ಹಿರಿ ವಿಶಾಲಾಕ್ಷಿ . ಆ? -+ ಜವಾನ ಜೇಬಿನಿಂದ ತೆಗೆದುಕೊಟ್ಟ ಪೆನ್ಸಿಲಿನಿಂದಲೇ, 'ಡೆಲಿವರಿ' ಪುಸ್ತಕ ದಲ್ಲಿ ವಿಶಾಲಾಕ್ಷಿ, ತನ್ನ ಹೆಸರಿನೆದುರು ಸಹಿ ಹಾಕಿದಳು, ಅಲ್ಲಿಯೇ ಕಟ್ಟನ್ನು ಒಡೆದು ನೋಡುವ ಆತುರ ಅವಳಿಗೆ, ಆದರೆ, ಆಳಿನೆದುರು ತನ್ನ ತವಕವನ್ನು ತೋರ್ಪಡಿಸುವುದು ಅನುಚಿತವಾಗಿತ್ತು, ಮನಸ್ಸು ಬಿಗಿಹಿಡಿದು, ಕಟ್ಟನ್ನು ಬಿಗಿಯಾಗಿ ಎದೆಗವಚಿಕೊಂಡು ಅವಳು ಅಲ್ಲಿಯೇ ನಿಂತಳು. ಸೈಕಲನ್ನು ಸವಾರಿಗೆ ಸಿದ್ದಗೊಳಿಸುತ್ತ ಜವಾನ ಹೇಳಿದ : ನಿಮ್ಮನ್ನು ಹುಡುಕಿಕೊಂಡು ಮಹಾರಾಣಿ ಕಾಲೇಜಿಗೆ ಹೋಗಿದ್ದೆ.” [ಗಂಡಸರಿಗಾದರೆ 'ತಾವು'; ಹೆಂಗಸರಿಗೆ, ಅದರಲ್ಲೂ ಚಿಕ್ಕವಯಸ್ಸಿನವರಿಗೆ, (ನೀವು' ಸಾಕು ಎಂದು ಅವನ ಅಭಿಮತ.] .“ಹೌದೆ? ನಾನೀಗ ಕೆಲಸಕ್ಕೆ ಹೋಗ್ತಾ ಇಲ್ಲ.” • “ಹಾಗೇಂತ ಗಿರಿಜಾಬಾಯೋರು ಹೇಳಿದ್ರು, ಎಮ್ಮೆಗೆ ಕುಂತಿ ಅಂದ್ರು.”. [ಎಂ.ಎ ಗೆ ಕುಳಿತುಕೊಳ್ಳುವ ಹೆಣ್ಣು, ಅವನ ದೃಷ್ಟಿಯಲ್ಲಿ ಯಾವಾಗಲೂ ಅಣಕದ ವಸ್ತು, ಆದರೆ ಈ ವಿಶಾಲಾಕ್ಷಮ್ಮ ಬೆಡಗುಗಾತಿಯಲ್ಲ ಎನ್ನುವುದನ್ನು ಆತ ಬಲ್ಲ.] - “ಗಿರಿಜಾಬಾಯಿ ಹೇಳಿದ್ರೇನು ?” ಮನಸಿನಲ್ಲೆ, 'ಎಷ್ಟೊಂದು ದಿವಸವಾಯ್ತು ಅವರನ್ನು ನೋಡಿ' ಎಂದುಕೊಂಡಳು ವಿಶಾಲಾಕ್ಷಿ ತನ್ನ ಲೇಖನದ ಹಸ್ತಪ್ರತಿಯನ್ನು ಓದಿ ಅವರು ಮೆಚ್ಚಿದ್ದರು, ಈಗ ಅಚ್ಚಿನಲ್ಲಿ ಅದನ್ನು ಕಂಡಾಗ, ಅವರಿಗೆ ಸಂತೋಷವಾಗು ವುದು ಖಂಡಿತ. “ಹೂಂ, ...ಬರೀನಮ್ಮ” “ಆಗಲಪ್ಪಾ.” ವಿಶಾಲಾಕ್ಷಿ ಅವಸರ ಅವಸರವಾಗಿ ಒಳಕ್ಕೊಡಿದಳು, ಕಟ್ಟನ್ನು ಮೇಜಿನ ಮೇಲಿರಿಸಿ, ಬಿಗಿದಿದ್ದ ಟೈನ್ ದಾರವನ್ನು ಎಳೆದು ಕಡಿದಳು, ಸಂಚಿಕೆಯನ್ನು ಕೈಗೆತ್ತಿಕೊಂಡು ಪುಟ ತಿರುವಿದಳು. ಲೇಖನ ಕಣ್ಣಿಗೆ ಬೀಳಲಿಲ್ಲ ಒಮ್ಮೆಲೆ.. (ಅಚ್ಚಾಗಿಲ್ಲವೇನೋ' ಎಂದುಕೊಂಡಳು ನಿರಾಶಳಾಗುತ್ತ, ಬಳಿಕ, ಹೊದಿಕೆಯ ಒಳಮೈಯಲ್ಲಿ “ವಿಷಯ ಸೂಚಿಕೆ' ಕಂಡಿತು. 'ವಿಷಯ' ಮತ್ತು 'ಲೇಖಕರು'. ಕುವೆಂಪು, ಪು.ತಿ.ನ, ದೇ.ಜ.ಗೌ, ಜಿ ಎಸ್ ಶಿವರುದ್ರಪ್ಪ-ಆ ಅಲ್ಲಿತ್ತು .ಕnxuriGolugu FAYಈ-* * ** Irry | r - '&:
ಪುಟ:VISHAALAAKSHI - Niranjana.pdf/೧೨
ಗೋಚರ