ಈ ಪುಟವನ್ನು ಪ್ರಕಟಿಸಲಾಗಿದೆ
೮ / ನಾವೂ ಮನುಷ್ಯರು!
ರುಕ್ಕು : (ತಮಾಷೆ ಮಾಡುತ್ತ)
ಓಹೋಹೊಹೊ....ಯೂನಿಯನಂತೇಳಿದ್ರೆ ಗಂಡಸರೂ ಇಲ್ಲಾಂತ
ತೋ....ಗಂಡಸ್ರೂ ಹೆಂಗಸ್ರೂ ಎಲ್ಲಾ
ಮಜೂರರೂ ಸೇರಿರುವ ಸಂಘಟನೆ ಯೂನಿಯನು.
(ರಾಮಣ್ಣ ನಗುವನು.ಕೆಮ್ಮು.
ರುಕು ಏಳುವಳು.)
ರುಕ್ಕು :ಸಾಕು ಮಾತಾಡಿದ್ದು....ಹೊತು ಕಂತುತ್ತ್ ಬಂತು....
ಸ್ವಲ್ಪ ಕಟ್ಟಿಗೆ ಎಲ್ಲಿಯಾದರೂ ಸಿಗ್ತದೋ ನೋಡೇನೆ....
ಈ ಕಿಟ್ಟೂಎಲ್ಲಿಗೆ ಹೋದ್ನಪ್ಪ. ನಾನು ಕೆಲಸಕ್ಕೆ
ಹೋದ ಮೇಲೆ ಹೊರಗೆ ಆಡಿದ್ದು ಸಾಕಾಗ್ಲಿಲ್ಲೋ
ಏನೋ!
(ಹೊರ ಹೋಗುವಳು.
ರಾಮಣ್ಣ ಬಳಲಿದ ಧ್ವನಿಯಲ್ಲಿ “ಹೋಗು ಹೋಗು"
ಎನ್ನು ವನು.
ಸ್ವಲ್ಪ ಹೊತ್ತು ನೀರವ. ರಾಮಣ್ಣ ಒರಗಿಕೊಳ್ಳುವನು.
ಹೊರಗಿನಿಂದ "ರಾಮಣ್ಣ-ఓ ರಾಮಣ್ಣನವರೇ” ಎಂದು
ಕರೆಯುವ ಸ್ವರ.)
ರಾಮಣ್ಣ : ಯಾರಪ್ಪಾ? ಬನ್ನಿ.... ಇದ್ದೆನೆ.
(ಲಸ್ಸಾದೋ ಒಳಗೆ ಬರುವನು. ಮಾಸಿದ ಬಟ್ಟೆ, ಕೊಳೆಯಾದ
ಕೋಟು, ಟೋಪ್ಪಿ, ಕೊರಳಲ್ಲಿ ಶಿಲುಬೆ....)
ಲಸ್ರದೋ: ಹ್ಯ್ರಾಗಿದ್ದೀರಿ ರಾಮಣ್ಣ?
ರಾಮಣ್ಣ : ಹಾ–ಲಸ್ರದೋ ಪೊರ್ಬುಗಳೋ? ಬನ್ನಿ....ಇದ್ದೇನೆ
ನೋಡಿ....ಗುಣ ಆಗ್ತ ಬಂತು. ಇನ್ನೂ ಸ್ವಲ್ಪ ಕ್ಷೀಣ....
ಬನ್ನಿ....ಇದರ ಮೇಲೆ ಕೂತ್ಕಳ್ಳಿ....ಹಾಗೆ-