ಪುಟ:Vimoochane.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತೊಟ್ಟಿಯ ಕೂಸಾಗಿದ್ದ. ಮದರಾಸಿನ ಬೀದಿಗಳಲ್ಲಿ ಹಾಗೆ ಬೆಳೆದ ಚಲಂ ,ಒಂದು ದಿನವೂ ಮಣ್ಣು ಹೊತ್ತಿರಲಿಲ್ಲ. ದೊಡ್ಡ ಮನುಷ್ಯನಾಗಲು ಯತ್ನಿಸೆಂದು ಯಾವ ಹಿರಿಯರೂ ಅವನಿಗೆ ಪ್ರೇರೇ ಪಿಸಿರಲಿಲ್ಲ. ನಡು ನಡುವೆ ಅವನು ಹೊಟ್ಟೆಯ ಪಾಡಿಗಾಗಿ ಆ ಕೆಲಸ ಈ ಕೆಲಸ ಕೈಕೊಂಡ. ಆದರೆ ಆಗಾಗ್ಗೆ ಅವನ ಅತಿಥಿಯಾಗುತಿದ್ದ ದೀರ್ಘ ಉಪವಾಸ, ಕೈ ಚಳಕದ ವೃತ್ತಿಗೆ ಅವನನ್ನು ತಳ್ಳಿತು. ಆ ಪ್ರತಿಭೆ ಅವನಲ್ಲಿ ಲೀಲಾಜಾಲವಾಗಿ ಪ್ರಕಟಗೊಂಡು ಅವನ ಮೈಗೂಡಿತು.

"ಜೀವನ ಒಮ್ಮೆಯೂ ನನ್ನನ್ನು ಕಂಡು ಮುಗುಳ್ನಕೃದ್ದಿಲ್ಲ ಶೇಖರ್.

ಹಾಗಿರೋದರಿಂದ ಮುಗುಳ್ನಗೋದು ನನಗಾದರೂ ಹ್ಯಾಗೆ ತಿಳಿದಿರ್ಬೇಕು ಹೇಳು?....."

"ಎಲ್ಲರ ಕತೆಯೂ ಹಾಗೆಯೇ."

ಹಾಗೆ ಉತ್ತರ ಕೊಡುತ್ತ ನಾನು ಅನುಭವದಿಂದ ಕಂಡು

ಬಂದುದನ್ನೆಲ್ಲ ಸಾಮಾನ್ಯ ನಿಯಮವಾಗಿ ತೋರಿಸಲು ಯತ್ನಿಸುತ್ತಿದ್ದೆ. ಆದರೆ ಆ ತತ್ವಜ್ಞಾನ ಚಲಂಗೆ ಅರ್ಥವಾಗುತ್ತಿರಲಿಲ್ಲ. ಆತ ಮಾತು ಗಾರನಾಗಿರಲಿಲ್ಲ.

ಚಲಂನನ್ನು ನಮ್ಮ ಮನೆಗೆ ಆಹ್ವಾನಿಸಿದೆ.

"ಇಲ್ಲಿಯೇ ಇರಬಹುದಲ್ಲಾ," ಎಂದೆ.

ಅವನು ಒಪ್ಪಲಿಲ್ಲ.

"ನಾವೆಲ್ಲಾ ಜತೆಯಾಗಿ ಇರೋದು ಸರಿಯಲ್ಲ ಶೇಖರ್. ಅದು

ಅಫಾಯದ ಹಾದಿ. ನಮ್ಮ ಸಂಘಟನೆ ಯಾವಾಗಲೂ ವಿಂಗಡ ವಿಂಗಡವಾಗಿ ಬೇರೆ ಬೇರೆಯಾಗಿ ಇರಬೇಕು."

ಆದು, ಅನುಭವದ ಆಳದಿಂದ ಬಂದ ಮಾತು.

"ಸರಿ,ಚಲಂ."

ಚಲಂ ನಮ್ಮ ಮನೆಯಲ್ಲಿ ಇರಲು ಇಚ್ಚಿಸಲಿಲ್ಲ. ಆದರೆ ಆತ,

ನಮ್ಮ ಊರಿನಲ್ಲಿ ಇದ್ದಾಗಲೆಲ್ಲ ಒಬ್ಬಾಕೆಯ ಮನೆಯಲ್ಲಿರು ತಿದ್ದ. ಊರ ವಿಸ್ತರಣದಲ್ಲಿ ಆ ಮನೆಯಿತ್ತು.