ಕ್ ** ** * ** *.* .:
- g'- ಳನ್ನು ಸುಸ ..
೨೬ ೨ .4.1 : | + | “ಬಾರೇ, ಬಾರೇ ! ಒಂದು ಯುಗವಾಯ್ತಲ್ಲೇ ನಿನ್ನನ್ನು ನೋಡಿ ! ಈಗಲೇ ಪರೀಕ್ಷೆಗೆ ಓದೋಕೆ ಶುರುಮಾಡಿಟ್ಟಿದೀಯೋ ಹೇಗೆ ? ಹೂಂ, ಅಂತೂ. ಬಂದೆಯಲ್ಲ!” ಸೊಸೆ ಸ್ವಾಗತ ಬಯಸುತ್ತಿದ್ದುದು ಯಾರಿಗೆ ? ಆ ಮಟಮಟ ಮಧ್ಯಾಹ್ನ ದಲ್ಲಿ ಮನೆಗೆ ಬಂದವರು ಯಾರು? -ಎಂದು ತಿಳಿಯಲು, ಭಾಗೀರಥಮ್ಮ ಅಡುಗೆ - ಮನೆಯಿಂದ ಹೊರಬಂದರು, ಒಗ್ಗರಣೆ ಕೊಡಲೆಂದು ಕೈಯಲ್ಲಿದ್ದ ಸೌಟನ್ನು ಹಾಗೆಯೇ ಕೆಳಕ್ಕಿರಿಸಿ, ಬಂದಿದ್ದವಳು ವಿಶಾಲಾಕ್ಷಿ ಅವಳನ್ನು, “ನೀನಾ?' ಎಂಬರ್ಥದಲ್ಲಿ ನಸುನಗುತ್ತ ನೋಡಿ ಅವರು - ಒಳಹೋದರು... ಬಿಸಿಲಿನ ಬಳಲಿಕೆಯನ್ನು ನಿವಾಳಿಸಿ ತೆಗೆದು ಒಗೆಯುವವಳಂತೆ, ವಿಶಾಲಾಕ್ಷಿ “ಉಶ್ !” ಎಂದಳು. ನಡುಮನೆಗೆ ಸೋಫಾಗಳು ಬಂದಿದ್ದುವು, ಗೆಳತಿಯನ್ನು ಕುಳಿತಿರಹೇಳಿ ನರ್ಮದಾ ಅಂದಳು : “ತಾಳು, ಫ್ಯಾನ್ ಹಾಕೀನಿ.” ಮೂಲೆಯಲ್ಲಿದ್ದ ವಿದ್ಯುತ್ ಬೀಸಣಿಗೆ ತನ್ನ ಪಂಜರದೊಳಗೆ ಗಿರಗಿರ ಎಂದು ತಿರುಗಿತು. (ಹಿಂದೆ ಆಗಿದ್ದರೆ ಸೋಫಾಗಳಿಗೆ ಸಂಬಂಧಿಸಿಯೇ ಮಾತು ಆರಂಭವಾಗು. ತಿತ್ತು, ನರ್ಮದೆಯೇ ಅನ್ನುತ್ತಿದ್ದಳು : “ಹೊಸದು ಕಣೇ, ಒಂದು ಸೆಟ್. ಕೊಂಡುಕೊಂಡ್ಡಿ, ಇಷ್ಟು ಬಿತ್ತು-ಅಷ್ಟು ಬಿತ್ತು' ಅಂತ.] ...:45 • : ", . ' ... - ನಗರದ ರ್ಪವಾಸ ರ್ಪಸರಣ '+