೧೬೨ -1 LL +4x-kwdlySnacks - ೪. - : Rs ವಿಶಾಲಾಕ್ಷಿ ಕೆಲವರೆಂದರು: ಅಮೆರಿಕದವರೇ ಈ ರೋಗಾಣುಗಳನ್ನು ಏಷ್ಯಾಖಂಡದಲ್ಲಿ ಹರಡಿರ ಬೇಕು, ಇಲ್ಲಿ ಜನ ಹುಳಗಳ ಹಾಗೆ ಸತ್ತಷ್ಣ ಅವರಿಗೆ ಸಂತೋಷ, ಜನ ಸಂಖ್ಯೆ ಹೆಚ್ಚಾದರೆ ಮಾತ್ರ ಕಮ್ಯೂನಿಸಂ ಬರೋದು !”.
- ಬೇರೆ ಕೆಲವರೆಂದರು :
“ರಷ್ಯವೇ ಮಾಡಿದ್ದರೂ ಇರಬಹುದು, ಜನ ಬೇಸತ್ತು ಸ ರ ಕಾ ರ ದ ವಿರುದ್ಧ ದಂಗೆ ಏಳಲಿ ಅಂತ. ಹಾಗೆ ಮಾಡಿದರೆ, ಕಮ್ಯೂನಿಸಮಿನ ವಿಜಯ ಸುಲಭವಾಗುತ್ತಲ್ಲ!” ಮತ್ತೂ ಕೆಲವರು-ವಿಚಾರಿಗಳು-ಹಣೆ ನೆರಿಗೆ ಕಟ್ಟಿ ಯೋಚಿಸಿದರು: , ಅಣುಬಾಂಬು, ಜಲಜನಕ ಬಾಂಬುಗಳನ್ನು ತಯಾರಿಸಬಲ್ಲ ಮಾನವ, ಇಂಥದೊಂದು ಅಂಟುಜಾಡ್ಯಕ್ಕೆ ಔಷಧ ಕಂಡುಹಿಡಿಯಲು ಅಸಮರ್ಥನೇನು ?'. - ಒಬ್ಬರಿಂದ ಇನ್ನೊಬ್ಬರಿಗೆ ಸೋಂಕಿತು ಗಾಬರಿ, ಅದರ ಜತೆಯಲ್ಲೇ ಭಯ-ಪ್ರಾಣಭಯ. ಜನ ಡಾಕ್ಟರುಗಳಲ್ಲಿಗೆ ಓಡಿದರು-ವೈದ್ಯರಲ್ಲಿಗೆ, ಹಕೀಮರಲ್ಲಿಗೆ, ಇಂಜೆಕ್ಷನಿಂದ ಎಲ್ಲವೂ ಗುಣವಾಗುವುದೆಂಬುದು ಅವರ ನಂಬಿಕೆ. ಎಷ್ಟೋ ಗಿರಾಕಿಗಳು ತಮ್ಮ ಹಳೆಯ ಬಾಕಿ ಸಲ್ಲಿಸಿದರು,' ನಗದು ಹಣದೊಡನೆಯೇ ಬಂದರು ಔಷಧಿಗೆ, ಕೋಟು ತೊಟ್ಟು, ಮಚ್ಛರು ಸುತ್ತಿ, ಡಾಕ್ಟರರೆದುರು ಸಾಲು ಗಟ್ಟಿದರು.
- ಡಾಕ್ಟರುಗಳೆಷ್ಟೋ ಜನ ಹಂಡೆಹಂಡೆಗಳಲ್ಲೇ ಔಷಧಿ ತಯಾರಿಸಿದರು ಈ ಮಿಕ್ಸ್ಚರ್, [ಕೈಗುಣ, ಅಲ್ಲಿಗೇ ಹೋಗಬೇಕು ನಾವು.] ತುಂಬಿದ ಗೋಣಿಗಳಿಗೆ ದಬ್ಬಣ ಚುಚ್ಚುವ ಹಾಗೆ, ಮನುಷ್ಯದೇಹಗಳಿಗೆ ಸೂಜಿ, ಸರ್ವ ರೋಗ ನಿವಾರಿಣಿಯಾದ ಪೆನ್ಸಿಲಿನ್, (ಪ್ರೊಗಂತೂ ಸಿದ್ದಷಧ.] ಚುಚ್ಚಿ ಚುಚ್ಚಿ ಅದೆಷ್ಟೋ ಸೂಜಿಗಳು ಮೊಂಡಾದುವು, ಮುರಿದುವು, ಚುಚ್ಚಿ ಚುಚ್ಚಿ ಡಾಕ್ಟರರ ಕೈಸೋತಿತು. ಹಣ ಎಣಿಸುವ ವ್ಯವಧಾನವೂ ಇಲ್ಲ ಯಾರಿಗೂ ನೋಟುಗಳೂ ನಾಣ್ಯಗಳೂ ಗುಡ್ಡೆಗುಡ್ಡೆ, ಈ ಡ್ರಾಯರು ತುಂಬ, ಈ ಡ್ರಾಯರು ತುಂಬ, ರೋಗಿಗಳ ಸೇವೆ ಮಾಡಿಮಾಡಿ ಎಷ್ಟೋ ಜನ ಡಾಕ್ಟರುಗಳು ಬಸವಳಿ ದರು, ತಾವೂ ಮಲಗಿದರು ಬೊಖ್ಖೋಖ್ ಎಂದು ಕೆಮ್ಮು, ಜನರಿಗಿನ್ನು
Girl-Zwa+ಒy • L +! GK: * . or