ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಿ

  • kf--xT #

ವಿಶಾಲಾಕ್ಷಿ ನಾನು ಹೇಳೋದಿಲ್ಲ, ಆದರೆ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಬರೆಯಲೇಬೇಕು.” ತಕ್ಷಣವೆ ಏನಂತೀಯಾ?” ಎಂದು ಕೇಳಿ, ಒಪ್ಪಿಗೆ ನಿರೀಕ್ಷಿಸುವವರಲ್ಲ ಆ ಪ್ರಾಧ್ಯಪಕರು. ಮತ್ತೂ ಅಂದರು, ಮುಗುಳುನಕ್ಕು : - “ಯೋಚಿಸಿನೋಡಿ.” | ಅವರ ಕಳವಳ ವಿಶಾಲಾಕ್ಷಿಗೆ ಅರ್ಥವಾಗಲಿಲ್ಲ. ತಾನು ಮಾಡಿದುದು ತಪ್ಪೆಂದು ಒಪ್ಪುವುದಕ್ಕೂ ಅವಳು ಸಿದ್ಧಳಾಗಿರಲಿಲ್ಲ. ಆದರೆ, ಪ್ರಾಧ್ಯಾಪಕರಿಗೆ ಇದಿರಾಡುವಂತೆಯೂ ಇರಲಿಲ್ಲ. ತಮ್ಮ ಕಟುಮಾತುಗಳಿಂದ ಆಗಿರಬಹುದಾದ ನೋವಿಗೆ ಔಷಧ ಲೇಪನ ಎಂದು ಪ್ರಾಧ್ಯಾಪಕರೆಂದರು; “ನೀನು ಬರೆಯೋ ಪ್ರಯತ್ನ ಮಾಡಿದೀಯಾ ಅನ್ನೋದಂತೂ ಬಹಳ ಸಂತೋಷದ ವಿಷಯ. Keep it up !” ಮತ್ತೊಮ್ಮೆ ಮಂದಹಾಸ ಬೀರಿ, “ಗುಡ್‌ನೈಟ್”, ಎಂದು, ಅವರು ಹೊರಟೇಬಿಟ್ಟರು. : ಅವರ ಕೊನೆಯಮಾತು ಆಪ್ಯಾಯಮಾನವಾಗಿತ್ತು, ವಿಶಾಲಾಕ್ಷಿಯೂ ಅಂದಳು : “ಗುಡ್‌ನೈಟ್.” [ಬಿಸಿಲಿನ ಝಳ ಇನ್ನೂ ಇದ್ದರೇನಂತೆ ? ಮಾರನೆಯ ದಿನದವರೆಗೂ ಮತ್ತೆ ಭೇಟಿ ಇಲ್ಲವೆಂದಾದರೆ, ಬೀಳ್ಕೊಡುಗೆಯ ವಂದನೆ ಗುಡ್ನೈಟ್' ಎಂದೇ.] ಪ್ರಾಧ್ಯಾಪಕರ ಮಾತಿನ ಭರಕ್ಕೆ ವಿಶಾಲಾಕ್ಷಿಯ ಪಾದಗಳು ಬೇರುಬಿಟ್ಟ ದ್ದುವು, ಅವುಗಳನ್ನು ಕೀಳು, ಆಕೆ ತನ್ನ ಹಾದಿ ಹಿಡಿದಳು.

  • ....ಮಹಾರಾಣಿ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದುವು. ಆದರೂ `ಅಧ್ಯಾಪಕ ವರ್ಗದ ಕೊಠಡಿಯಲ್ಲಿ, ವಿರಾಮದ ಹರಟೆಯಲ್ಲಿ ನಿರತರಾಗಿದ್ದ ಹಲವ ರಿದ್ದರು, ಹೊಸದಾಗಿ ಬಂದಿದ್ದ ಇಬ್ಬರ ಹೊರತಾಗಿ ಉಳಿದವರೆಲ್ಲ ಹಳೆಯ ಪರಿಚಿತರು ಸ್ನೇಹಿತರು.

-“ಹಾದಿ ತಪ್ಪಿ ಬಂದ್ವಿಟ್ಟರೇ ಈಕಡೆ ?” -ಚಟ, ಬೇಡವೆಂದರೂ ಕಾಲುಗಳು ಈ ದಿಕ್ಕಿಗೇ ತಿರುಗಿರಬೇಕು? ರ್< ಗKE .. .. -- . ಈ��2: 2 - . sh s ..