ಪುಟ:Shabdamanidarpana.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

188 ! ಆ. 2 Ch. ನಾಮಪ್ರಕರಣಂ. ಅನ್ವಯಂ.- ಮತ್ತಂ ದ್ವಿತೀಯೆಯ ಇಷ್ಟಾನಿಷ್ಟದೊಳ್ ತೊಡರ್ದು, ಎದೆ ಉಡುಗದೆ. ಕಾಲಾಧ್ವದೊಳ ನುಡಿಗುಂ; ತೃತೀಯೆ ಸಿ ಕರ್ತೃಕರಣಹೇತುಸ್ಥಿತಿಯೊಳ್ ಪೇಡೆಗುಂ. ಟೀಕು. ಮತ್ತು = ಮತ್ತೆ ಯಂ; ದ್ವಿತೀಯೆಯೆ = ದ್ವಿತೀಯ ವಿಭಕ್ತಿಯೆ; ಇಷ್ಟ = ಇಷ್ಟದಲ್ಲಿ ; ಅನಿಷ್ಟ = ಅನಿಷ್ಟದಲ್ಲಿ ; ತೊಡರ್ದು = ಪೊರ್ದುಗೆಯಾಗಿ; ಎಡೆಯುಡುಗದೆ = ಎಡೆ ಎಡದೆ; ಕಾಲ = ಕಾಲದಲ್ಲಿ ; ಅಧ್ಯದೊಳ್ = ಪಥದಲ್ಲಿ ; ನುಡಿಗು = ನುಡಿವುದು; ತೃತೀಯೆ = ತೃತೀಯಾ ವಿಭಕ್ತಿ; ಸಲೆ= ಚೆನ್ನಾಗಿ; ಕರ್ತೃ = ಕರ್ತೃವಿನಲ್ಲಿ ; ಕರಣ=ಕರಣದಲ್ಲಿ, ಹೇತು ಸ್ಥಿತಿಯೊಳ = ಹೇತುವಿನ ಸ್ಥಿತಿಯಲ್ಲಿ ; ಪೇಯಲ್ಪಡೆಗುಂ= ಪೇಯಲ್ಪಡೆವುದು, ವೃತ್ತಿ-ಇಷ್ಟದೊಳಂ ಅನಿಷ್ಟದೊಳಂ ಕಾಲದೊಳಂ ಅಧ್ಯದೊಳಂ ಎಡವ ಯದೆ ದ್ವಿತೀಯೆಯಕ್ಕುಂ; ಕರ್ತೃವಿನೊಳಂ ಕರಣದೊಳಂ ಹೇತುವಿನೊಳಂ ತೃತೀಯೆಯಕ್ಕುಂ. ಪ್ರಯೋಗಂ.-ಇಷ್ಟಕ್ಕೆ ನೇವಳಮಂ ತೆಗೆದಂ. ಅನಿಷ್ಟಕ್ಕೆ- ಪಾವಂ ದಾಂಟಿದಂ. ಕಾಲಕ್ಕೆ ಅದಿಂಗಳಂ ತಳ್ಳಿದಂ; ಉಪವಾಸದಿಂ ತ್ರಿರಾತ್ರಮನಿರ್ದ೦; ಜಾವಮಂ ತೊರಿಲ್ಲಂ. ಅಧ್ಯಕ್ಕೆ- ಅರೆ ಗಾವುದಮಂ ಪರಿದಂ; ಮೂಗಾವುದಮಂ ನಡೆದಂ. ದೋಹನಾದಿಗಳೊಳ್ಳಿ ಕರ್ಮಕಮುಂಟು- ಗುರುವಂ ಜ್ಞಾನಮಂ ಬೆಸ ಗೊಂಡಂ; ದಾನಿಯುಂ ದಾನಮಂ ಬೇಡಿದಂ; ಪಶುವಂ ಪಾಲಂ ಕರೆದಂ. ತೃತೀಯೆಯ ಕರ್ತೃವಿಂಗೆ- ಪದಕಮಕ್ಕಸಾಲೆಯಿಂ ಮಾಡಲ್ ಪಟ್ಟುದು; ಕಾವ್ಯಮೆನ್ನಿಂ ಪೇಟೆ ಪಟ್ಟುದು. ಕರಣಕ್ಕೆ ಕೊಡಲಿಯಿಂ ಕಡಿದಂ; ಗದೆಯಿಂ ಮೋದಿದಂ; ಕಣ್ಣಿಂ ನೋಡಿದಂ. ಹೇತುವಿಂಗೆ- ಓಲಗದಿಂ ಪಡೆದಂ; ತಗಹಿಂ ಸಿಲ್ಕಿದಂ; ದೈವದಿಂ ಬದ್ದೀರಿ. ಸಂಯೋಗದೊಳುಂಟು - ಸಂಗಡದಿಂ ಬಂದಂ.