ಪುಟ:Vimoochane.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅಜ್ಜೀನ ನೋಡ್ಕೊಳ್ಳೋದು."

"ಅದ್ಸರಿ ,ಅದಾದ್ಮೇಲೆ? ಆಜ್ಜಿಗೆ ಗುಣವಾದ್ಮೇಲೆ?"

ಅದೊಂದು ಮುಖ್ಯ ಪ್ರಶ್ನೆ.ನಾನು ಮುಂದೇನು ಮಾಡ ಬೇಕು? ಮುಂದೇನಾಗಬೇಕು? ಜೀವನದಲ್ಲಿ ನಾನು ಸಾಧಿಸ ಬೇಕಾದ್ದೇನಾದರೂ ಉಂಟೆ? ಏನಾದರೂ ಉಂಟೆ ?

ನಾನು ಸುಮ್ಮನಿದ್ದೆ. ಅತ್ತಿಗೆ 'ಸ್ಟವ್ ' ಹಚ್ಚಿದಳು. ಅದರ ಸಪ್ಪಳ ಹಿತಕರವಾಗಿ ಹೊರಡುತ್ತಿತ್ತು. ಆ ಏಕಪ್ರಕಾರದ ಸ್ವರದೆದುರು ನನ್ನ ವಿಚಾರತರಂಗಗಳು ದೂರ ಸರಿಯುತ್ತಿದ್ದುವು, ಇನ್ನು 'ಚಾ.' ಅತ್ತಿಗೆಯ ಕೈಯಿಂದ ರುಚಿರುಚಿಯಾದ ಇನ್ನೊಂದು ಕಪ್ಪು ಚಾ ...

ಯಾರೋ ತಂತಿ ಕಳುಹಿಸಿದ್ದರು

"ಅಜ್ಜಿಗೆ ಸಕತ್ ಕಾಹಿಲೆ. ಒಡನೆಯೆ ಹೊರಟು ಬಾ.”

ಶೀಲ ಅದೇನೆಂದು ಕೇಳಿದಳು. ನಾನು ಉತ್ತರವೀಯಲಿಲ್ಲ. ಒಂದು ಕೈಚೀಲದೊಳಕ್ಕೆ ನನ್ನ ಸೂಟನ್ನು ತುರುಕಿದೆ. ಪಾಯಜಾಮೆ ಷರಟುಗಳ ಮೇಲೆ ಒಂದು ಸ್ವೆಟರ್ ತೊಟ್ಟುಕೊಂಡೆ. ಸ್ವೆಟರಿನ ಕೆಳಗೆ ಜೇಬಿನೊಳಗೆ ನೂರರಷ್ಟು ಹಣವಿತ್ತು.

ಅತ್ತಿಗೆ ನೋಡುತ್ತಲೇ ಇದ್ದಳು. ಅವಳ ರೋಗಿಯಾದ ತಂದೆಯೂ ನೋಡುತ್ತಲೇ ಇದ್ದ. ನಾನು ಮುಖದ ಭಾವನೆಗಳನ್ನು ಹತ್ತಿಕ್ಕಿಕೊಳ್ಳುತ್ತಾ ಬಾಗಿಲಿನಿಂದ ಹೊರಬಂದೆ.

"ಬರ್ತೀನಿ ಅತ್ತಿಗೆ ತಿರ್ಗಾ ಬರ್ತೀನಿ."

ಆದರೆ ನನ್ನ ಸ್ವರದಲ್ಲಿ ನನಗೇ ನಂಬಿಕೆ ಇರಲಿಲ್ಲ.

....ಆ ಮೇಲೆ ಒಂದು ಘಂಟೆಯ ಹೊತ್ತಿನಲ್ಲಿ ರೈಲು ಹೊರ ಟಿತು. ಅಜ್ಜಿಯಿಂದ ತಂತಿ ಬಂದಿತ್ತಲ್ಲವೆ? ಹಾದಿಯಲ್ಲಿ ತೊಂದರೆ ಯಾಗಬಾರದೆಂದು ನಾನು ಟಿಕೇಟು ಪಡೆದುಕೊಂಡೇ ಹೊರಟೆ.

ಎಂಜಿನ್ ಬೊಂಬಾಯಿಗೆ ವಿದಾಯ ಹೇಳಿತು. ಕಿಟಕಿಯಿಂದ ಹೊರಕ್ಕೆ ನಾನು ಇಣಿಕಿನೋಡಿದೆ. ಗಾಡಿ ಚಲಿಸುತ್ತಿತ್ತು, ಅತ್ತ ಹೆಬ್ಬಾಗಿಲನ್ನು ದಾಟಿ ಯಾರೊ ಓಡಿ ಬರುತ್ತಿದ್ದರು. ವ್ಯಕ್ತಿ ಸವಿಾಪಿಸಿ