ಪುಟ:VISHAALAAKSHI - Niranjana.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಆಫ್ ******

      • *

ಡAಳು Klik " ಇಸಿಪಿ4:ಕilaksಜ?!! ಮiLL--------------

»grkJ$xrwx.

ಪ್ರೇಮಕ್ಕೆ ಕಣ್ಣಿಲ್ಲ - ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ.... ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ.... - ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ. ನಾಗಮ್ಮ ಅಂದಿದ್ದರು: 'ನಿಮ್ಮ ತಂದೇನ ಕೇಳಿನೋಡು.' ವಿದ್ಯಾರ್ಥಿನಿಯಾಗಿದ್ದ ವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : ಆಗಲಿ, ಅದಕ್ಕೇನು ? ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - 'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು.: ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ, ್ರಸ{

ರದಳಸುವುದು 181-, J ಮದ, Wid. (Feb•••••••••••hk ಸt+ಘhttsik

4}ಕು-ಮನ

1 - -