ಪುಟ:Shabdamanidarpana.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

222 2 2 2 Ch. ನಾಮಪ್ರಕರಣc, ಪದಚ್ಚೆದಂ.- ನೆಲಸಿ ಇರ್ದ ವಿಶೇಷಣದ ಇಷ್ಟಲಿಂಗಂ ಎನಿಪುದು ವಿಶೇಷ್ಯ; ಆದಜಿ ಇಷ್ಟ ದಿ೦ ಅಗ್ಗಲಿಕುಂ ವಿಶೇಷಣದ ಲಿಂಗಲಕ್ಷಣಂ, ದೋಷರಹಿತಂ ಇದು ರೂಪಕದೊಳ್‌, ಅನ್ವಯಂ.- ನೆಲಸಿ ಇರ್ದ ಏಶೇಷಣದ ಇಷ್ಟಲಿಂಗಂ ಎನಿಪುದು ವಿಶೇಷ್ಯಂ; ಅದು ಇಷ್ಟದಿಂ ಏಶೇಷಣದ ಲಿಂಗಲಕ್ಷಣಂ ಅಗ್ಗ ಲಿಕುಂ. ಇದು ರೂಪಕದೊಳ್ ದೋಷರಹಿತಂ. - ಟೀಕು.- ನೆಲಸಿರ್ದ= ನೆಲೆಗೊಂಡು ಇದF; ವಿಶೇಷಣದ = ವಿಶೇಷಣಶಬ್ದ ದ; ಇನ್ನ ಲಿಂಗಂ = ಇಷ್ಟವಾದ ಲಿಂಗ; ಎಸಿಪುದು= ಎನಿಸುವುದು; ವಿಶೇಷ್ಯ೦= ವಿಶೇಷ್ಯಲಿಂಗಂ; ಅದಲಿ = ಆ ವಿಶೇಷ್ಯದ; ಇಷ್ಟದಿಂ= ಇಷ್ಟ ದಿಂದ; ವಿಶೇಷಣದ = ಎಶೇಷಣತಜ್ಜ ದ; ಲಿಂಗ ಲಕ್ಷ ಣ೦ = ಲಿಂಗದ ಲಕ್ಷಣc; ಆಗ್ಗೆ ಲಿಕುಂ= ಪೆರ್ಚುಗೆವಡೆವುದು; ಇದು = ಈ ಪ್ರಯೋಗ; ರೂಪಕದೊಳ್ = ರೂಪಕದಲ್ಲಿ ; ದೋಷರಹಿತಂ = ನಿರ್ದೋಸವಪ್ಪುದು. ವೃತ್ತಿ.-ವಿಶೇಷಣದ ಲಿಂಗದಿಷ್ಟದಿಂ ವಿಶೇಷ್ಠ ಮುಮನಾಲಿಂಗವಾಗಿ ಯೋಚಿಸಿಕೊಳ್ಳುದು; ವಿಶೇಷ್ಯಲಿಂಗದಿಷ್ಟದಿಂ ವಿಶೇಷಮುಮನಾಲಿಂಗವಾಗಿ ಯೋಚಿಸಿಕೊಳ್ಳುದು. ರೂಪಕದೊಳಿದು ನಿರ್ದೋಷಂ. ಪ್ರಯೋಗಂ.- ವಿಶೇಷಣಬಲಕ್ಕೆ“ಉದಯಾಸ್ತೋನ್ನತ ಶೈಲ ಸೇತು ಹಿಮವತ್ಕುಲ ಪರ್ಯಂತ ಸಂ- ! ಪದೆಯಂ ವಾರ್ಧಿತರಂಗ-ರಕ್ತ ನಿನದತ್ ಕಾಂಜೀ ಕಲಾಪಾಂಚಿತಾ- || ಸ್ಪದೆಯಂ ಸಾಧಿಸಿ ಕಬ್ಬಿಗಂಗೆ ನೆಲನಂ ನಿರ್ವ್ಯಾಜದಿಂದ ನಿಮಿ- || ರ್ಚಿದಗೆಲ್ಲಂ ಭುವನೈಕರಾಮಮಹಿಪಂಗಕ್ಕುಂ ಪೆರ್ಗಕ್ಕು” || 366 || ಎಂಬಲ್ಲಿ ನೆಲನೆಂಬ ನಪುಂಸಕಲಿಂಗಮಂ ಬಿಟ್ಟು, ಧರಾವನಿತೆಯೆಂದು, ಯೋಚಿಸಿಕೊಳ್ಳುದು. ವಿಶೇಷ್ಯಬಲಕ್ಕೆ- ಆತಂ ಜಗದ್ದ ರ್ಪಣಂ; ಆ ಪೆಣ್ಣಗದ್ದ ರ್ಪಣಂ; ಅದು ಜಗದ್ದ ರ್ಪಣಂ.