ಪುಟ:VISHAALAAKSHI - Niranjana.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

” ” .!" ೧೦೫ ಪ್ರೇಮಕ್ಕೆ ಕಣ್ಣಿಲ್ಲ * ....ವಿಶಾಲಾಕ್ಷಿ ಕಣ್ಣೆವೆಗಳನ್ನು ಮುಚ್ಚಿಕೊಂಡು, ಬದಿಯ ಕಂಬಿಗಳಿಗೆ ತಲೆಯಾನಿಸಿದಳು.. ಸೊರಗಿದ್ದ ತುಟಿಗಳನ್ನು ಮಂದಹಾಸ ಮೆಲ್ಲನೆ ಆವರಿಸಿತು.

ವಿಶಾಲಾಕ್ಷಿ ಕುಳಿತಿದ್ದ ಬಸ್ಸು ಹೊರಟ ದಿಕ್ಕಿನಲ್ಲೇ, ಗೊತ್ತುಗುರಿಯಿಲ್ಲದೆ ಗಂಗಾಧರ ನಡೆದ ಕಾಫಿಯ ಹರಟೆಯ ಗೆಳೆಯರಿಗೆ ಬರಗಾಲವಿರಲಿಲ್ಲ. ಅಂಥವರು ಅಗಾಗ್ಗೆ ಸಿಗುತ್ತಿದ್ದರು, ಆದರೆ ಎಷ್ಟೋಸಾರೆ, ಜನರಿಂದ ತಪ್ಪಿಸಿ. ಕೊಳ್ಳುವುದನ್ನೇ ಅವನು ಇಷ್ಟ ಪಡುತ್ತಿದ್ದ, ತನ್ನೆಲ್ಲ ಯೋಚನೆಗಳಿಗೆ ಸಂಗಾತಿ ಯಾಗಿ ಒಬ್ಬನೇ ಅಲೆಯುವುದು.... ಒಬ್ಬನೇ ? “ಯಾವ ಕಡೆ ಹೊರಟಿದೀರಾ? ನಡೆದುಹೋಗೋಣವೇನು ?” ಎಂದ ವಿಶಾಲಾಕ್ಷಿ ಒಂದು ಮಾತು ಕೇಳಿದ್ದರೆ, ಈಗಿನ ಈ ಒಂಟಿತನ ಇರುತ್ತಿರಲಿಲ್ಲ. ಅಥವಾ, ತಾನೂ ಆ ಬಸ್ಸನ್ನೇರಿ ಕುಳಿತಿದ್ದರೆ? ಉಂಟೆ ಎಲ್ಲಾದರೂ ? ತನ್ನ ಬಗ್ಗೆ ತಪ್ಪು ಗ್ರಹಿಕೆಗೆ ಸುಲಭವಾಗಿ ಎಡೆಸಿಗುತ್ತಿತ್ತು. ಈ ಆ ಗಿರಿಜಾಬಾಯಿ ಪರೀಕ್ಷಿಸುವ ನೋಟದಿಂದ ತನ್ನನ್ನು ನೋಡಿದರು. (ಈತ ಒಳ್ಳೆಯವನೆ ? ಕೆಟ್ಟವನೆ ?' ವಿಶಾಲಾಕ್ಷಿ ತನ್ನೊಡನೆ ಮಾತನಾಡಿದಾಗಲೆಲ್ಲ, ಯಾವುದಾದರೊಂದು ಕಾರಣಕ್ಕಾಗಿ ಗಿರಿಜಾಬಾಯಿಯ ಪ್ರಸ್ತಾಪ ಬರುತ್ತಿತ್ತು. ವಯಸ್ಸಿನ ಅಂತರವಿದ್ದರೂ ಅವರಿಬ್ಬರೂ ಆತ್ಮೀಯ ಗೆಳತಿಯರೆಂಬುದು ಸ್ಪಷ್ಟ. ಗಿರಿಜಾಬಾಯಿಯ ದೃಷ್ಟಿಯಲ್ಲೂ ತಾನು ಒಳ್ಳೆಯವನಾಗಿ ಕಾಣುವುದು ಮುಖ್ಯ. ಆ ಯೋಚನೆಯಿಂದ ಗಂಗಾಧರನಿಗೆ ನಗು ಬಂತು, ರಸ್ತೆಯ ಮಗ್ಗುಲು ಹಾದಿ, ಇಷ್ಟಬಂದಂತೆ ನಗುವಹಾಗಿರಲಿಲ್ಲ. ಎದುರು ಗಡೆಯಿಂದ ಜನ ಬರು ಆದ್ದರು, ಹೆಂಗಸರು-ಯುವತಿಯರು, ಕೈಗಳಲ್ಲಿ ಚೀಲ ಹಿಡಿದು ಮಾರ್ಕೆಟಿಗೆ ಹೊರಟ ಸದ್ಧಹಸ್ಥರು, ಸಿನಿಮಾ ಮಂದಿರಗಳಿಗೆ ಧಾವಿಸುತ್ತಿದ್ದವರು, ಆತನನ್ನು ಹಿಂದಿಕ್ಕಿ ಬೇರೆ ಕೆಲವರು ಸಾಗುತ್ತಿದ್ದರು-ಕೆಲಸ ಮುಗಿಸಿ ಮನೆಗೆ. * , ....ತಾನು ಒಳ್ಳೆಯವನಾಗಿ ಕಾಣುವುದು ಮುಖ್ಯ, ಒಳ್ಳೆಯತನ ಮತ್ತು ಕೆಟ್ಟುತನ, ಜಗತ್ತಿನಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ? ಯಾವ ಮಾನದಂಡದಿಂದ ಅಳೆಯಬೇಕು ಇವನ್ನು ? • - - 5 | ++----೪y P ಳwಳen '- ! • + ' +4ws : _ky :.: 3-2- .....1 –nt, r. 112 u-v