ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಈ ? ಆಸ್ಪf ..!! ಹರ್ಳ. ಸಂಪುಟ ನೆನಪು ಸಿಹಿ ೧೨೫. 2ಜಿ-8ಳಳಳಳ: GENEತ•1112 ದಕಸದಯ ಯುವಕರು ಸಸ್ಯಗಳ ಸಂರ್ಗಹ E> | j

  • l

ಈELE+ NATAKA ಸಿದಳು, ಕಿಟಕಿಯ ಕಂಬಿಗಳನ್ನು ಎರಡೂ ಕೈಗಳಲ್ಲಿ ಹಿಡಿದು, ಹೊಚ್ಚ ಹೊಸ ಗಾಳಿಯನ್ನು ಆಳವಾಗಿ ಉಸಿರೆಳೆದಳು. ಆಗಬೇಕಾಗಿರುವ ಸಿದ್ದತೆ ಏನೆಂದು ಅದೆಷ್ಟನೆಯ ಬಾರಿಗೋ ಮತ್ತೆ ಎಣಿಕೆ, ಕಿಟಕಿ ಬಾಗಿಲುಗಳಿಗೆ ಹೊಸದಾಗಿ ಹಾಕಿದ್ದ ಪರದೆಗಳು ಸೊಗಸಾ ಗಿದ್ದುವು, ಒಳಗಿದ್ದ ಮುರುಕಲು ಸೀಠಕ್ಕೆ ಯಾವುದಾದರೂ ಅರಿವೆ ಹೊದಿಸಿ, ನಡುಮನೆಯಲ್ಲಿರಿಸಿ, ಹೂದಾನಿಯನ್ನು ಅದರ ಮೇಲಿಡಬೇಕು, ಹೊಸ ಹೂಗಳು, ಬಣ್ಣ ಬಣ್ಣದ ಕೋಟನ್ ಎಲೆಗಳು, ಧೂಳನ್ನಂತೂ ನಾಲ್ಕು ದಿನಗಳ ಹಿಂದೆಯೇ ರೂಡಿಸಿದ್ದಳು, ಅವರು ಬರುವರೆಂದು ತಾಯಿಗೆ ಹೇಳುವುದು ಸಾಧ್ಯ ವಿದ್ದಿದರೆ! ತಿಂಡಿ ಮಾಡಿಡುವಂತಿಲ್ಲ, ಏನೇ ಆಗಲಿ, ಇ ವ ತ್ತು ಅವರನ್ನು ಹಾಗೆಯೇ ಕಳುಹಬಾರದು, ತಾಯಿ ಆಕ್ಷೇಪಿಸಲಾರಳು, ಆಕ್ಷೇಪಿಸಿದರೂ ಅದು ದೊಡ್ಡ ವಿಷಯವಲ್ಲ. ಇವತ್ತಲ್ಲ ನಾಳೆ ತಿಳಿಯಲೇಬೇಕು ತಾನೆ ? - ಇವತ್ತು ಒಂದೇದಿನ ರಜಾ, ನಾಳೆಯಿಂದ ಕಾಲೇಜು, ಇನ್ನು ಕೆಲವೇ, ತಿಂಗಳಲ್ಲಿ ಪರೀಕ್ಷೆ, ಅದು ಮುಗಿಯುವ ಸಮಯದಲ್ಲೇ ಅಣ್ಣ ರಂಗರಾಜ ಹಿಂತಿರುಗಬಹುದು.... - ಇವರು ಎಷ್ಟು ಹೊತ್ತಿಗೆ ಬರುವರೊ? ಗಾಡಿ ಮೈಸೂರು ಸೇರುವುದು - ಎಂಟೂವರೆ ಗಂಟೆಗಿರಬೇಕು, ಅಲ್ಲಿಂದ ಹಾಸ್ಟೆಲಿಗೆ, ಸ್ನಾನಗೀನ ಮುಗಿಸಿ ಕೊಂಡು ನಿಧಾನವಾಗಿ ಇಲ್ಲಿಗೆ, ಹತ್ತು ಘಂಟೆಗೆ ? ಹನ್ನೊಂದಕ್ಕೆ ? ಮಧ್ಯಾಹ್ನವೇ ಆಗುವುದೋ ಏನೋ, 'ಇಲ್ಲೇ ಊಟಕ್ಕೇಳಿ,' ಎಂದುಬಿಡಬೇಕು. ಆದುದಾಗಲಿ. ಆದರೆ, ತಾಯಿ ಏನೆನ್ನುವರೋ ? ಬಡವರ ಮನೆ ಅಡುಗೆ.... ...ಎಚ್ಚರಗೊಂಡ ಜಯರಾಮು ಮಲಗಿದಲ್ಲಿಂದಲೇ ಕೇಳಿದ :. - “ಘಂಟೆ ಎಷ್ಟಕ್ಕಾ ?” ವಿಶಾಲಾಕ್ಷಿ ಮೇಜಿನ ಬಳಿಗೆ ಬಂದು, ತನ್ನ ಕೈಗಡಿಯಾರವನ್ನು ನೋಡಿ, ಅಂದಳು: “ಆರೂ ಇಪ್ಪತ್ತು.” - “ಏಳೋಣ ಹಾಗಾದರೆ,” ಎಂದು ಎದ್ದು ಕುಳಿತು, ಜಯರಾಮು ಕಣ್ಣು ಹೊಸಕಿಕೊಂಡ Yid.: ಯಕಗಕರಳಕ್ಷಕರ. ಕ್ರಳ r ಇಳ: :!:4 L,

: < .' -+: -7.:-

- ಜ.