ಪುಟ:Shabdamanidarpana.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡಲಿಂಗಂ. 129 ವೃತ್ತಿ. ಕನ್ನಡದೊಳ್ ಪಿರಿದುಂ ಸ್ತ್ರೀಲಿಂಗಮೆಂದುಂ, ಪುಲ್ಲಿಂಗವೆಂದು, ನಪುಂಸಕಲಿಂಗವೆಂದು, ಪುಂಸೀಲಿಂಗಮೆಂದು, ಸೀನಪುಂಸಕಲಿಂಗವೆಂದು, ಪುಂನಪುಂಸಕಲಿಂಗವೆಂದುಂ, ತ್ರಿವಿಧಲಿಂಗವೆಂದುಂ, ವಿಶೇಷ್ಠಾಧೀನಲಿಂಗ ಮೆಂದುಂ, ಅವ್ಯಯಲಿಂಗಮೆಂದುಂ, ಲಿಂಗಮೊಂಬತ್ತು ತೆಲಿಂ. ಪ್ರಯೋಗಂ-ಸ್ತ್ರೀಲಿಂಗಕ್ಕೆ ಅರಸಿ, ದೇವಿ. ಪುಲ್ಲಿಂಗಕ್ಕೆ-ಅರಸಂ, ದೇವ, ನರ, ಸುರಂ. ನಪುಂಸಕಲಿಂಗಕ್ಕೆ ಕನ್ನಡಿ, ಕಳಸ, ಜೆಡೆ, ಕೊಡೆ. ಪುಂನಪುಂಸಕಲಿಂಗಕ್ಕೆ - ರವಿ ಮೂಡಿದಂ, ರವಿ ಮೂಡಿದುದು. ವಿಧು ವಿವಂ, ವಿಧುವಿದು. ಇವಂತೆ ಮಂಗಳಬುಧಬೃಹಸ್ಪತ್ಯಾದಿ ನವಗ್ರಹಂಗಳೆಲ್ಲಂ ಪುಂನಪುಂಸಕಲಿಂಗಂಗಳ್, ಆಳಿವ, ಆಳಿದು, ಬಸಂತಂ ಬಂದಂ, ಬಸಂತಂ ಬಂದುದು, ಮಲಯಾ ನಿಲಂ ತೀಡಿದಂ, ಮಲಯಾನಿಲಂ ತೀಡಿದುದು. ಕಾಮಂಗೆಯುಂ ಕಾಮಕ್ಕಮೇಕತ್ವ ಮುಳ್ಳುದ°೦ಕಾಮನೆಚ್ಚಂ, ಕಾಮಂ ಪೆರ್ಚಿದುದು. ಇವೆಲ್ಲಂ ಪುಂನಪುಂಸಕಂ, - ಪುಂಸೀಲಿಂಗಕ್ಕೆ-ಇವರ್‌ ಪುರುಷರ್, ಇವರ್ ಸೀಯರ್, ಅವರ್ ಗಂಡರ್‌, ಅವರ್ ಪೆಂಡಿರ್. ಉವರ್ ದೇವರ್, ಉವರ್ ದೇವಿಯರ್. ತೊಂಬುದುಮಂತೆ ಇವಂ ದೇವರ ತೊಯ್ತಿ, ಇವಳೇವರ ತೊಯ್ತಿ. - ಸ್ತ್ರೀನಪುಂಸಕಕ್ಕೆ- ಆ ಪೆಣ್ಣಾಣೆ, ಆ ಪೆಂದುದು; ಆ ಕನ್ನಿಕೆ ಸಲಕ್ಷಣೆ, ಆ ಕನ್ನಿಕೆ ಪೊಲ್ಲದು. ಅವಳ ಸಜ್ಜನವೆಣ್, ಅದು ಸಜ್ಜನವೆನ್, ಸಿರಿ, ಸರಸ್ವತಿ, ದೇವತೆ ಎಂಬಿವುಮಂತೆ - ಸಿರಿಯೊಲ್ವಳೆ ಹೃದ್ಯವಿದ್ರ೦ . . . . . .” | 185 || “ಸಿರಿಯೊಂದಾಗದೊಡಮೇನೊ ಸುಜನೋತ್ತಂಸಾ” || 186 || “ಪರಮಜಿನೇಂದ್ರವಾಣಿಯೆ ಸರಸ್ವತಿ ಕೆಯ್ರವಾಗೆ ವೇಟ್ಟಿ ಪ || 187 || “ಸರಸ್ವತಿ ಬೆಳೆದು ಪೆಪಮಂ ಧರಿಯಿಸಿ ನಿಂದುದದುವೆ || 188 || “ದೇವತೆಯರ ಮೆಚ್ಚಿ ವರಮನರಸಂಗಿತರ್” || 189 || "ಬಾರಿಸಿದುವೂ ಬಿಡದೆ ಜಡೆದು ವನದೇವತೆಗಳ್ " || 190 11