ (ಇವರೆಲ್ಲ ನೇಕಾರರು) ೬ .ಶ್ರೀಪತಿ ಭಟ್ ೭ :ಮ. ಕ. ಶೀನಪ್ಪ (ಪ್ರೆಸ್ ಕಾರ್ಮಿಕರು) .ಈ ಪೈಕಿ ರಾಮ ಬಲ್ಮಾಯ , ಘಾಟಿ ಬಾಬು ಮತ್ತು ಮ. ಕ. ಶೀನಪ್ಪ ಮೃತಪಟ್ಟಿದ್ದಾರೆ. ಎಂ . ಬ್ಲಾಬು ಮತ್ತು ಶ್ರೀಪತಿ ಭಟ್ ಬೊಂಬಾಯಿಯಲ್ಲಿದ್ದಾರೆ . ಈಯೆಲ್ಲ ಮಾಹಿತಿಗಾಗಿ ಶ್ರೀ ಸೋನ್ಸರಿಗೆ

ಕೃತಜ್ನ - ನಿರ೦ಜನ..