ಪುಟ:Naavu manushyare - Niranjana.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸೂಕ್ತ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆ ಸೇರಿದೆ. ಅಕ್ಷರಗಳನ್ನು ಜೋಡಿಸಿ, ಅಚ್ಚಾದುದನ್ನು ಓದಲು ಕಲಿತ ಮೇಲೆ, ಶಾಲೆ ಇಷ್ಟವಾಯಿತು. ನನಗೆ ಶಾಲೆಗಿಂತಲೂ ಹೆಚ್ಚಿನ ಲೋಹಚುಂಬಕ ಆ ಊರಿನ ಪಟೇಲ ಶ್ರೀನಿವಾಸರಾಯರು(ಅವರಿಗೆ ನನ್ನ ತಂದೆಯ ಹೆಸರೇ ಇದ್ದುದು ಬರಿಯ ಆಕಸ್ಮಿಕ, ಪಟೇಲರು ಯಕ್ಷಗಾನದಲ್ಲಿ, ಸಾಹಿತ್ಯದಲ್ಲಿ ಆಸಕ್ತರು.) ಒಂದು ನಮೂನೆಯು ಪುಟ್ಟ ಹುಡುಗನ ಮೇಲೆ, ಆತ ತಬ್ಬಲಿಯೆಂಬ ಕಾರಣವೂ ಸೇರಿ, ಅವರು ಕುತೂಹಲ ತಳೆದದ್ದು ಸ್ವಾಭಾವಿಕ. ಹತ್ತಿರದ ಹಳ್ಳಿಗಳಲ್ಲಿ ಯಕ್ಷಗಾನ ಎಲ್ಲಿಯೇ ಇರಲಿ ಪಟೇಲರ ಹಿಂಡಿನೊಂದಿಗೆ ಈ ಹುಡುಗ ಒಬ್ಬನಾಗುತ್ತಿದ್ದ. ಆರುವ ಉರಿಯುವ ತೆಂಗಿನ ಒಣಗರಿಗಳ 'ಸೂಟೆ' ಎದುರಲ್ಲಿ ಹೊಲಗಳ ಏರಿಯುದ್ದಕ್ಕೂ ಹುಡುಗನ ಓಟ. ಸ್ಥಳ ತಲಪಿದೊಡನೆ ಒಂದು ಮೂಲೆಯಲ್ಲಿ ನೆಲದ ಮೇಲೆ ನಿದ್ದೆ. ಬೆಳಗಿನ ಜಾವ ರಣಚಂಡೆಯ ಸದ್ದಿಗೆ ಎಚ್ಚರ!

ನನ್ನ ತಾಯಿಯ ಸೋದರ ಮಾವ ಪ್ರಖ್ಯಾತ ಯಕ್ಷಗಾನ ಕಲಾವಿದ ರಾಗಿದ್ದರಂತೆ (ಈ ಶತಮಾನದ ಎರಡು ಮೂರನೇ ದಶಕಗಳಲ್ಲಿ) ಹಾಸ್ಯಗಾರ ಲಕ್ಷ್ಮೀನಾರಾಯಣಯ್ಯ ಎಂದೇ ಜನ ಅವರನ್ನು ಕರೆಯುತ್ತಿದ್ದರಂತೆ. ಜೀವ ನದಿಯಲ್ಲಿ ನನ್ನ ಪುಟ್ಟ ತೆಪ್ಪ ಬೇರೆಲ್ಲಿಗೋ ಸಾಗಿದುದ್ದರಿಂದ, ಆ ಅಜ್ಜನನ್ನು ರಂಗಸ್ಥೆಲದಲ್ಲಿ ಕಂಡು, ಅವರ ಮಾತುಕೇಳಿ ನಗುವ ಅವಕಾಶ ನನಗೆ ಲಭಿಸಲಿಲ್ಲ.

ಒಂದು ಅಪರಾಹ್ನ ಶಿವರಾಮ 'ಕಾರಂತ ಮತ್ತು ಬಳಗ (ಸದಸ್ಯರು ಎಳೆಯುವಕರು), ಕಾವು ಊರಿಗೆ ಬಂದರು (೧೯೩೨), ಎರಡು ಪುಟ್ಟ'ನಾಟಕ ಆಡಿ ಪುತ್ತೂರಿಗೆ ಅವರು ಮರಳಬೇಕು. ಶಾಲೆಯು ಮೆಟ್ಟಲುಗಳು ಮತ್ತು ಜಗಲಿಯೇ ವೇದಿಕೆ. ಅಂಗಳ ಛಾವಣಿಯಿಲ್ಲದ ಪ್ರೇಕ್ಷಾಗೃಹ. ಕತ್ತಲು ಕವಿದಂತೆ ಪೆಟ್ರೋಮಾಕ್ಸ್ ನ (ಗ್ಯಾಸ್ ಲೈಟ್), ಮೊದಲ ನಾಟಕದ ಹೆಸರು 'ಡೊಮಿಂಗೊ', ನಾಟಕದ ಕತೆ ಏನು? ಪಾತ್ರಧಾರಿಗಳು ಯಾರು? ಎರಡನೇ ನಾಟಕ' ಯಾವುದು?' ಗೊತ್ತಿಲ್ಲ. ಆದರೆ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದ ಒಂದು ಸಂಗತಿ ನೆನಪಿದೆ. ಡೊಮಿಂಗೊ' ಮುಗಿದ ಮೇಲೆ